ETV Bharat / bharat

ಜಾಗತಿಕ ಮಟ್ಟದಲ್ಲಿ ಗಾಂಧಿಯವರ ಪ್ರಭಾವ... ಮಹಾತ್ಮನಿಂದ ಸ್ಫೂರ್ತಿ ಪಡೆದ ವ್ಯಕ್ತಿಗಳೆಷ್ಟೋ..?!

author img

By

Published : Sep 19, 2019, 6:00 AM IST

ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಹಲವು ನಾಯಕರನ್ನು ಸೃಷ್ಠಿಸಿದ್ದರು. ಸಹಜವಾಗಿಯೇ ಅವರ ಸಂದೇಶಗಳು ದಕ್ಷಿಣ ಏಷ್ಯಾದ ದೇಶಗಳ ಮೇಲೆ ಶಾಶ್ವತ ಪರಿಹಾರ ಬೀರಿದವು.

ಗಾಂಧಿ

ಮಹಾತ್ಮಾ ಗಾಂಧೀಜಿ 20ನೇ ಶತಮಾನದ ಅಸಾಧಾರಣ ವ್ಯಕ್ತಿತ್ವ. ಚಿಂತನೆ, ಮಾತು ಮಾತ್ತು ಕಾರ್ಯವನ್ನು ಒಂದುಗೂಡಿಸುವ ಕೆಲಸ ಗಾಂಧೀಜಿ ಮಾಡಿದ್ದರು. ಅವರ ಈ ಕಾರ್ಯದಿಂದಲೇ ಯಾರಿಂದಲೂ ತಡೆಯಲಾಗದ ವ್ಯಕ್ತಿತ್ವವಾಗಿ ಬೆಳೆದು ನಿಂತರು. ತುಳಿತಕ್ಕೊಳಗಾದವರಿಗೆ ಗಾಂಧೀಜಿಯ ಸತ್ಯಾಗ್ರಹ ಹಾಗೂ ಅಹಿಂಸೆ ಶಕ್ತಿಯುತ ಆಯುಧವಾಗಿ ಸಹಾಯ ಮಾಡಿತು.

ಪ್ರತಿರೋಧಿಯು ಅಹಿಂಸೆ ಹಾಗೂ ನೈತಿಕತೆಗೆ ಬೆಲೆ ನೀಡದವನಾಗಿದ್ದರೆ, ಗಾಂಧೀಜಿಯ ತೀವ್ರವಾದ ಶಾಂತಿವಾದ ವಿಫಲವಾಗುವ ಸಾಧ್ಯತೆಯೂ ಇದೆ.

ಹತ್ಯಕಾಂಡ, ಆಕ್ರಮಣಶಿಲತೆ ಹಾಗೂ ಭಯೋತ್ಪದನೆ ಇವೆಲ್ಲವೂ ಮುಗ್ಧರಿಗೆ ಹಾನಿಯೆಸಗುವ ಕಾರಣ ಆ ಸಂದರ್ಭದಲ್ಲಿ ಸಕ್ರಿಯವಾಗಿ ಪ್ರತಿರೋಧ ವ್ಯಕ್ತಪಡಿಸಬಹುದು. ಆದರೆ ಕೆಲವು ಸಂದರ್ಭದಲ್ಲಿ ಪ್ರತಿರೋಧಿಯು ನೈತಿಕತೆ ಹಾಗೂ ಮಾನವೀಯತೆ ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯ ವಿಧಾನಗಳೇ ಕಾರ್ಯನಿರ್ವಹಿಸುತ್ತವೆ. ಗಾಂಧಿಜಿ ಯಾವತ್ತೂ ಸಂಘರ್ಷ ಹಾಗೂ ಹಿಂಸೆಯನ್ನು ವಿರೋಧಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಅನ್ಯಾಯವನ್ನು ವಿರೋಧಿಸುವ ಗಾಂಧಿ ವಿಧಾನಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಿವೆ.

ಏಷ್ಯಾ ಖಂಡದ ಇತರ ಭಾಗಗಳಲ್ಲಿಯೂ ಅವರ ಪ್ರಭಾವ ಗಾಢವಾಗಿತ್ತು. ಪ್ರಜಾಪ್ರಭುತ್ವಕ್ಕಾಗಿ ಫಿಲಿಪ್ಫೈನ್ಸ್​ನಲ್ಲಿ ಬೆನಿಗ್ನೋ ಅಕ್ವಿನೋ ಜೂನಿಯರ್​ ಹಾಗೂ ಕೊರಾಜಾನ್ ಅಕ್ವಿನೋ ನಡೆಸಿದ ಹೋರಾಟವು ಗಾಂಧೀಜಿಯ ಪ್ರಭಾವ ಹೊಂದಿತ್ತು. ಇದರ ಪರಿಣಾಮವಾಗಿ ಶಾಂತಿಯುತ ಪ್ರತಿಭಟನೆಯಿಂದ ಫಿಲಿಪ್ಫೈನ್ಸ್​ನಲ್ಲಿ ನೈಜ ಪ್ರಜಾಪ್ರಭುತ್ವ ಜಾರಿಗೆ ಬಂತು.

ದಕ್ಷಿಣ ಕೊರಿಯಾದಲ್ಲಿದ್ದ ಸರ್ವಾಧಿಕಾರಿ ಆಡಳಿತವು ಜಾರಿಯಲ್ಲಿತ್ತು. ದಶಕಗಳ ನಿರಂತರ ಶಾಂತಿಯುತ ಹೋರಾಟದಿಂದ ಅಲ್ಲಿ ಗಣರಾಜ್ಯ ವ್ಯವಸ್ಥೆ ಜಾರಿಗೆ ಬಂತು. 1987ರಿಂದ 2003ರ ನಡುವೆ ದಕ್ಷಿಣ ಕೊರಿಯಾದಲ್ಲಿ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಹಾಕಲಾಯಿತು. ಕಿಮ್ ಯಂಗ್ ಸ್ಯಾಮ್ ಹಾಗೂ ಕಿಮ್ ಡೇ ಜಂಗ್ ಇವರಿಬ್ಬರ ಆಡಳಿತವು ಗಾಂಧೀಜಿಯವ ಪ್ರಭಾವಕ್ಕೆ ಉದಾಹರಣೆಯಾಗಿದ್ದು, ಅವರ ನಾಯಕತ್ವದಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಥಿರ ಆರ್ಥಿಕತೆ ಹಾಗೂ ಶಾಂತಿಯುತ ಪ್ರಜಾಪ್ರಭುತ್ವ ಸೃಷ್ಠಿಯಾಯಿತು.

ಬರ್ಮಾದ ನಾಯಕ ಔಂಗ್​ ಸೂ ಕೀ ಗಾಂಧೀಜಿಯವ ಪ್ರಭಾವಕ್ಕೆ ಒಳಗಾಗಿದ್ದರು. ಅವರು 1989 ರಿಂದ 2010ರ ನಡುವೆ ಗೃಹಬಂಧನದಲ್ಲಿದ್ದರು. ಅವರನ್ನು ಗಡಿಪಾರು ಮಾಡುವ ಯೋಚನೇಯೂ ಇತ್ತು. ಹಾಗಾಗಿ ನೋಬೆಲ್ ಪ್ರಶಸ್ತಿ ಸ್ವಿಕರಿಸಲು, ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ಹಾಗೂ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ತನ್ನ ಪತಿಯನ್ನು ಭೇಟಿಯಾಗಲು ಬ್ರಿಟನ್​ಗೆ ತೆರಳಲು ಆಕೆ ನಿರಾಕರಿಸಿದಳು. ದೇಶ ಬಿಟ್ಟು ಹೊರ ಹೋದರೆ ಮತ್ತೆ ಮರಳಲು ನಿರಾಕರಿಸಬಹುದು ಎಂಬ ಭಯದಿಂದ ಆಕೆ ದೇಶದಿಂದ ಹೊರ ಹೋಗಲಿಲ್ಲ. ನನ್ನ ಜೀವನ ಹಾಗೂ ನನ್ನ ಕೆಲಸಗಳಲ್ಲಿ ಗಾಂಧಿಜಿಯವರ ಪ್ರಭಾವ ಸಾಕಷ್ಟಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು.

ಯುದ್ಧಾನಂತರದ ಜಗತ್ತಿನಲ್ಲಿ ಅನ್ಯಾಯದ ಪ್ರತಿರೋಧದ ಜಾಗತಿಕ ಸಂಕೇತವಾದ ನೆಲ್ಸನ್ ಮಂಡೇಲಾ ಅವರು ಗಾಂಧೀಜಿಯವರ ಜೀವನ ಹಾಗೂ ಬೋಧನೆಗಗಳಿಂದ ಆಳವಾಗಿ ಪ್ರಭಾವಿತರಾದರು. ಆಪ್ರಿಕಾದಲ್ಲಿ 1952ರ ಧಿಕ್ಕಾರ ಅಭಿಯಾನದಲ್ಲಿ ಲಕ್ಷಾಂತರ ದಕ್ಷಿಣ ಆಫ್ರಿಕನ್ನರನ್ನು ಒಟ್ಟುಗೂಡಿಸುವಲ್ಲಿ ಗಾಂಧಿಯನ್ ತತ್ವಶಾಸ್ತ್ರ ಎಂದು ಮಡೇಲಾ ಒಪ್ಪಿಕೊಂಡರು. ಅಲ್ಲದೆ ಈ ಅಭಿಯಾನವು ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್​ಅನ್ನು ಸಾಮೂಹಿಕ ಜನಾಧರಿತ ಸಂಘಟನೆಯಾಗಿ ಮಾಡಿತು. ಗಾಂಧೀಜಿಯವರ ಬಗ್ಗೆ ಉಲ್ಲೇಖಿಸಿರುವ ಮಂಡೇಲಾ, ಗಾಂಧೀಜಿ ಓರ್ವ 'ಪವಿತ್ರ ಯೋಧ', ಅವರು ನೀತಿ ಮತ್ತು ನೈತಿಕತೆಯನ್ನು ಒಂದು ಸಂಕಲ್ಪದೊಂದಿಗೆ ಸಂಯೋಜಿಸಿದರು. ಅದು ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ರಾಜಿ ಮಾಡಿಕೊಳ್ಳಲು ನಿರಾಕರಿಸಿತು ಎಂದು ಹೊಗಳಿದ್ದಾರೆ.

ನೆಲ್ಸನ್​ ಮಂಡೇಲಾ ಯಾವಾಗಲೂ ಮಹಾತ್ಮರನ್ನು ಸ್ಫೂರ್ತಿ ಎಂದು ಪರಿಗಣಿಸುತ್ತಿದ್ದರು. "ಹಿಂಸೆ ಮತ್ತು ಕಲಹಗಳಿಂದ ಪ್ರೇರಿತವಾದ ಜಗತ್ತಿನಲ್ಲಿ, ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶವು 21 ನೇ ಶತಮಾನದಲ್ಲಿ ಮಾನವ ಉಳಿವಿಗೆ ಪ್ರಮುಖವಾಗಿದೆ ಎಂದು ಮಂಡೇಲಾ ಹೇಳಿದ್ದರು.

ತುಳಿತಕ್ಕೊಳಗಾದ ಜನರು ನ್ಯಾಯಕ್ಕಾಗಿ ತಮ್ಮ ಹೋರಾಟದಲ್ಲಿ ಸತ್ಯ ಮತ್ತು ಪ್ರೀತಿಯನ್ನು ಆಯುಧಗಳಾಗಿ ಬಳಸಬಹುದು ಎಂಬ ಗಾಂಧೀಜಿಯ ಕಲ್ಪನೆಯನ್ನು ಮಾರ್ಟಿನ್ ಲೂಥರ್ ಕಿಂಗ್ ಇಷ್ಟಪಟ್ಟರು. 1955-56ರಲ್ಲಿ ಮಾಂಟ್ಗೊಮೆರಿ ಬಸ್ ಬಹಿಷ್ಕಾರ ಮತ್ತು ಕಪ್ಪು ಜನರ ಹಕ್ಕುಗಳಿಗಾಗಿ ಅವರ ಎಲ್ಲಾ ಹೋರಾಟಗಳಲ್ಲೂ ಆ ಕಲ್ಪನೆಯ ಪ್ರಾಯೋಗಿಕ ಅನ್ವಯಿಕೆ ಕಂಡುಬಂದಿದೆ. ಮಾರ್ಟಿನ್ ಲೂಥರ್ ಹೇಳುವಂತೆ, ಕ್ರಿಸ್ತನು ನಮಗೆ ದಾರಿ ತೋರಿಸಿದನು. ಆದರೆ ಭಾರತದಲ್ಲಿ ಗಾಂಧಿ ಅದು ಕೆಲಸ ಮಾಡಬಹುದೆಂದು ತೋರಿಸಿದರು. ಗಾಂಧೀಜಿಯವರ ಅಭಿಪ್ರಾಯಗಳನ್ನು ಪ್ರತಿಧ್ವನಿಸಿದ ಮಾರ್ಟಿನ್ ಹಿಂಸಾಚಾರವನ್ನು ಆಶ್ರಯಿಸದೆ ಕೆಟ್ಟದ್ದನ್ನು ವಿರೋಧಿಸಲು ಸಾಧ್ಯವಿದೆ ಎಂದು ಪದೇ ಪದೇ ಹೇಳಿದರು.

ಅವರು 1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅವರು, ಅಹಿಂಸಾತ್ಮಕ ಹೋರಾಟವು ತುಳಿತಕ್ಕೊಳಗಾದ ಜನರಿಗೆ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ ಎಂಬುದನ್ನು ನಾನು ಕಂಡುಕೊಂಡೆ ಎಂದು ಬರೆದುಕೊಂಡಿದ್ದರು. 1964 ರಲ್ಲಿ ಕಿಂಗ್ ನೋಬೆಲ್​ ಪ್ರಶಸ್ತಿ ಸ್ವೀಕಾರ ಭಾಷಣದಲ್ಲೂ ಸಹ ತಾನು ಗಾಂಧೀಜಿಯವರ ಸ್ಫೂರ್ತಿಯನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದರು.

ಕಳೆದ 60 ವರ್ಷಗಳಲ್ಲಿ ಪೂಜ್ಯ ಆಧ್ಯಾತ್ಮಿಕ ಶಿಕ್ಷಕರಲ್ಲಿ ಒಬ್ಬರಾದ ದಲೈಲಾಮಾ ಕೂಡಾ ಗಾಂಧಿಯವರಿಂದ ತೀವ್ರ ಪ್ರಭಾವಿತರಾಗಿದ್ದಾರೆ. ಅಹಿಂಸಾತ್ಮಕ ವಿಧಾನಗಳ ಮೂಲಕ ರಚನಾತ್ಮಕ ರಾಜಕೀಯ ಬದಲಾವಣೆಯನ್ನು ತರುವ ಏಕೈಕ ಮಾರ್ಗವೆಂದರೆ, ಇಡೀ ಪ್ರಪಂಚವು ಮಹಾತ್ಮ ಗಾಂಧಿಯವರ ಅಹಿಂಸೆಯನ್ನು ನೋಡುತ್ತದೆ" ಎಂದು ಅವರು ಹೇಳಿದರು.

ಅಮೆರಿಕಾದ ಮಾಜಿ ಉಪಮುಖ್ಯಮಂತ್ರಿ ಅಲ್ ಗೋರ್ ಅವರು ಗಾಂಧೀಜಿಯವರ ಸತ್ಯದ ಶಕ್ತಿಯಿಂದ ಪ್ರಭಾವಿತರಾದರು. ಮಾತ್ರವಲ್ಲ ಪರಿಸರದ ಬಗೆಗಿನ ಅವರ ಆಳವಾದ ಕಾಳಜಿಯಿಂದ ಪ್ರಭಾವಿತರಾದರು. ಅಲ್ ಗೋರ್ ಹೇಳುವಂತೆ, ಮಾನವ ವ್ಯವಹಾರಗಳಲ್ಲಿ ಸತ್ಯವು ಬಲವನ್ನು ಹೊಂದಿದೆ. ಅದನ್ನು ಉತ್ಸಾಹದಿಂದ ವ್ಯಕ್ತಪಡಿಸಿದಾಗ, ಒಳ್ಳೆಯದಕ್ಕಾಗಿ ವಿಷಯಗಳನ್ನು ಬದಲಾಯಿಸುವ ಶಕ್ತಿಶಾಲಿ ಶಕ್ತಿಯಾಗಬಹುದು ಎಂದು ಗಾಂಧಿಯವರ ಚಿಂತನೆಯನ್ನು ಉದ್ಘರಿಸಿದ್ದಾರೆ.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಅಭಿಪ್ರಾಯದಂತೆ, ನನ್ನ ಜೀವನದುದ್ದಕ್ಕೂ ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಸ್ಫೂರ್ತಿಯಾಗಿ ನೋಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಅಸಾಮಾನ್ಯ ಕೆಲಸಗಳನ್ನು ಮಾಡಲು ಒಂದಾದಾಗ, ಆ ಕೆಲಸವನ್ನು ಮಾಡಬಹುದಾದ ರೀತಿಯ ಪರಿವರ್ತನೆಯನ್ನು ಅವರು ಮಾಡಿದ್ದಾರೆ. ಸತ್ತ ಅಥವಾ ಜೀವಂತವಾಗಿರುವ ಒಬ್ಬ ವ್ಯಕ್ತಿ ಯಾರು ಎಂದು ಕೇಳಿದಾಗ, ಅವರು ಗಾಂಧಿ ಎಂದು ಉತ್ತರಿಸಿದರು.

ಮೆಕ್ಸಿಕನ್-ಅಮೇರಿಕನ್ ನಾಗರಿಕ ಹಕ್ಕುಗಳು ಮತ್ತು ಕಾರ್ಮಿಕ ಮುಖಂಡ ಸೀಸರ್ ಚಾವೆಜ್ ಅವರು ಗಾಂಧೀಜಿಯಿಂದ ಆಳವಾಗಿ ಪ್ರಭಾವಿತರಾದರು ಮತ್ತು ಗಾಂಧೀ ವಿಧಾನಗಳ ಬಗ್ಗೆ ಅನೇಕ ತಂತ್ರಗಳನ್ನು ರೂಪಿಸಿದರು. ಚಾವೆಜ್ ಮಹಾತ್ಮರ ಬಗ್ಗೆ ಹೇಳುತ್ತಾ, ಅವರು ಅಹಿಂಸೆಯ ಬಗ್ಗೆ ಮಾತನಾಡಿದ್ದಲ್ಲದೆ, ನ್ಯಾಯ ಮತ್ತು ವಿಮೋಚನೆಗಾಗಿ ಅಹಿಂಸೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದರು ಎಂದಿದ್ದಾರೆ.

ಗಾಂಧೀಜಿಯವರ ವಿಚಾರಗಳು, ಅವರ ಆಚರಣೆಯಲ್ಲಿನ ನಂಬಿಕೆಗಳ ದೃಢವಾದ ಅನುಸರಣೆ, ಸಹಾನುಭೂತಿ ಮತ್ತು ಮಾನವೀಯತೆ, ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟದಲ್ಲಿನ ಅವರ ಧೈರ್ಯವು ಒಂದು ಶತಮಾನಕ್ಕೂ ಹೆಚ್ಚು ಕಾಲ ಪ್ರಪಂಚದ ಮೇಲೆ ಪ್ರಭಾವ ಬೀರಿತು. ಅವರ ಜೀವನ ಮತ್ತು ಸಂದೇಶವು ಈ 21 ನೇ ಶತಮಾನದಲ್ಲೂ ನಮ್ಮ ವರ್ತನೆಗಳು ಮತ್ತು ಸಾಮೂಹಿಕ ಚಳುವಳಿಗಳ ಮೇಲೆ ಪ್ರಭಾವ ಬೀರಿದೆ.

ಸ್ತ್ರೀ ಸ್ವಾತಂತ್ರ್ಯ, ಪರಿಸರ ಆಂದೋಲನವು ಗಾಂಧೀಜಿಯವರ ಕೆಲಸ ಮತ್ತು ಬೋಧನೆಗಳಿಂದ ಆಳವಾಗಿ ಪ್ರಭಾವಿತವಾಗಿದೆ. ಆಧುನಿಕ ಜಗತ್ತು ಈ ಸರಳ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ನಾವು ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಕಲಿಯಬೇಕು ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕು. ನಮ್ಮ ಸಾಮೂಹಿಕ ಉಳಿವಿಗಾಗಿ ನಮ್ಮ ಪರಿಸರ ಮತ್ತು ಪ್ರಾಣಿಗಳನ್ನು ರಕ್ಷಿಸಲು ನಾವು ಕಲಿಯಬೇಕಿದೆ.

Intro:Body:

ಜಾಗತಿಕ ಮಟ್ಟದಲ್ಲಿ ಗಾಂಧಿಯವರ ಪ್ರಭಾವ... ಮಹಾತ್ಮನಿಂದ ಸ್ಫೂರ್ತಿ ಪಡೆದ ವ್ಯಕ್ತಿಗಳೆಷ್ಟೋ!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.