ನವದೆಹಲಿ : ತರಬೇತಿಗಾಗಿ ಇಬ್ಬರು ಫ್ಲೈಟ್ ಸರ್ಜನ್‌ಗಳು ಶೀಘ್ರದಲ್ಲೇ ರಷ್ಯಾಕ್ಕೆ ತೆರಳಲಿದ್ದಾರೆ ಎಂದು ಇಸ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಬ್ಬರು ಫ್ಲೈಟ್ ಸರ್ಜನ್‌ಗಳು ಶೀಘ್ರದಲ್ಲೇ ರಷ್ಯಾಕ್ಕೆ ಹಾರಲಿದ್ದಾರೆ. ಗಗನ್ಯಾನ್ ಮಿಷನ್ಗಾಗಿ ರಷ್ಯಾದ ಸಹವರ್ತಿಗಳಿಂದ ಬಾಹ್ಯಾಕಾಶ ಔಷಧದಲ್ಲಿ ತರಬೇತಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಫ್ಲೈಟ್ ಸರ್ಜನ್‌ಗಳು ಭಾರತೀಯ ವಾಯುಸೇನೆಯ ವೈದ್ಯರಾಗಿದ್ದು, ಅವರು ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಗಗನಯಾತ್ರಿಗಳ ಈ ತರಬೇತಿ ಮಾನವ ಬಾಹ್ಯಾಕಾಶ ಮಿಷನ್ ಯೋಜನೆಯ ನಿರ್ಣಾಯಕ ಅಂಶವಾಗಿದೆ. ಹಾರಾಟದ ಮೊದಲು ಹಾಗೂ ನಂತರ ಗಗನಯಾತ್ರಿಗಳ ಆರೋಗ್ಯಕ್ಕೆ ಈ ಫೈಟ್ ಸರ್ಜನ್‌ಗಳ ಪಾತ್ರ ಪ್ರಮುಖವಾಗಿದೆ.
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಆಯ್ಕೆಯಾದ ಭಾರತೀಯ ವಾಯುಸೇನೆಯ ನಾಲ್ಕು ಪೈಲಟ್‌ಗಳು ಕಳೆದ ವರ್ಷ ಫೆಬ್ರವರಿಯಿಂದ ಮಾಸ್ಕೋ ಬಳಿಯ ಗಗಾರಿನ್ ಸಂಶೋಧನೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇನ್ನು, ರಷ್ಯಾದಲ್ಲಿ ಕೊರೊನಾ ವೈರಸ್ನಿಂದ ಉಂಟಾಗಿರುವ ಲಾಕ್‌ಡೌನ್‌ನಿಂದಾಗಿ ಭಾರತೀಯ ಗಗನಯಾತ್ರಿಗಳ ತರಬೇತಿಯ ಮೇಲೆ ಪರಿಣಾಮ ಬೀರಲಿದ್ದು, ಮಾರ್ಚ್ ವೇಳೆಗೆ ಅವರು ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
2022ರ ವೇಳೆಗೆ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾಕಾಂಕ್ಷೆಯ ಉದ್ದೇಶವಾದ ಗಗನ್ಯಾನ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಸ್ವಲ್ಪ ವಿಳಂಬವಾಗಬಹುದು ಎನ್ನಲಾಗಿದೆ.