ಪ್ಯಾರೀಸ್ (ಫ್ರಾನ್ಸ್): ಕೊರೊನಾ ಮಹಾಮಾರಿಯ ಕಾರಣಕ್ಕೆ ಫ್ರೆಂಚ್ ಓಪನ್ ಮುಂದೂಡಿಕೆಯಾಗಿದ್ದು ಈಗಾಗಲೇ ಟಿಕೆಟ್ ಖರೀದಿಸಿದ್ದವರ ಹಣವನ್ನು ಹಿಂದಿರುಗಿಸಲಾಗುತ್ತದೆ ಎಂದು ಫ್ರೆಂಚ್ ಟೆನಿಸ್ ಫೆಡರೇಷನ್ ಘೋಷಿಸಿದೆ.
ಈ ತಿಂಗಳಿನಲ್ಲಿ ನಡೆಯಬೇಕಿದ್ದ ಫ್ರೆಂಚ್ ಓಪನ್ ಟೆನ್ನಿಸ್ ಕೊರೊನಾ ಕಾರಣಕ್ಕೆ ಸೆಪ್ಟೆಂಬರ್ ತಿಂಗಳವರೆಗೆ ಮುಂದೂಡಿಕೆಯಾಗಿದೆ. ಇದೇ ಕಾರಣದಿಂದ ನಿಮ್ಮ ಹಣ ಹಿಂದಿರುಗಿಸಲಾಗುತ್ತದೆ ಎಂದು ಟಿಕೆಟ್ ಖರೀದಿಸಿದ್ದವರಿಗೆ ಸಂದೇಶ ಕಳುಹಿಸಿದೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಈ ಬಾರಿಯ ಫ್ರೆಂಚ್ ಓಪನ್ ಟೆನ್ನಿಸ್ ನಡೆಯಬೇಕಿತ್ತು. ಸೆಪ್ಟೆಂಬರ್ ಅಂತ್ಯದವರೆಗೆ ಈಗ ಮುಂದೂಡಲಾಗಿದೆ. ಜವಾಬ್ದಾರಿಗಳನ್ನು ಅರಿತು ಫ್ರೆಂಚ್ ಪ್ರಾಧಿಕಾರದೊಂದಿಗೆ ಕೈಜೋಡಿಸಿ ಎಲ್ಲರ ಆರೋಗ್ಯ ರಕ್ಷಣೆಗಾಗಿ ಈ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ರೋಲ್ಯಾಂಡ್ ಗ್ಯಾರೋಸ್ನಲ್ಲಿ ಮೇ 24ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ಟೆನ್ನಿಸ್ ನಡೆಯಬೇಕಿತ್ತು. ಆದರೆ ಈಗ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 11ರವೆಗೆ ಮುಂದೂಡಿಕೆಯಾಗಿದೆ.
ಈ ಹಿಂದೆ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಆಟಗಾರರಿಗೆ ನೆರವಾಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಮಿಲಿಯನ್ ಡಾಲರ್ ಅನ್ನು ಸಂಗ್ರಹಿಸಿದ್ದವು. ಇದರ ಜೊತೆಗೆ ಇಂಟರ್ನ್ಯಾಷನಲ್ ಟೆನ್ನಿಸ್ ಫೆಡರೇಷನ್ ಜೊತೆ ಅಸೋಷಿಯೇಷನ್ ಆಫ್ ಟೆನ್ನಿಸ್ ಪ್ರೊಫೆಷನಲ್ಸ್, ವಿಮೆನ್ ಟೆನ್ನಿಸ್ ಅಸೋಸಿಯೇಷನ್ ಹಾಗೂ ಇತರ ಫ್ರಾಂಚೈಸಿಗಳು ಕೈಜೋಡಿಸಿ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗಲು ಪ್ಲೇಯರ್ ರಿಲೀಫ್ ಪ್ರೋಗ್ರಾಂ ಅನ್ನು ಕೂಡಾ ಕೈಗೊಂಡಿದ್ದವು.