ETV Bharat / bharat

ಪರಿಸರ ಮತ್ತು ಆಧುನಿಕ ಅಭಿವೃದ್ಧಿ ಬಗ್ಗೆ ಗಾಂಧೀಜಿ ದೃಷ್ಟಿಕೋನಗಳು

ಪರಿಸರ ಶೋಷಣೆ ಹೊರತಾದ ಅಭಿವೃದ್ಧಿ ಪರಿಕಲ್ಪನೆ ಗಾಂಧೀಜಿಯದ್ದಾಗಿತ್ತು. ಅಲ್ಲದೆ ಯಂತ್ರಗಳ ಹೆಚ್ಚು ಬಳಕೆಯನ್ನ ಗಾಂಧಿ ವಿರೋಧಿಸುತ್ತಿದ್ದರು. ಹೆಚ್ಚು ಇಂಗಾಲದ ಡೈ ಆಕ್ಸೈಡ್​​ಗಳನ್ನ ಹೊರಬಿಡುವ ಯಂತ್ರಗಳು, ವಾಹನಗಳು, ಕೈಗಾರಿಕೆಗಳು ಪರಿಸರವನ್ನ ಹಾಳು ಮಾಡುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಇವನ್ನೇ ಹೆಚ್ಚು ಅಳವಡಿಸಿಕೊಂಡಿರುವ ಆಧುನಿಕ ಪ್ರಪಂಚ ಗಾಂಧೀಜಿ ಅವರ ಸಲಹೆಗೆ ವಿರುದ್ಧವಾಗಿದೆ.

ಗಾಂಧೀಜಿ
author img

By

Published : Sep 9, 2019, 7:40 AM IST

ಮಹಾತ್ಮ ಗಾಂಧೀಜಿಯವರ ಜೀವಿತ ಕಾಲದಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಹಾನಿಯಂತ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಪರಿಸರದ ಬಗ್ಗೆ ಗಾಂಧೀಜಿ ಎಲ್ಲೂ ಉಲ್ಲೇಖ ಮಾಡಿಲ್ಲ ಎಂಬುದು ಆಶ್ವರ್ಯಕರ ಸಂಗತಿಯೇನಲ್ಲ. ಆದರೂ ಅವರ ದೃಷ್ಟಿಕೋನ ಪರಿಸರ ಸ್ನೇಹಿಯಾಗಿತ್ತು. ಪರಿಸರ ರಕ್ಷಣೆ ಅವರ ತತ್ವಗಳಲ್ಲೇ ಅಡಕವಾಗಿತ್ತು.

ತಮ್ಮನ ಪಾಲಿಸುವ ಅನುಯಾಯಿಗಳು ಮತ್ತು ವಿವಿದ ಆಶ್ರಮಗಳಲ್ಲಿ ಅವರೊಂದಿಗೆ ಜೀವಿಸುವಮತೆ ಪ್ರತಿಯೊಬ್ಬರು ಕೆಲವು ಪ್ರತಿಜ್ಞೆ ಮಾಡಬೇಕಿತ್ತು. ಎಲ್ಲರೂ ಸತ್ಯಕ್ಕೆ ಬದ್ಧರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಿತ್ತು. ಅಲ್ಲದೆ ಅಹಿಂಸಾ ತತ್ವಕ್ಕೆ ಬದ್ಧರಾಗಿರಬೇಕಿತ್ತು. ಗೋವುಗಳ ರಕ್ಷಣೆ ಮಹಾತ್ಮ ಗಾಂಧೀಜಿಗೆ ಪ್ರಾಣಿ ಮೇಲಿನ ಗೌರವ ಹೆಚ್ಚಿಸಿತ್ತು. ಈ ವಿಚಾರದಲ್ಲಿ ಅವರು ಎಷ್ಟು ಕಾಳಜಿ ಹೊಂದಿದ್ದರೆಂದರೆ, ಹಸುವಿನ ಹಾಲು ಕೇವಲ ಅದರ ಕರುವಿಗೆ ಮಾತ್ರ ಸೇರಿದ್ದು ಎಂದು ಹೇಳುತ್ತಿದ್ದರು.

ಒಂದು ಬಾರಿ ಅನಾರೋಗ್ಯಕ್ಕೆ ಒಳಗಾಗಿದ್ದ ಗಾಂಧೀಜಿಗೆ ವೈದ್ಯರು ಮೇಕೆ ಹಾಲು ಸೇವಿಸಲು ತಿಳಿಸಿದರು. ಆದರೆ ಗಾಂಧೀಜಿ ಅವರ ಸಲಹೆಯನ್ನ ನಿರಾಕರಿಸಿರು. ಅಂತಿಮವಾಗಿ ಪತ್ನಿ ಕಸ್ತೂರಿ ಬಾ ಅವರ ಉತ್ತಾಯಕ್ಕೆ ಮೇಕೆ ಹಾಲು ಸೇವಿಸಲು ಒಪ್ಪಿದರು.

ಬ್ರಹ್ಮಚರ್ಯದ ಪಾಲನೆ ಎಂದರೆ ಓರ್ವ ವ್ಯಕ್ತಿ ತನ್ನ ಭಾವೋದ್ವೇಗ ಮತ್ತು ಆಲೋಚನೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು. ಓರ್ವ ಪುರುಷ ಅಥವಾ ಮಹಿಳೆ ವಿವಾಹದ ನಂತರವೂ ಜೀವನ ಪೂರ್ತಿ ಪರಿಶುದ್ಧವಾದ ಸಂಬಂಧ ಹೊಂದಿರಬೇಕು ಎಂಬುದು ಗಾಂಧೀಜಿ ಅಭಿಪ್ರಾಯವಾಗಿತ್ತು.

ಪರಿಸರ ಮಾನವನ ದೈನಿಂದನ ಜೀವನಕ್ಕೆ ಬೇಕಾದ ಹಲವು ಅಗತ್ಯತೆಗಳನ್ನ ಪೂರೈಸುತ್ತದೆ ಎಂದು ಗಾಂಧಿ ನಂಬಿದ್ದರು. ಸರಳವಾದ ಜೀವನವನ್ನ ಇಷ್ಟಪಡುತ್ತಿದ್ದ ಗಾಂಧೀಜಿ ಪರಿಸರದ ಮೇಲೆ ಒತ್ತಡ ಹೇರುವುದನ್ನ ವಿರೋಧಿಸುತ್ತಿದ್ದರು.

ಸ್ವದೇಶಿ ತತ್ವವನ್ನ ಪಾಲಿಸುತ್ತಿದ್ದ ಗಾಂಧಿ ಕಾರ್ಮಿಕರಿಂದ ಉತ್ಪಾದಿಸಲ್ಪಡುತ್ತಿದ್ದ ವಸ್ತುಗಳ ಬಳಕೆಯನ್ನ ವಿರೋಧಿಸುತ್ತಿದ್ದರು. ಭಾರತದಲ್ಲಿ ಕೈಮಗ್ಗದಿಂದ ಹೆಣೆದ ಬಟ್ಟೆಗಳನನ್ನೇ ಅವರು ಧರಿಸುತ್ತಿದ್ದರು. ಯಂತ್ರೋಪಕರಣಗಳನ್ನ ವಿರೋಧಿಸುತ್ತಿದ್ದ ಭಾರತ, ಬ್ರಿಟಿಷರ್​ ಮಾರುಕಟ್ಟೆಯನ್ನ ಅವಲಂಬಿಸಿರಬೇಕೆ ಹೊರತು ಬ್ರಿಟಿಷರ ಯಂತ್ರೋಪಕರಣಗಳನ್ನಲ್ಲ ಎಂದು ಹೇಳುತ್ತಿದ್ದರು. ಮ್ಯಾಂಚೆಸ್ಟರ್​ನ ಕಾರ್ಖಾನೆಗಳನ್ನ ಭಾರತಕ್ಕೆ ಕರೆತರುವ ಬದಲು, ಮ್ಯಾಂಚೆಸ್ಟರ್​ನಲ್ಲಿ ಉತ್ಪಾದಿಸುವ ವಸ್ತುಗಳನ್ನ ಕೊಂಡುಕೊಳ್ಳುವುದು ಉತ್ತಮ ಎಂಬುದು ಅವರ ಅಭಿಪ್ರಾಯವಾಗಿತ್ತು. ಅಲ್ಲದೆ ಯಂತ್ರೋಪಕರಣಗಳು ದೇಶದ ಜನರನ್ನ ಗುಲಾಮರನ್ನಾಗಿ ಮಾಡುತ್ತವೆ. ಹಣ ವಿಷವಿದ್ದಂತೆ ಎಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದರು.

ಪರಿಸರ ಶೋಷಣೆ ಹೊರತಾದ ಅಭಿವೃದ್ಧಿ ಪರಿಕಲ್ಪನೆ ಗಾಂಧೀಜಿಯದ್ದಾಗಿತ್ತು. ಅಲ್ಲದೆ ಯಂತ್ರಗಳ ಹೆಚ್ಚು ಬಳಕೆಯನ್ನ ಗಾಂಧಿ ವಿರೋಧಿಸುತ್ತಿದ್ದರು. ಹೆಚ್ಚು ಇಂಗಾಲದ ಡೈ ಆಕ್ಸೈಡ್​​ಗಳನ್ನ ಹೊರ ಬಿಡುವ ಯಂತ್ರಗಳು, ವಾಹನಗಳು, ಕೈಗಾರಿಕೆಗಳು ಪರಿಸರವನ್ನ ಹಾಳು ಮಾಡುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಇವನ್ನೇ ಹೆಚ್ಚು ಅಳವಡಿಸಿಕೊಂಡಿರುವ ಆಧುನಿಕ ಪ್ರಪಂಚ ಗಾಂಧೀಜಿ ಅವರ ಸಲಹೆಗೆ ವಿರುದ್ಧವಾಗಿದೆ.

ನವ-ಉದಾರವಾದಿ ನೀತಿಗಳೊಂದಿಗೆ ಭಾರತವನ್ನ ಅಭಿವೃದ್ಧಿ ಪಥದಲ್ಲಿ ಸಾಗಿಸಿದ ಆಧುನಿಕ ಅರ್ಥಶಾಸ್ತ್ರಜ್ಞ ಮತ್ತು ಭಾರತದ ಪ್ರಧಾನಿ ಮನಮೋಹನ್​ ಸಿಂಗ್ ಸರ್ಕಾರದ ಅವಧಿಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಆಧುನಿಕ ಅಭಿವೃದ್ಧಿ ಸಂದಿಗ್ಧತೆಯನ್ನು ಉತ್ತಮವಾಗಿ ತಿಳಿಸಿದ್ದಾರೆ.

2007-08ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಮಾನವ ಅಭಿವೃದ್ಧಿ ವರದಿಯಲ್ಲಿ ತಿಳಿಸಿರುವಂತೆ ಅಭಿವೃದ್ಧಿ ಹೊಂದಿದ ದೇಶಗಳು 2050ರ ಒಳಗಾಗಿ ಇಂಗಾಲ ಹೊರಸೂಸುವ ಪ್ರಮಾಣವನ್ನ ಶೇಕಡಾ 80 ರಷ್ಟು ಕಡಿತಗೊಳಿಸಲಿವೆ. ಇನ್ನು ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾ ಶೇ. 20ರಷ್ಟು ಇಂಗಾಲದ ಪ್ರಮಾಣವನ್ನ ಕಡಿತಗೊಳಿಸಲಿವೆ ಎಂದು ಶಿಫಾರಸು ಮಾಡಲಾಗಿತ್ತು.

ಆದರೆ ಈ ಶಿಪಾರಸ್ಸನ್ನ ಅಂದು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಈ ಶಿಫಾರಸು ದೋಷಪೂರಿತವಾಗಿದೆ ಎಂದಿದ್ದರು. ಅಮೆರಿಕ ಪ್ರತೀ ವರ್ಷ 20 ಟನ್​ ಕಾರ್ಬನ್​ ಹೊರಬಿಡುತ್ತಿದ್ದು, 80 ರಷ್ಟು ಕಡಿತಗೊಳಿಸುತ್ತದೆ ಎಂದರೆ 3 ಟನ್​ ಆಗುತ್ತದೆ. ಆದರೆ ಭಾರತ 1.2 ಟನ್​ ಕಾರ್ಬನ್​ ಹೊರಬಿಡುತ್ತಿದ್ದು, 20 ರಷ್ಟು ಎಂದರೆ ವರ್ಷಕ್ಕೆ 0.8 ಟನ್​ ನಷ್ಟು ಕಾರ್ಬನ್​ ಅನ್ನ ಹೊರಬಿಡುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿರುವ ಶಿಫಾರಸು ನ್ಯಾಯೋಚಿತವಾಗಿಲ್ಲ ಎಂದಿದ್ದರು.

ಮಹಾತ್ಮ ಗಾಂಧೀಜಿ ಅವರ ಸಲಹೆಯನ್ನ ತಿರಸ್ಕರಿಸಿ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳನ್ನ ಒಳಗೊಂಡ ಅಭಿವೃದ್ಧಿ ಕಲ್ಪನೆ ಅಳವಡಿಸಿಕೊಂಡಾಗ ಇಂತ ಸಮಸ್ಯೆಗಳನ್ನ ನಾವು ಎದುರಿಸಬೇಕಾಗುತ್ತದೆ. ಆದ್ರೆ ಭಾರತ ಸರ್ಕಾರ ಕೂಡ ಇಂದಿಗೂ ತಪ್ಪು ಅಭಿವೃದ್ಧಿ ಕಲ್ಪನೆಯನ್ನು ಅನುಸರಿಸುತ್ತಿದೆ ಎಂಬ ಆರೋಪಗಳಿವೆ.

ಭಾರತವು ಪರ್ಯಾಯ ಅಭಿವೃದ್ಧಿ ಮಾರ್ಗವನ್ನ ಅನುಸರಿಸುವ ಅವಶ್ಯಕತೆ ಇದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಸಾದಿಸಲಾಗದಿದ್ದನ್ನ ಸಾಧಿಸಬೇಕಿದೆ. ಪರಿಸರ ಸ್ನೇಹಿಯಾದ, ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸಬಹುದಾದ ಮಾದರಿಯನ್ನ ಕಂಡುಕೊಳ್ಳಬೇಕಿದೆ. ಮನಮೋಹನ್ ಸಿಂಗ್ ಅವರು ನಿರುದ್ಯೋಗ ಬೆಳವಣಿಗೆಯ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರು ಮತ್ತು ಇಂದೂ ಕೂಡ ಅದನ್ನು ಸಮರ್ಥಿಸಿಕೊಳ್ಳುತ್ತಾರೆ.

ಭೂತಾನ್ ಈ ವಿಚಾರದಲ್ಲಿ ತುಂಬಾ ಧೈರ್ಯಶಾಲಿ. ಏಕೆಂದರೆ ದೇಶದ ಒಟ್ಟು ಉತ್ಪಾದನೆಗಿಂತ ದೇಶದ ಒಟ್ಟು ಸಂತೋಷ ಮುಖ್ಯ ಎಂದು ಹೇಳುತ್ತದೆ. ಒಟ್ಟು ರಾಷ್ಟ್ರೀಯ ಸಂತೋಷವು ಸಮಗ್ರ ಮತ್ತು ಸುಸ್ಥಿರ ಚಿಂತನೆಯನ್ನು ಆಧರಿಸಿದೆ, ಇದು ಆರ್ಥಿಕೇತರ ಸೂಚಕಗಳಿಗೂ ಪ್ರಾಮುಖ್ಯತೆಯನ್ನು ನೀಡುತ್ತದೆ. ಎಲ್ಲಾ ಕ್ಷೇಮವನ್ನ ಆರ್ಥಿಕ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ ಎನ್ನುತ್ತದೆ.

Intro:Body:

Gandhi's views on environment and modern concept of development

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.