ಪ್ರಯಾಗ್ರಾಜ್( ಉತ್ತರಪ್ರದೇಶ): ಕಳೆದ ರಾತ್ರಿ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಜೀವ ದಹನಗೊಂಡಿರುವ ಘಟನೆ ಇಲ್ಲಿನ ಕೋರಾಂವ್ ತಾಲೂಕಿನಲ್ಲಿ ನಡೆದಿದೆ.
ಕಳೆದ ರಾತ್ರಿ ವ್ಯಾಗನಾರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ್ದು, ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಿಂದ ಹೊರ ಬರಲು ಸಾಧ್ಯವಾಗದೇ ನಾಲ್ವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗ್ತಿದೆ.
![four persons burnt to death, four persons burnt to death after car catches fire, four persons burnt to death after car catches fire in Prayagraj, Prayagraj car burn, Prayagraj car burn news, ನಾಲ್ವರು ಸಜೀವ ದಹನ, ಕಾರಿನೊಂದಿಗೆ ನಾಲ್ವರು ಸಜೀವ ದಹನ, ಪ್ರಯಾಗ್ರಾಜ್ನಲ್ಲಿ ಕಾರಿನೊಂದಿಗೆ ನಾಲ್ವರು ಸಜೀವ ದಹನ, ಪ್ರಯಾಗ್ರಾಜ್ ಕಾರು ಭಸ್ಮ, ಪ್ರಯಾಗ್ರಾಜ್ ಕಾರು ಭಸ್ಮ ಸುದ್ದಿ,](https://etvbharatimages.akamaized.net/etvbharat/prod-images/up-pra-01-accident-images-upc10163_18112020083305_1811f_1605668585_541.jpg)
ಜವಾಯಿನ್ ಮತ್ತು ಪಸ್ನಾ ಗ್ರಾಮಗಳ ನಡುವೆ ಈ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ಆ ದಾರಿಯಿಂದ ತೆರಳುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಕಾರೊಂದೇ ಬೆಂಕಿಗಾಹುತಿಯಾಗಿದೆ ಎಂದು ಗ್ರಾಮಸ್ಥರು ತಿಳಿದಿದ್ದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಕಾರಿನಲ್ಲಿ ನಾಲ್ವರ ದೇಹ ಸುಟ್ಟು ಕರಕಲವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮೃತರು ಯಾವ ಊರಿನವರು ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಸುತ್ತ - ಮುತ್ತ ಹಳ್ಳಿಗಳಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.