ಚೆನ್ನೈ: ಮಹಾಮಾರಿ ಕೋವಿಡ್ ವಿರುದ್ಧ ಇಲ್ಲಿಯವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಯಾವ ವೇಳೆಗೆ ಅದು ಮಾರುಕಟ್ಟೆಗೆ ರಿಲೀಸ್ ಆಗಲಿದೆ ಎಂಬ ಮಾಹಿತಿ ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರ ಮಧ್ಯೆ ಲಸಿಕೆ ಮೇಲಿನ ರಾಜಕಾರಣ ಶುರುಗೊಂಡಿದೆ.
ಬಿಹಾರ ಚುನಾವಣೆಯಲ್ಲಿ ಈಗಾಗಲೇ ಎನ್ಡಿಎ ಪ್ರಣಾಳಿಕೆ ರಿಲೀಸ್ ಮಾಡಿದ್ದು, ರಾಜ್ಯದ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡಿನಲ್ಲೂ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕೂಡ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
-
Once #COVID19 vaccine is ready, it will be provided to all people of the state free of cost, announces Tamil Nadu Chief Minister Edappadi K. Palaniswami (File photo) pic.twitter.com/INOtW2Z44u
— ANI (@ANI) October 22, 2020 " class="align-text-top noRightClick twitterSection" data="
">Once #COVID19 vaccine is ready, it will be provided to all people of the state free of cost, announces Tamil Nadu Chief Minister Edappadi K. Palaniswami (File photo) pic.twitter.com/INOtW2Z44u
— ANI (@ANI) October 22, 2020Once #COVID19 vaccine is ready, it will be provided to all people of the state free of cost, announces Tamil Nadu Chief Minister Edappadi K. Palaniswami (File photo) pic.twitter.com/INOtW2Z44u
— ANI (@ANI) October 22, 2020
ಕೋವಿಡ್ ವ್ಯಾಕ್ಸಿನ್ ಲಭ್ಯವಾಗುತ್ತಿದ್ದಂತೆ ರಾಜ್ಯದಲ್ಲಿನ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು, ಅದಕ್ಕಾಗಿ ಯಾವುದೇ ರೀತಿಯ ಹಣ ಪಡೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಈಗಾಗಲೇ ಲಕ್ಷಾಂತರ ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅನೇಕರು ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಆದರೆ ಇಲ್ಲಿಯವರೆಗೆ ಅದಕ್ಕೆ ಯಾವುದೇ ರೀತಿಯ ವ್ಯಾಕ್ಸಿನ್ ಕಂಡು ಹಿಡಿಯಲಾಗಿಲ್ಲ.