ETV Bharat / bharat

ಕಾಶ್ಮೀರ ಈಗ ತಾರತಮ್ಯದಿಂದ ಮುಕ್ತ; ಅಭಿವೃದ್ಧಿ ಭರವಸೆಯಲ್ಲಿ ಜಮ್ಮು ನಿವಾಸಿಗಳು - ಅಭಿವೃದ್ಧಿಯ ಭರವಸೆಯಲ್ಲಿ ಜಮ್ಮು ನಿವಾಸಿಗಳು

ಜಮ್ಮುವಿನ ಸ್ಥಳೀಯ ನಿವಾಸಿಗಳು ಈಟಿವಿ ಭಾರತದ ಜೊತೆ ಮಾತನಾಡಿದ್ದು, ಕೆಲವರು ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಆಸ್ತಿ ಹಕ್ಕುಗಳ ನವೀಕರಣವು ಈ ಸಮಯದಲ್ಲಿ ತುಂಬಾ ಅಗತ್ಯವಿದೆ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Jammu
ಜಮ್ಮು
author img

By

Published : Aug 3, 2020, 1:47 PM IST

ಜಮ್ಮು: ಜಮ್ಮುವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಒಂದು ವರ್ಷದ ನಂತರ, ಇಲ್ಲಿನ ನಿವಾಸಿಗಳು ತಾವು ಒಂದು ಕಾಲದಲ್ಲಿ ಎದುರಿಸುತ್ತಿದ್ದ ತಾರತಮ್ಯವು ಹಳೆಯ ವಿಷಯವಾಗಲಿದೆ. ಇನ್ನು ಮುಂದಕ್ಕೆ ನಮ್ಮ ಪ್ರಾಂತ್ಯದ ಸರ್ವತೋಮುಖ ಅಭಿವೃದ್ಧಿ ಮೇಲೆ ಬೆಳಕು ಚೆಲ್ಲುವುದೇ ಮುಖ್ಯ ವಿಷಯವಾಗಲಿ ಎಂದು ಆಶಿಸಿದ್ದಾರೆ.

ಆಗಸ್ಟ್ 5, 2019 ರಂದು ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸುವ ಮೊದಲು, ಈ ಪ್ರದೇಶ ಹೆಚ್ಚು ತಾರತಮ್ಯಕ್ಕೆ ಒಳಗಾಗಿತ್ತು ಎಂಬ ಆರೋಪವಿತ್ತು. ಆದರೆ, ಅದರ ಬಗ್ಗೆ ಈಗ ಹೆಚ್ಚು ಗಮನ ಹರಿಸುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಈ ಬಗ್ಗೆ ಇಲ್ಲಿನ ಸ್ಥಳೀಯ ನಿವಾಸಿಗಳು ಈಟಿವಿ ಭಾರತದ ಜೊತೆ ಮಾತನಾಡಿದ್ದು, ಕೆಲವರು ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ಇನ್ನು ಕೆಲವರು ಆಸ್ತಿ ಹಕ್ಕುಗಳ ನವೀಕರಣವು ಈ ಸಮಯದಲ್ಲಿ ತುಂಬಾ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಯ ಭರವಸೆಯಲ್ಲಿ ಜಮ್ಮು ನಿವಾಸಿಗಳು

ಬದಲಾಗುತ್ತಿರುವ ಸಮಯವು ಈ ಪ್ರಾಂತ್ಯದ ಮಹಿಳೆಯರಿಗೆ ಹೊಸ ಬದುಕನ್ನು ನೀಡಿದೆ. ಉದ್ಯೋಗ ಕ್ಷೇತ್ರಗಳಲ್ಲಿ ಅನೇಕ ಅವಕಾಶಗಳು ದೊರೆಯುವುದರೊಂದಿಗೆ ಆಸ್ತಿ ಹಕ್ಕು ಕೂಡಾ ಮಹಿಳೆಯರಿಗೆ ಲಭಿಸಿದೆ.

ಈಗ ನಮ್ಮ ಹೆಣ್ಣುಮಕ್ಕಳು ಜಮ್ಮು ಮತ್ತು ಕಾಶ್ಮೀರದ ಹೊರಗೆ ವಿವಾಹವಾದರೂ ಸಮಾನ ಆಸ್ತಿ ಹಕ್ಕನ್ನು ಪಡೆಯುತ್ತಾರೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.