ಗೋರಖ್‌ಪುರ (ಉತ್ತರ ಪ್ರದೇಶ): ಇಂದು ಗೋರಖ್‌ಪುರದ ಗೋರಖನಾಥ ದೇವಸ್ಥಾನಕ್ಕೆ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಭೇಟಿ ನೀಡಿದರು. ದೇವಾಲಯದ ಪೂಜೆಯಲ್ಲಿ ಭಾಗವಹಿಸಿ, ವೇದ ಮಂತ್ರಗಳ ಪಠಣಗಳ ಮಾಡಿದರು.
ಬಳಿಕ ದೇವಾಲಯದ ಹಸುಗಳ ತಾಣಕ್ಕೆ ಭೇಟಿ ನೀಡಿ, ಹಸುಗಳಿಗೆ ಬೆಲ್ಲವನ್ನು ದಾನ ಮಾಡಿದರು. ಇನ್ನು ಗೀತಾ ಪ್ರೆಸ್‌ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪುಸ್ತಕಗಳು ಹಾಗೂ ಗೋರಖನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿರುವ ಪುಸ್ತಕಗಳನ್ನು ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
ಬುಧವಾರ ಸಂಜೆ ಗೋರಖ್‌ಪುರಕ್ಕೆ ಆಗಮಿಸಿದ ಅವರನ್ನು, ಜಿಲ್ಲಾಧಿಕಾರಿ ವಿಜಯೇಂದ್ರ ಪಾಂಡ್ಯನ್ ಅವರು ಬರ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ 7.15 ರ ಸುಮಾರಿಗೆ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು. ಇನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಮಂತ್ರಣದ ಮೇರೆಗೆ, ಲಕ್ನೋದ ಅವರ ಅಧಿಕೃತ ನಿವಾಸಕ್ಕೆ ಲೆನೈನ್ ಭೇಟಿ ನೀಡಿದ್ದರು..