ಕೋಲ್ಕತ್ತಾ: ಬಹುನಿರೀಕ್ಷಿತ 2020 ಐಪಿಎಲ್ ಕ್ರಿಕೆಟ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು 332 ಕ್ರಿಕೆಟರ್ಸ್ ಪೈಕಿ ಎಲ್ಲ ಫ್ರಾಂಚೈಸಿಗಳು ಸೇರಿ 62 ಆಟಗಾರರನ್ನು ಕೊಂಡುಕೊಂಡಿವೆ. ಇದರಲ್ಲಿ ಸಿಂಹಪಾಲು ಅಸ್ಟ್ರೇಲಿಯಾ ಆಟಗಾರರಾದ್ದು ಅನ್ನೋದು ಗಮನಾರ್ಹ ವಿಚಾರ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹರಾಜಾಗಿರುವ 62 ಆಟಗಾರರ ಪೈಕಿ 13 ಆಸ್ಟ್ರೇಲಿಯಾದ ಆಟಗಾರರು ವಿವಿಧ ಫ್ರಾಂಚೈಸಿ ಪಾಲಾಗಿದ್ದು, ಅವರಿಗಾಗಿ ಬರೋಬ್ಬರಿ 58.25 ಕೋಟಿ ರೂ ಬಳಕೆ ಮಾಡಲಾಗಿದೆ. 8 ಫ್ರಾಂಚೈಸಿಗಳು ಕಾಂಗರೂ ನಾಡಿನ ಆಟಗಾರರನ್ನು ಖರೀದಿಸಿದ್ದು, ಅದರಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ಬರೋಬ್ಬರಿ 15.50 ಕೋಟಿ ರೂ ನೀಡಿ ವೇಗಿ ಪ್ಯಾಟ್ ಕಮಿನ್ಸ್ ಬುಟ್ಟಿಗೆ ಹಾಕಿಕೊಂಡಿದೆ. ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋಟಿ ರೂ ಪಡೆದುಕೊಂಡಿದೆ.
ಐಪಿಎಲ್ನಲ್ಲಿ ಹರಾಜಾದ ಆಸ್ಟ್ರೇಲಿಯಾ ಆಟಗಾರರ ವಿವರ:
- ಪ್ಯಾಟ್ ಕಮಿನ್ಸ್ 15.50 ಕೋಟಿ ಕೆಕೆಆರ್
- ಗ್ಲೆನ್ ಮ್ಯಾಕ್ಸ್ವೆಲ್ 10.75 ಕೋಟಿ ಪಂಜಾಬ್
- ನಾಥನ್ ಕೌಂಟರ್ ನೆಲ್ 8ಕೋಟಿ ಮುಂಬೈ
- ಮಾರ್ಕೂಸ್ ಸ್ಟ್ನೋಯಿಸ್ 4.80 ಡೆಲ್ಲಿ
- ಆ್ಯರೋನ್ ಫಿಂಚ್ 4.40 ಕೋಟಿ ಆರ್ಸಿಬಿ
- ಕೇನ್ ರಿಚರ್ಡ್ಸ್ಸನ್ 4 ಕೋಟಿ ಆರ್ಸಿಬಿ
- ಅಲೆಕ್ಸ್ ಕ್ಯಾರಿ 2.40 ಕೋಟಿಗೆ ಡೆಲ್ಲಿ
- ಜಾಸ್ ಹ್ಯಾಜಲ್ವುಡ್ 2 ಕೋಟಿಗೆ ಸಿಎಸ್ಕೆ
- ಮಿಚಲ್ ಮಾರ್ಸ್ 2ಕೋಟಿಗೆ ಹೈದರಾಬಾದ್
- ಕ್ರಿಸ್ ಲಿನ್ 2ಕೋಟಿಗೆ ಮುಂಬೈ
- ಟಾಮ್ ಬಂಟೂನ್ 1ಕೋಟಿಗೆ ಕೆಕೆಆರ್
- ಫಿಲಿಪ್ 20 ಲಕ್ಷಕ್ಕೆ ಆರ್ಸಿಬಿ
- ಕ್ರಿಸ್ ಗ್ರೀನ್ 20 ಲಕ್ಷಕ್ಕೆ ಕೆಕೆಆರ್
ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಆಟಗಾರರ ಖರೀದಿಗಾಗಿ ಫ್ರಾಂಚೈಸಿಗಳು ಇಷ್ಟೊಂದು ದುಡ್ಡು ಸುರಿದಿವೆ. ಈ ಸಲದ ಬಿಡ್ಡಿಂಗ್ನಲ್ಲಿ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಮೊತ್ತಕ್ಕೆ ಬಿಡ್ ಆಗಿಲ್ಲ ಅನ್ನೋದು ಗಮನಿಸಬೇಕಾದ ಅಂಶ. ಬಿಡ್ಡಿಂಗ್ನಲ್ಲಿ ಇಂಗ್ಲೆಂಡ್ ಆಟಗಾರರುಗಳ ಖರೀದಿಗಾಗಿ ಫ್ರಾಂಚೈಸಿಗಳು 17.75 ಕೋಟಿ ರೂ ಖರ್ಚು ಮಾಡಿದ್ರೆ, ವೆಸ್ಟ್ ಇಂಡೀಸ್ ಆಟಗಾರರ ಖರೀದಿಗಾಗಿ 17.25 ಕೋಟಿ ರೂ ಬಳಸಿವೆ. ದಕ್ಷಿಣ ಆಫ್ರಿಕಾ ಆಟಗಾರರಿಗೆ 12.75 ಕೋಟಿ ರೂ ಬಳಕೆಯಾಗಿದೆ.