ETV Bharat / bharat

ಬಿಹಾರದಲ್ಲಿ ಉಚಿತ ಲಸಿಕೆ ಭರವಸೆ: ಉಳಿದವರು ಬಾಂಗ್ಲಾದವರಾ? ಬಿಜೆಪಿಗೆ ಉದ್ಧವ್ ಪ್ರಶ್ನೆ - ಬಿಜೆಪಿಯಿಂದ ಉಚಿತ ಕೋವಿಡ್ ಲಸಿಕೆ ಭರವಸೆ

ಬಿಹಾರದಲ್ಲಿ ಉಚಿತ ಕೋವಿಡ್-19 ಲಸಿಕೆ ನೀಡುವ ಭರವಸೆ ನೀಡಿದ್ದೀರಿ. ಹಾಗಾದರೆ ಉಳಿದ ಜನ ಬಾಂಗ್ಲಾದೇಶ ಅಥವಾ ಕಜಕಿಸ್ತಾನ್ ಮೂಲದವರಾ? ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.

Uddhav to BJP
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
author img

By

Published : Oct 26, 2020, 6:52 AM IST

ಮುಂಬೈ: ಬಿಹಾರದಲ್ಲಿ ಉಚಿತ ಕೋವಿಡ್ -19 ಲಸಿಕೆ ನೀಡುವ ಭರವಸೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದು, ಇತರೆ ರಾಜ್ಯದವರು ಬಾಂಗ್ಲಾದೇಶ ಅಥವಾ ಕಜಕಿಸ್ತಾನ್ ಮೂಲದವರು ಎಂದು ಬಿಜೆಪಿ ಪಕ್ಷ ಭಾವಿಸಿದೆ ಎಂದಿದ್ದಾರೆ.

ದಾದರ್‌ನ ಸಾವರ್ಕರ್ ಸಭಾಂಗಣದಲ್ಲಿ ನಡೆದ ಶಿವಸೇನೆಯ ವಾರ್ಷಿಕ ದಸರಾ ಸಮಾವೇಶದಲ್ಲಿ ಮಾತನಾಡಿದ ಅವರು, "ನೀವು ಬಿಹಾರದಲ್ಲಿ ಉಚಿತ ಕೋವಿಡ್-19 ಲಸಿಕೆ ನೀಡುವ ಭರವಸೆ ನೀಡಿದ್ದೀರಿ. ಹಾಗಾದರೆ ಉಳಿದ ಜನ ಬಾಂಗ್ಲಾದೇಶ ಅಥವಾ ಕಜಕಿಸ್ತಾನ್ ಮೂಲದವರಾ? ಹೀಗೆ ಮಾತನಾಡುವವರಿಗೆ ನಾಚಿಕೆಯಾಗಬೇಕು" ಎಂದಿದ್ದಾರೆ.

"ಬಿಹಾರದ ಮಗನಿಗೆ ನ್ಯಾಯಕ್ಕಾಗಿ ಕೂಗುತ್ತಿರುವವರು ಮಹಾರಾಷ್ಟ್ರದ ಮಗನ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ" ಎಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಮಗ ಆದಿತ್ಯ ಠಾಕ್ರೆ ವಿರುದ್ಧದ ಆರೋಪಗಳ ಬಗ್ಗೆ ಮೌನ ಮುರಿದರು.

ಪ್ರಸ್ತುತ ಜಿಎಸ್​ಟಿ ವ್ಯವಸ್ಥೆಯನ್ನು ಮರು ಪರಿಶೀಲಿಸುವ ಸಮಯ ಬಂದಿದೆ ಮತ್ತು ಅಗತ್ಯವಿದ್ದಲ್ಲಿ ಈ ವ್ಯವಸ್ಥೆಯಿಂದ ರಾಜ್ಯಗಳು ಪ್ರಯೋಜನ ಪಡೆಯದ ಕಾರಣ ಅದನ್ನು ಮಾರ್ಪಡಿಸುವ ಸಮಯ ಬಂದಿದೆ ಎಂದು ಠಾಕ್ರೆ ಹೇಳಿದರು. ಅಲ್ಲದೆ ಜಾತಿ, ಮತ, ಧರ್ಮದ ಮೇಲೆ ಜನರನ್ನು ವಿಭಜಿಸಬೇಡಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.