ನವದೆಹಲಿ: ಇಡೀ ದೇಶವೇ ಮಹಾತ್ಮಾ ಗಾಂಧೀಜಿ ಅವರ 150ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಇದೇ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ನಟ-ನಟಿಯರೊಂದಿಗೆ ಇಂದು ಸಂವಾದ ಕಾರ್ಯಕ್ರಮ ನಡೆಸಿದರು.
ಲೋಕ್ ಕಲ್ಯಾಣ ಮಾರ್ಗದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್, ಆಮೀರ್ ಖಾನ್, ರಾಜ್ಕುಮಾರ್ ಹಿರಾನಿ, ಕಂಗನಾ ರಣಾವತ್, ಆನಂದ್ ರೈ, ಎಸ್.ಪಿ.ಬಾಲಸುಬ್ರಹ್ಮಣ್ಯ, ಸೋನಂ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಬಾಲಿವುಡ್ನ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು. ಇದೇ ವೇಳೆ ಮಹಾತ್ಮರ ಚಿಂತನೆ ಸಾರುವ ದೃಶ್ಯರೂಪಕ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಬಾಲಿವುಡ್ ನಟರು ಭಾಗಿಯಾಗಿದ್ದಾರೆ.
ಈ ದೃಶ್ಯರೂಪಕ ರಾಜ್ಕುಮಾರ್ ಹಿರಾನಿ ನಿರ್ಮಾಣ ಸಂಸ್ಥೆ ತಯಾರು ಮಾಡಿದ್ದು, 1.40 ನಿಮಿಷಗಳ ದೃಶ್ಯ ರೂಪಕದಲ್ಲಿ ನಟರಾದ ಸಲ್ಮಾನ್ ಖಾನ್, ಆಮೀರ್ ಖಾನ್, ಶಾರೂಖ್ ಖಾನ್ ಸೇರಿದಂತೆ ಪ್ರಮುಖ ನಟಿಯರು ಕಾಣಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಜತೆ ಸಂವಾದ ನಡೆಸಿರುವ ಕುರಿತು ಎಲ್ಲ ಬಾಲಿವುಡ್ ನಟ-ನಟಿಯರು ತಮ್ಮ ಅಭಿಪ್ರಾಯ ಹೊರಹಾಕಿದ್ದು, ಅದನ್ನ ತಮ್ಮ ಟ್ಟಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಬಾಲಿವುಡ್ ನಟ-ನಟಿಯರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ದೇಶದ ತುಂಬಾ ಪ್ರಸಾರ ಮಾಡುವಂತೆ ಮನವಿ ಮಾಡಿಕೊಂಡರು.