ETV Bharat / bharat

2018-19ನೇ ಸಾಲಿನ ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ. 6.1: ಕೇಂದ್ರ ಸರ್ಕಾರದ ಹೊಸ ಲೆಕ್ಕಾಚಾರ

author img

By

Published : Jan 31, 2020, 8:27 PM IST

Updated : Feb 4, 2020, 1:30 AM IST

2018-19ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಶೇ. 6.1 ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೊದಲು 6.8 ಕ್ಕೆ ನಿಗದಿ ಮಾಡಿದ್ದ ಕೇಂದ್ರ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಜಿಡಿಪಿಯನ್ನ ಮರು ನಿಗದಿ ಮಾಡಿದೆ

GDP growth rate for 2018-19 revised downwards to 6.1%
2018-19ನೇ ಸಾಲಿನ ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ. 6.1: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: 2018-19ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಶೇ. 6.1 ರಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಆ ವರ್ಷದಲ್ಲಿ ಜಿಡಿಪಿ ಶೇ. 6.8 ಅಭಿವೃದ್ಧಿ ಹೊಂದಿರಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಈಗ ವಿವಿಧ ಕಾರಣಗಳಿಂದಾಗಿ ಆ ದರವನ್ನು ಪರಿಷ್ಕರಿಸಿದೆ.

ಗಣಿಗಾರಿಕೆ, ಕೃಷಿ, ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳವಣಿಗೆ ಕುಂಠಿತಗೊಂಡಿದ್ದರಿಂದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ನ್ಯಾಷನಲ್ ಅಕೌಂಟ್ ಮಾಹಿತಿಯಲ್ಲಿ ಈ ಅಂಶ ಸ್ಪಷ್ಟವಾಗಿದೆ. “ನೈಜ ಜಿಡಿಪಿ ಪ್ರಮಾಣವು 2018-19ರ ಸಾಲಿನಲ್ಲಿ 139.81 ಲಕ್ಷ ಕೋಟಿ ಇದೆ. 2017-18ರ ಸಾಲಿನಲ್ಲಿ 131.75 ಲಕ್ಷ ಕೋಟಿ ಇತ್ತು ಎಂದು ಪರಿಷ್ಕೃತ ವರದಿಯಲ್ಲಿ ಅಂಕಿ ಅಂಶ ನೀಡಲಾಗಿದೆ.

2017ಕ್ಕೆ ಹೋಲಿಸಿದರೆ 2018ರಲ್ಲಿ ಜಿಡಿಪಿ ಅಭಿವೃದ್ಧಿ ಕಡಿಮೆಯಾಗಲು ವಿವಿಧ ವಲಯಗಳ ಕುಂಠಿತ ಬೆಳವಣಿಗೆಯೇ ಕಾರಣವೆಂದು ಗ್ರಹಿಸಲಾಗಿದೆ. ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ, ತಯಾರಿಕೆ, ವಿದ್ಯುತ್, ಅನಿಲ, ಜಲ ಪೂರೈಕೆ, ಹಣಕಾಸು ಸೇವೆ, ಸಾರ್ವಜನಿಕ ಆಡಳಿತ, ರಕ್ಷಣಾ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿಲ್ಲದಿರುವುದು ಜಿಡಿಪಿಯ ಬೆಳವಣಿಗೆಗೆ ತಡೆಗೋಡೆ ಆಗಿತ್ತು ಎನ್ನಲಾಗಿದೆ.

ಪ್ರಾಥಮಿಕ ವಲಯಗಳು ಎಂದು ಗುರುತಿಸಲಾಗಿರುವ ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ ಕ್ಷೇತ್ರಗಳು ಒಟ್ಟಾರೆ ಶೇ. 1ಷ್ಟು ಮಾತ್ರ ಬೆಳವಣಿಗೆ ಕಂಡಿದ್ದವು. 2017-18ರ ಹಣಕಾಸು ವರ್ಷದಲ್ಲಿ ಈ ವಲಯ ಶೇ. 5.8ರಷ್ಟು ಅಭಿವೃದ್ಧಿ ಸಾಧಿಸಿತ್ತು.

ಇನ್ನು, ನಾಮಿನಲ್ ನೆಟ್ ನ್ಯಾಷನಲ್ ಇನ್​ಕಮ್ (ನಾಮಮಾತ್ರ ನಿವ್ವಳ ರಾಷ್ಟ್ರೀಯ ಆದಾಯ) ಈಗಿನ ದರದಲ್ಲಿ 2018-19ರ ಸಾಲಿನಲ್ಲಿ 167.89 ಲಕ್ಷ ಕೋಟಿ ಇದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಈ ಪ್ರಮಾಣ 151.50 ಲಕ್ಷ ಕೋಟಿ ಇತ್ತು. ಈ ಅಂಕಿ ಅಂಶದಂತೆ 2017-18ರಲ್ಲಿ ಶೇ. 11.2 ರಷ್ಟು ಎನ್​ಎನ್​ಐ ಅಭಿವೃದ್ಧಿ ಹೊಂದಿದೆ. 2018-19ರಲ್ಲಿ ಶೇ. 10.8ರಷ್ಟು ಅಭಿವೃದ್ಧಿ ಹೊಂದಿರುವುದು ಕಂಡುಬಂದಿದೆ.

ಪರಿಷ್ಕೃತ ನ್ಯಾಷನಲ್ ಅಕೌಂಟ್ ದತ್ತಾಂಶದ ಪ್ರಕಾರ ಈ ಎರಡು ವರ್ಷದಲ್ಲಿ ತಲಾದಾಯವು 1,15,293 ಮತ್ತು 1,26,521 ರೂಪಾಯಿ ಇದೆ ಎಂದು ಅಂದಾಜು ಮಾಡಲಾಗಿದೆ.

Last Updated : Feb 4, 2020, 1:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.