ETV Bharat / bharat

ಗಾಂಧಿ ಜಯಂತಿ 2020: ಮಹಾತ್ಮರ ಚಿತ್ರಗಳ ಪ್ರಸಾರಕ್ಕೆ ಮುಂದಾದ ಒಟಿಟಿ ಪ್ಲಾಟ್​ಫಾರಂ

ಗಾಂಧಿಯವರ 151ನೇ ಜಯಂತ್ಯುತ್ಸವದಂದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಷ್ಟ್ರಪಿತನ ಕುರಿತ ಕೆಲ ಸಿನಿಮಾಗಳ ಪ್ರಸಾರ ಕಾಣಲಿವೆ. ಶೆಮರೂ ಆ್ಯಪ್, ಅಮೆಜಾನ್​ ಪ್ರೈಮ್​, ಡಿಸ್ನಿ+ಹಾಟ್​ಸ್ಟಾರ್​ನಲ್ಲಿ ಈ ಸಿನಿಮಾಗಳು ಪ್ರಸಾರಗೊಳ್ಳಲಿವೆ.

ಗಾಂಧಿ ಜಯಂತಿ 2020
ಗಾಂಧಿ ಜಯಂತಿ 2020
author img

By

Published : Oct 2, 2020, 3:23 PM IST

ನವದೆಹಲಿ: ಮಹಾತ್ಮ ಗಾಂಧಿಯವರ 151ನೇ ಜಯಂತ್ಯುತ್ಸವದಂದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಷ್ಟ್ರಪಿತನ ಕುರಿತ ಕೆಲ ಸಿನಿಮಾಗಳ ಪ್ರಸಾರ ಕಾಣಲಿವೆ. ಅವರ ಬೋಧನೆಗಳು, ಅಹಿಂಸೆಯ ಅಭ್ಯಾಸ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆಗಳು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿವೆ. ಗಾಂಧಿಯವರ ಬಗ್ಗೆ ಹೆಚ್ಚು ತಿಳಿದಿಲ್ಲದ ಕೆಲವು ಚಲನಚಿತ್ರಗಳ ಪಟ್ಟಿ ಇಲ್ಲಿದೆ.

'ಹಮ್ನೆ ಗಾಂಧಿ ಕೋ ಮಾರ್ ದಿಯಾ': ನಯೀಮ್ ಎ ಸಿದ್ದಿಕಿ ನಿರ್ದೇಶನದ 2018ರ ಚಲನಚಿತ್ರವು ಕೈಲಾಶ್ ಮತ್ತು ದಿವಾಕರ್ ಎಂಬ ಇಬ್ಬರು ಅಪರಿಚಿತರ ಕಥೆಯನ್ನು ನಿರೂಪಿಸುತ್ತದೆ. ಬ್ರಿಟಿಷ್ ರಾಜ್ಯದ ಆಳ್ವಿಕೆ, ವಿಭಜನೆಯ ಪ್ರಕ್ಷುಬ್ಧ ವಾತಾವರಣದ ವಿರುದ್ಧದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ಮಹಾತ್ಮ ಗಾಂಧಿಯವರ ಹತ್ಯೆಗೆ ಹೊಂದಿಕೆಯಾಗುವ ರೀತಿಯಲ್ಲಿ ಮತ್ತು ಅವರ ತತ್ವಗಳನ್ನು ವಿರೋಧಿಸುವ ಇಬ್ಬರ ಪಾತ್ರದಲ್ಲಿ ಈ ಚಿತ್ರ ಸಾಗುತ್ತದೆ. ಈ ಚಿತ್ರವನ್ನು ಶೆಮರೂ ಆ್ಯಪ್​ನಲ್ಲಿ ನೋಡಬಹುದು.

'ರೋಡ್​ ಟು ಸಂಗಮ್': 2009ರಲ್ಲಿ ಅಮಿತ್ ರಾಯ್ ನಿರ್ದೇಶಿಸಿದ ಚಲನಚಿತ್ರವು ಉತ್ತರಪ್ರದೇಶದಲ್ಲಿ ನೆಲೆಸಿರುವ ಧರ್ಮನಿಷ್ಠ ಮುಸ್ಲಿಂ ಹಸ್ಮತ್ ಅವರ ಕಥೆಯನ್ನು ಚಿತ್ರಿಸುತ್ತದೆ. ಹಸ್ಮತ್​ ಎಂಬ ಓರ್ವ ಮೆಕ್ಯಾನಿಕ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

'ಗಾಂಧಿಗಿರಿ': ಮಹಾತ್ಮ ಗಾಂಧಿಯವರ ತತ್ವಗಳನ್ನು ಬಲವಾಗಿ ನಂಬಿರುವ ಎನ್‌ಆರ್‌ಐ ರಾಯ್ ಸಾಹೇಬ್ ಪಾತ್ರದಲ್ಲಿ ದಿವಂಗತ ಓಂ ಪುರಿಯವರು ಬಣ್ಣ ಹಚ್ಚಿದ್ದರು. ಭಾರತಕ್ಕೆ ಹಿಂದಿರುಗಿದಾಗ, ಅವರು ಜೀವನದಲ್ಲಿ ತಪ್ಪು ಆಯ್ಕೆಗಳನ್ನು ಮಾಡಿದ ನಾಲ್ಕು ಜನರನ್ನು ಭೇಟಿ ಮಾಡುತ್ತಾರೆ. ಗಾಂಧಿಯವರ ಮಾದರಿಯನ್ನು ಅನುಸರಿಸುವ ಮೂಲಕ ಕಷ್ಟಗಳನ್ನು ಸುಧಾರಿಸುವ ಕೆಲಸ ನಡೆಯುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ನೋಡಬಹುದು.

'ನಾನು ಗಾಂಧಿ': ಎನ್.ಆರ್. ನಂಜುಂಡೆ ಗೌಡ ಅವರ 2008ರ ಕನ್ನಡ ಚಲನಚಿತ್ರವು ಗಾಂಧಿಯವರ ತತ್ವಗಳು ಮತ್ತು ಅಭಿಪ್ರಾಯಗಳಿಗೆ ಬದ್ಧರಾಗಿ ಎಲ್ಲರಿಗೂ ಸ್ಫೂರ್ತಿ ನೀಡುವ ಮಕ್ಕಳ ಗುಂಪಿನ ಸುತ್ತ ಸುತ್ತುತ್ತದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

'ರಿಬೂಟಿಂಗ್​ ಮಹಾತ್ಮ': 2019ರಲ್ಲಿ ಬಿಡುಗಡೆಯಾದ ಗುಜರಾತಿ ಕಿರುಚಿತ್ರ ಮಹಾತ್ಮ ಗಾಂಧಿಯವರ ಹುಮನಾಯ್ಡ್ ಆವೃತ್ತಿಯ ಪರಿಕಲ್ಪನೆಯನ್ನು ಆಧರಿಸಿದೆ. ರಾಜಕೀಯ ವ್ಯವಸ್ಥೆ, ಬಾಲಿವುಡ್, ಸೋಷಿಯಲ್ ಮೀಡಿಯಾ ಮತ್ತು ಯುವಕರಂತಹ ಇಂದಿನ ಪ್ರಪಂಚದ ಮೇಲೆ ಹೆಚ್ಚು ಪರಿಣಾಮ ಬೀರುವ ವಿವಿಧ ವಿಷಯಗಳ ಬಗ್ಗೆ 21ನೇ ಶತಮಾನದಲ್ಲಿ ಬಾಪು ಚರ್ಚಿಸಿದ್ದಾರೆ. ಚಿತ್ರವನ್ನು ಶೆಮರೂನಲ್ಲಿ ವೀಕ್ಷಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.