ETV Bharat / bharat

ಸಂಭ್ರಮದ ವೇಳೆ ಸೂತಕದ ಛಾಯೆ: ಗೋಡೆ ಕುಸಿದು ನಾಲ್ವರು ಸಾವು!

author img

By

Published : Nov 10, 2019, 6:31 PM IST

ಸಂತೋಷದಿಂದ ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲಿ ದುರಂತ ಸಂಭವಿಸಿದ್ದು ನಾಲ್ವರು ಸಾವಿಗೀಡಾಗಿದ್ದಾರೆ.

ಗೋಡೆ ಕುಸಿದು ನಾಲ್ವರು ಸಾವು

ಹೈದರಾಬಾದ್: ಇಲ್ಲಿನ ಗೋಲ್ನಾಕ ಪ್ರದೇಶದ ಪರ್ಲ್​ ಗಾರ್ಡನ್​ ಫಂಕ್ಷನ್​ ಹಾಲಿನ ಗೋಡೆ ಕುಸಿದು ನಾಲ್ವರು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಗೋಡೆ ಕುಸಿದು ನಾಲ್ವರು ಸಾವು

ಕಳೆದ ಹಲವು ದಿನಗಳಿಂದ ಕಾರ್ಯಕ್ರಮಗಳು ಮತ್ತಿತರ ಸಮಾರಂಭಗಳಿಗಾಗಿ ಈ ಭವನವನ್ನು​ ಯಾರೂ ಬಳಸುತ್ತಿರಲಿಲ್ಲ. ಇತ್ತೀಚೆಗಷ್ಟೆ ಕಟ್ಟಡದ ದುರಸ್ತಿ ಮಾಡಲಾಗಿತ್ತು. ಇಂದು ಕಾರ್ಯಕ್ರಮವೊಂದು ಜರುಗುತಿದ್ದ ವೇಳೆ ಕಟ್ಟಡದ ಗೋಡೆ ದಿಢೀರನೆ ಕುಸಿದಿದೆ.

ಇದ್ದಕ್ಕಿದ್ದಂತೆ ದೊಡ್ಡ ಶಬ್ದವೊಂದು ಕೇಳಿಬಂದಿದೆ. ಏನಾಯ್ತು ಎಂದು ಜನ ನೋಡುವುದರೊಳಗೆ ದೊಡ್ಡ ಗೋಡೆ ಕುಸಿದು ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ 8 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಪೊಲೀಸ್ ಮತ್ತು ಎನ್​ಡಿಆರ್​ಎಫ್​ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.