ETV Bharat / bharat

ಕೊರೊನಾ ಕರಿಛಾಯೆ... ಇರಾನ್​ನಿಂದ ತವರಿಗೆ ಬಂದ ಭಾರತೀಯ ವಿದ್ಯಾರ್ಥಿಗಳು - ಇರಾನ್​ನಿಂದ ಸ್ವದೇಶಕ್ಕೆ ಬಂದ 53 ಭಾರತೀಯರು

ಇರಾನ್​ನಿಂದ 53 ಭಾರತೀಯರ ನಾಲ್ಕನೇ ಬ್ಯಾಚ್ ಭಾರತಕ್ಕೆ ಆಗಮಿಸಿದೆ. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ​ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 110 ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದಲ್ಲಿ ಒಟ್ಟು 7 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಒಟ್ಟು 32 ಪಾಸಿಟಿವ್​ ಪ್ರಕರಣಗಳೊಂದಿಗೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಬಾಧಿತ ರಾಜ್ಯವಾಗಿದೆ. ಅಲ್ಲದೆ ಇಂದು ಶಂಕಿತ ಕೊರೊನಾ ವೈರಸ್​ಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

jai shankar
ವಿದೇಶಾಂಗ ಸಚಿವ ಎಸ್​ ಜೈಶಂಕರ್
author img

By

Published : Mar 16, 2020, 8:13 AM IST

ನವದೆಹಲಿ: ದೇಶದಲ್ಲಿ ಕೊರೊನಾ ಕಂಟಕ ಭೀತಿ ಹೆಚ್ಚಾಗುತ್ತಿದ್ದು, ಈ ನಡುವೆ ಇರಾನ್‌ನ ಟೆಹ್ರಾನ್ ಮತ್ತು ಶಿರಾಝ್​ನಿಂದ 53 ಭಾರತೀಯರ ನಾಲ್ಕನೇ ಬ್ಯಾಚ್ ಭಾರತಕ್ಕೆ ಆಗಮಿಸಿದೆ.

  • External Affairs Minister, S Jaishankar: Fourth batch of 53 Indians - 52 students & a teacher - has arrived from Tehran & Shiraz, in Iran. With this, a total of 389 Indians have returned to India from Iran. Thank the efforts of Embassy of India in Iran and Iranian authorities. pic.twitter.com/4rQoOeve9G

    — ANI (@ANI) March 15, 2020 " class="align-text-top noRightClick twitterSection" data=" ">

ಈ ಬಗ್ಗೆ ತಿಳಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, 52 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 53 ಜನರು ದೇಶಕ್ಕೆ ಮರಳಿ ಬಂದಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್‌ನಿಂದ ಭಾರತಕ್ಕೆ ಮರಳಿದಂತಾಗಿದೆ. ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಇರಾನ್​ ಅಧಿಕಾರಿಗಳ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಜೈಶಂಕರ್​ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಹೀಗಿದೆ...

Fourth batch of 53 Indians has arrived from Iran
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶ

ಇನ್ನು ದೇಶದಲ್ಲಿ ಈವರೆಗೆ ಒಟ್ಟು 110 ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ 17 ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಕರ್ನಾಟಕದಲ್ಲಿ ಒಟ್ಟು 7 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 32 ಪಾಸಿಟಿವ್​ ಪ್ರಕರಣಗಳೊಂದಿಗೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಬಾಧಿತ ರಾಜ್ಯವಾಗಿದೆ. ಕೇರಳದಲ್ಲಿ ಒಟ್ಟು 25 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

  • Rajasthan: 53 Indians, evacuated from Tehran and Shiraz cities of Iran, arrived at Jaisalmer airport today. They were later moved to the Army Wellness Centre in the city, following preliminary screening. #COVID19 pic.twitter.com/Fnrr0nLfMn

    — ANI (@ANI) March 16, 2020 " class="align-text-top noRightClick twitterSection" data=" ">

ರಾಜಸ್ಥಾನದಲ್ಲಿ ಮೂವರು ಗುಣಮುಖ...

ಇನ್ನೊಂದೆಡೆ ರಾಜಸ್ಥಾನದಲ್ಲಿ ಮೂವರು ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆ ಸೇರಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 13 ಜನರು ಕೊರೊನಾದಿಂದ ಮುಕ್ತಿ ಪಡೆದು ಮರುಜೀವ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.