ಮಹಾತ್ಮ ಎಂಬ ಬಿರುದು ಗಾಂಧೀಜಿಗೆ ಇಷ್ಟವಿರಲಿಲ್ಲ. ಯಾರಾದರೂ ಅವರನ್ನು ಮಹಾತ್ಮ ಎಂದು ಕರೆದರೆ ಅವರಿಗೆ ಅದು ಸ್ವಲ್ಪ ವಿಚಿತ್ರವೆನಿಸಿತು. ಗಾಂಧೀಜಿಯವರು ಇತರ ಮನುಷ್ಯರಂತೆ ಸಾಮಾನ್ಯ ಮನುಷ್ಯ. ಅವರು ತಮ್ಮ ಕೆಲಸ-ಕಾರ್ಯಗಳಿಂದ ಶ್ರೇಷ್ಠತೆಯನ್ನು ಪಡೆದವರು. ಜೀವನದಲ್ಲಿ ಅವರ ಅಂತರ್ಗತ ಪಾತ್ರವು ಇಂತಹ ಗೌರವಯುತ ಸ್ಥಾನವನ್ನು ಸಾಧಿಸಲು ನೆರವಾಯ್ತು.
ತಮ್ಮ ಜೀವನದಲ್ಲಿ ಗಾಂಧೀಜಿ ಹಲವು ತಪ್ಪುಗಳನ್ನು ಮಾಡಿದರು. ಉಳಿದವರಿಗಿಂತ ಅವರು ಭಿನ್ನವಾಗಿ ನಿಲ್ಲುವುದು ಎಲ್ಲಿ ಎಂದರೆ, ಅವರು ಒಮ್ಮೆ ಮಾಡಿದ ತಪ್ಪುಗಳನ್ನು ಮತ್ತೆ ಮುಂದುವರಿಸಲಿಲ್ಲ. ಅವರ ನೈತಿಕ ಉನ್ನತಿಗೆ ಇದೇ ಮುಖ್ಯ ಅಂಶವಾಯ್ತು. ತಮ್ಮ ಜೀವನದ ಪ್ರತಿ ಹಂತಗಳಲ್ಲೂ ಅವರು ತಮ್ಮನ್ನು ತಾವೇ ಪರೀಕ್ಷಿಸಿಕೊಂಡರು. ತಮ್ಮ ಬಗ್ಗೆ ತಾವೇ ಪ್ರತಿ ಹಂತದಲ್ಲೂ ಗಮನಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರು ಮತ್ತು ಅವರ ನ್ಯೂನತೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ತಮ್ಮ ಮಾತುಗಳು, ಕಾರ್ಯಗಳನ್ನು ಮಾತ್ರವಲ್ಲದೆ ತನ್ನ ಆಂತರಿಕ ಆಲೋಚನೆಗಳನ್ನೂ ಪರಿಶೀಲನೆಗೆ ಒಳಪಡಿಸುತ್ತಿದ್ದರು. ತಮ್ಮ ಆಲೋಚನೆಗಳಲ್ಲಿ ತಪ್ಪಾದರೂ ಅದನ್ನು ದೇವರು ನೋಡಿಕೊಳ್ಳುತ್ತಾರೆ ಎಂದು ನಂಬಿದ್ದರು. ಹೀಗಾಗಿಯೇ ಅವರು ತಮ್ಮ ತಪ್ಪುಗಳನ್ನು ಜಗತ್ತಿನ ಮುಂದೆ ಒಪ್ಪಿಕೊಳ್ಳುತ್ತಿದ್ದರು. ನಂತರ ತಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದರು. ಒಮ್ಮೆಅವರು ದಕ್ಷಿಣ ಆಫ್ರಿಕಾದ ಫೀನಿಕ್ಸ್ ಆಶ್ರಮದಲ್ಲಿರುವಾಗ ಒಂದು ಹೊತ್ತಿನ ಊಟವನ್ನು ಬಿಟ್ಟು ಉಪ್ಪನ್ನು ತ್ಯಜಿಸಿದ್ದರು. ಅಂತಹ ಸ್ವಯಂ-ಶಿಕ್ಷೆಯ ನಂತರ ಅನಿರ್ಧಿಷ್ಟ ಉಪವಾಸಗಳ ರೂಪ ಪಡೆದುಕೊಂಡಿತು.
ಮುಂದಿನ ದಿನಗಳಲ್ಲಿ, ಅವರು ತಮ್ಮ ಸಹೋದ್ಯೋಗಿಗಳಿಗೆ, ಅವರ ಆಶ್ರಮದಲ್ಲಿ ವಾಸಿಸುತ್ತಿದ್ದವರಿಗೆ ಮತ್ತು ಸಮಾಜಕ್ಕೆ ಅವರು ಮಾಡಿದ ನಿಯಮಗಳನ್ನು ವಿಸ್ತರಿಸಿದರು. ಅದಕ್ಕಾಗಿಯೇ ಸತ್ಯಾಗ್ರಹ ಚಳವಳಿಯಲ್ಲಿ ಅಶುದ್ಧತೆ ಹರಿದಾಡುತ್ತಿರುವುದನ್ನು ನಿಲ್ಲಿಸುವ ಸಲುವಾಗಿ ಸಮಾಜದಲ್ಲಿ ಹಿಂಸೆ ಮತ್ತು ಕೋಮು ದ್ವೇಷವನ್ನು ಕಂಡಾಗ ಅವರು ಉಪವಾಸ ಸತ್ಯಾಗ್ರಹ ಮಾಡಿದರು. ಈ ಉಪವಾಸಗಳು ಅವರಿಗೆ ಶಾಂತಿ ನೀಡುತ್ತಿತ್ತಂತೆ.
ಗಾಂಧೀಜಿ ಮಾಡಿದ ಕೆಲ ತಪ್ಪುಗಳ ಬಗ್ಗೆ ಹೇಳುವಾಗ ಗಾಂಧೀಜಿ ಮಾಡಿರುವುದು ಮಾಹಾ ಪ್ರಮಾದ ಎಂದು ಬಣ್ಣಿಸಿದರು. ವಾಸ್ತವವಾಗಿ ಗಾಂಧೀಜಿ ತಮ್ಮ ತಪ್ಪನ್ನು ಅರಿತುಕೊಂಡ ತಕ್ಷಣ, ಅದನ್ನು ಸಾರ್ವಜನಿಕಗೊಳಿಸುತ್ತಿದ್ದರು. ಬಳಿಕ ಪಶ್ಚಾತ್ತಾಪ ಪಟ್ಟುಕೊಂಡು ಅದಕ್ಕೆ ಪ್ರಾಯಶ್ಚಿತ್ತ ಮಾಡುತ್ತಿದ್ದರು. ಬಳಿಕ ಆ ತಪ್ಪುಗಳನ್ನು ಪುನರಾವರ್ತಿಸುತ್ತಿರಲಿಲ್ಲ. ಇದರಿಂದಾಗಿಯೇ ಅವರು ಸತ್ಯದ ಹಾದಿಯಲ್ಲಿ ನಡೆದು ಹಿಮಾಲಯದ ಪರಾಕಾಷ್ಠೆಯನ್ನು ತಲುಪಿದರು. ಇದು ಅವರನ್ನು ಸದಾ ವಿಕಸಿಸುತ್ತಿರುವ ವ್ಯಕ್ತಿಯನ್ನಾಗಿ ಮಾಡಿತು.
ಗಾಂಧೀಜಿಯವರ ಮತ್ತೊಂದು ವೈಶಿಷ್ಟ್ಯವೆಂದರೆ ಅವರು ತರ್ಕ ಮತ್ತು ನಂಬಿಕೆಯ ನಡುವೆ ಸೂಕ್ಷ್ಮ ಸಮತೋಲನ ಸಾಧಿಸಿದರು. ತಾರ್ಕಿಕ ವಿಚಾರಗಳನ್ನು ಮಾತ್ರ ಸ್ವೀಕರಿಸುತ್ತಿದ್ದ ಅವರು ಹೆಚ್ಚು ಧಾರ್ಮಿಕರಾಗಿದ್ದರು. ಭಾರತೀಯ ಆಲೋಚನೆಗಳು ಮತ್ತು ತತ್ತ್ವಶಾಸ್ತ್ರಕ್ಕೆ ಅವರು ಪ್ರಾಮುಖ್ಯತೆ ನೀಡಿದರು. ಮೆಟಾಫಿಸಿಕ್ಸ್ ಮತ್ತು ಮರಣಾನಂತರದ ಜೀವನದ ಪರಿಕಲ್ಪನೆಯನ್ನು ಮಹಾತ್ಮ ನಂಬಲಿಲ್ಲ. ಅಸ್ಪೃಶ್ಯತೆಗೆ ಅವರ ವಿರೋಧವು ವೈಚಾರಿಕತೆ ಮತ್ತು ತರ್ಕವನ್ನು ಆಧರಿಸಿದೆ. ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದ ಅವ, ಪ್ರತಿ ವ್ಯಕ್ತಿಯಲ್ಲೂ ದೇವರ ಒಂದು ಅಂಶವಿದೆ ಎಂದು ನಂಬಿದ್ದರು. ಸೃಷ್ಟಿಕರ್ತ ಒಳ್ಳೆಯದನ್ನು ಪ್ರತಿನಿಧಿಸಿದರೆ ಅವನು ಜನರನ್ನು ಒಳಿತಿನೆಡೆಗೆ ಕರೆದೊಯ್ಯುತ್ತಾನೆ ಎಂದು ನಂಬಿದ್ದನು. ಸತ್ಯದ ಮೇಲೆ ಅಚಲ ನಂಬಿಕೆ ಹೊಂದಿದ್ದ ಅವರು ಅಹಿಂಸೆಯನ್ನು ಅಭ್ಯಾಸ ಮಾಡುವುದರಿಂದ ಮಾತ್ರ ಈ ಸತ್ಯವನ್ನು ಸಾಧಿಸಬಹುದು ಎಂದು ನಂಬಿದ್ದರು.
ಗಾಂಧೀಜಿಯವರು ಧಾರ್ಮಿಕ ಲಿಪಿಗಳನ್ನು ಮತ್ತು ಸಂತರ ಮಾತುಗಳನ್ನು ಗೌರವಿಸಿದರು. ಇವುಗಳು ಅನುಭವದ ಸಾರ ಎಂದು ಅವರು ನಂಬಿದ್ದರು. ಆದರೂ, ಅವರು ಪ್ರತಿ ಹೇಳಿಕೆಗಳನ್ನು ಪರೀಕ್ಷಿಸಿದರು ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣವಾಗದ ವಿಚಾರಗಳನ್ನು ತಿರಸ್ಕರಿಸಿದರು.
ಗಾಂಧೀಜಿಯವರು ಜೀವನಕ್ಕೆ ಸಮಗ್ರ ಮಾರ್ಗವನ್ನು ಹೊಂದಿದ್ದರು. ಅವರು ಜೀವನದ ವಿಭಾಗೀಕರಣವನ್ನು ನಂಬಲಿಲ್ಲ. ಪ್ರಪಂಚದ ಕೆಲವು ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರವು ನೈತಿಕತೆಗೆ ಯಾವುದೇ ಸಂಬಂಧವಿಲ್ಲದ ವಿಜ್ಞಾನ ಎಂದು ನಂಬಿದ್ದರೆ, ನೀತಿ ಇಲ್ಲದ ಅರ್ಥಶಾಸ್ತ್ರವು ಜಗತ್ತಿಗೆ ದೊಡ್ಡ ಹಾನಿಯನ್ನುಂಟುಮಾಡುತ್ತದೆ ಎಂದು ಗಾಂಧೀಜಿ ನಂಬಿದ್ದರು. ಅಂತೆಯೇ, ಅವರು ರಾಜಕೀಯ ಮತ್ತು ಆಧ್ಯಾತ್ಮಿಕತೆಯನ್ನು ಪರಸ್ಪರ ಸಂಬಂಧವಿರುವ ವಿಷಯವಾಗಿ ಕಂಡರು. ತಮ್ಮ ಜೀವನದಲ್ಲಿ ಒಂದು ಸಮಗ್ರ ವಿಧಾನವನ್ನು ರೂಪಿಸಿಕೊಂಡಿದ್ದರಿಂದ, ಅವರು ಸಾರ್ವಜನಿಕ ಜೀವನ ಮತ್ತು ರಾಜಕೀಯದಿಂದ ದೂರವಿರಲಿಲ್ಲ. ರಾಜಕೀಯ ವಿಷಯಗಳಲ್ಲಿ ಅವರು ಹೆಚ್ಚಿನ ಆಸಕ್ತಿ ವಹಿಸಿದರು ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ರಾಜಕೀಯವನ್ನು ಉತ್ತೇಜಿಸಲು ಶ್ರಮಿಸಿದರು.
ಜೀವನದ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿದ್ದರಿಂದ, ಲಿಂಗ, ಬಣ್ಣ, ಜಾತಿ ಅಥವಾ ಮತಗಳ ಆಧಾರದ ಮೇಲೆ ಯಾವುದನ್ನು ನಿರ್ಣಯಿಸಲಿಲ್ಲ. ಅವರು ಪ್ರತಿಯೊಬ್ಬ ಮನುಷ್ಯನನ್ನು ವೈಯಕ್ತಿಕ ಅಸ್ತಿತ್ವವೆಂದು ಪರಿಗಣಿಸಿದರು. ಈ ಕಾರಣದಿಂದಾಗಿ, ಅವರು ವ್ಯಕ್ತಿಗಳ ಹೃದಯವನ್ನು ಸ್ಪರ್ಶಿಸಿದರು.
ತಮ್ಮನ್ನು ಯಾರೇ ಭೇಟಿಯಾಗಲು ಬಂದರೂ, ಅದನ್ನು ಶ್ರದ್ಧೆಯಿಂದ ಆಲಿಸುತ್ತಿದ್ದರು. ಒಬ್ಬರ ಮಾತುಗಳನ್ನು ಕೇಳುವಲ್ಲಿ ತಾಳ್ಮೆ ವಹಿಸುತ್ತಿದ್ದರು. ತಮ್ಮದೇ ಧ್ವನಿಯನ್ನು ಕೇಳಲು ಇಚ್ಛಿಸುವ ಮತ್ತು ಇತರರಿಗೆ ಕಿವಿಯನ್ನು ತಿರುಗಿಸುವ ರಾಜಕಾರಣಿಗೆ ಇದು ತದ್ವಿರುದ್ಧವಾಗಿದೆ. ಈಗಿನ ರಾಜಕಾರಣಿಗಳು ತಮ್ಮ ಪ್ರಭಾವಶಾಲಿ ಭಾಷಣದಿಂದ ಇತರರನ್ನು ಮೆಚ್ಚಿಸಲು ಯತ್ನಿಸುತ್ತಾರೆ. ಆದರೆ ಗಾಂಧೀಜಿಯವರು ಇದಕ್ಕೆ ತದ್ವಿರುದ್ಧರಾಗಿದ್ದರು. ಅವರು ಎಂದಿಗೂ ತಮ್ಮ ಭಾಷಣವನ್ನು ಸಿದ್ಧಪಡಿಸಲಿಲ್ಲ. ಆದರೂ ಅವರು ಯಾವಾಗಲೂ ಉತ್ಕೃಷ್ಟವಾಗಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮಾನರೆಂದು ಪರಿಗಣಿಸಿ, ಎಲ್ಲಾ ರೀತಿಯ ಕೆಲಸಗಳಿಗೆ ಪ್ರತಿಯೊಬ್ಬರಿಗೂ ಸಮಾನ ಪ್ರಾಮುಖ್ಯತೆ ನೀಡಿದರು. ಯಾವುದೇ ಕೆಲಸವಾದರೂ ಅದು ಸಣ್ಣ ಕೆಲಸ ಅಥವಾ ಕೀಳಾಗಿರಲಿಲ್ಲ. ಗಾಂಧೀಜಿಯವರು ಜಾನ್ ರಸ್ಕಿನ್ ಅವರ 'ಅನ್ಟು ದಿ ಲಾಸ್ಟ್' ಪುಸ್ತಕದಿಂದ ಹೆಚ್ಚು ಪ್ರಭಾವಿತರಾದರು. ಅವರು ಉಲ್ಲೇಖಿಸಿದ ಕೆಲವು ಸಲಹೆಗಳನ್ನು ತಮ್ಮ ಜೀವನದಲ್ಲಿ ಪ್ರಯೋಗಿಸಲು ಇಚ್ಛೆಪಟ್ಟರು. ನಗರದ ಐಷಾರಾಮಿ ಜೀವನವನ್ನು ತೊರೆದು ದೂರದ ಹಳ್ಳಿಯಲ್ಲಿ ಕೃಷಿ ಕಾರ್ಮಿಕರೊಂದಿಗೆ ಜೀವನವನ್ನು ನಡೆಸಲು ಅವರು ಬಯಸಿದರು.
ತಮ್ಮ ಆಶ್ರಮವನ್ನು ಅಹಮದಾಬಾದ್‌ನ ಸಬರಮತಿಯಿಂದ ಸೇವಗ್ರಾಮ್‌ಗೆ ಸ್ಥಳಾಂತರಿಸಿದಾಗ ವಾರ್ಧಾ ಬಳಿ ತಮ್ಮ ಆಶ್ರಮದ ಯುವಕರಿಗೆ ಹತ್ತಿರದ ಹಳ್ಳಿ ಸೆಗಾಂವ್‌ನಲ್ಲಿ ನೈರ್ಮಲ್ಯ ಕೆಲಸ ಕೈಗೊಳ್ಳುವಂತೆ ಸಲಹೆ ನೀಡಿದರು. ಆದರೆ ಈ ಸಲಹೆ ನೀಡುವ ಮೊದಲು, ಸ್ವತಃ ಗಾಂಧೀಜಿಯವರೇ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು. ಗಾಂಧೀಜಿಯವರನ್ನು ನೋಡಿ ಆಶ್ರಮ ಸಹೋದ್ಯೋಗಿಗಳು ಕೂಡಾ ಗಾಂಧೀಜಿ ಸಲಹೆ ನೀಡುವ ಮೊದಲೇ ಸರಳ ಬಟ್ಟೆಗಳನ್ನು ಧರಿಸಿದರು. ಕೈಯಿಂದ ಮಾಡಿದ ಕಾಗದ ಮತ್ತು ಪೆನ್ ಬಳಸಲು ಪ್ರಾರಂಭಿಸಿದರು.
ಒಟ್ಟಿನಲ್ಲಿ ಗಾಂಧೀಜಿಯವರು ಬೋಧಿಸಿದ್ದನ್ನು ಅಭ್ಯಾಸ ಮಾಡಿದರು. ಅದಕ್ಕಾಗಿಯೇ ಅವರ ಜೀವನವು ಸಂದೇಶವಾಗಿ ನಮ್ಮೊಂದಿಗಿದೆ.