ETV Bharat / bharat

ಹತ್ಯೆ,ಆತ್ಮಹತ್ಯೆಯೋ, ಮಾಟ-ಮಂತ್ರವೋ? ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

author img

By

Published : Aug 14, 2020, 7:04 PM IST

ಒಂದೇ ಕುಟುಂಬದ ನಾಲ್ವರ ಸಾವು ನಿಗೂಢವಾಗಿದೆ. ಒಂದೇ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

four person died in Wanaparthy, Wanaparthy four died, Wanaparthy four died news, Wanaparthy crime news, ವನಪರ್ತಿಯಲ್ಲಿ ನಾಲ್ವರು ಸಾವು, ಒಂದೇ ಕುಟುಂಬದ ನಾಲ್ವರು ಸಾವು, ವನಪರ್ತಿ ನಾಲ್ವರು ಸಾವು, ವನಪರ್ತಿ ನಾಲ್ವರು ಸಾವು ಸುದ್ದಿ, ವನಪರ್ತಿ ಅಪರಾಧ ಸುದ್ದಿ,
ಒಂದೇ ಕುಟುಂಬದ ನಾಲ್ವರ ಸಾವು ನಿಗೂಢ

ವನಪರ್ತಿ: ಮನೆಯೊಂದರ ಬೇರೆ ಬೇರೆ ಸ್ಥಳಗಳಲ್ಲಿ ನಾಲ್ವರು ವ್ಯಕ್ತಿಗಳ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.

ಒಂಟಿಯಾಗಿದ್ದಳು ಮನೆ ಯಜಮಾನಿ!

ತೆಲಂಗಾಣದ ವನಪರ್ತಿಯಲ್ಲಿ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು ಪ್ರಕರಣ

ನಾಗಪೂರ್​ ನಿವಾಸಿ ಹಾಜೀರಾಬೀ (63) ಸ್ವಂತ ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಆಕೆಯ ಮಗಳು ಅಸ್ಮಾಬೇಗಂ (35), ಅಳಿಯ ಖಾಜಾಪಾಷಾ (42) ಮತ್ತು ಮೊಮ್ಮಗಳು ಹಸೀನಾ​ (10) ನಾಗರ್​ ಕರ್ನೂಲ್​ನಲ್ಲಿ ನೆಲೆಸಿದ್ದರು. ಎರಡು ದಿನಗಳ ಹಿಂದೆ ಅಸ್ಮಾಬೇಗಂ ಕುಟುಂಬ ಸಮೇತ ತಾಯಿಯ ಮನೆಗೆ ಬಂದಿದ್ದರಂತೆ.

ಸಂಬಂಧಿಕರಿಗೆ ಆಘಾತ

ಬೆಳಗ್ಗೆ ಏಳೂವರೆ ಗಂಟೆಯಾದ್ರೂ ಮನೆಯಲ್ಲಿ ಯಾವುದೇ ರೀತಿಯ ನಿತ್ಯ ಸದ್ದು ಗದ್ದಲವಿರಲಿಲ್ಲ. ಹೀಗಾಗಿ, ಅಕ್ಕ-ಪಕ್ಕದವರಿಗೆ ಅನುಮಾನ ಮೂಡಿದೆ. ಹೀಗಾಗಿ, ನೆರೆಹೊರೆಯವರು ಸಂಬಂಧಿಕರಿಗೆ ತಕ್ಷಣ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಮನೆಗೆ ಬಂದು ನೋಡಿದಾಗ ಅವರಿಗೆ ಆಘಾತ ಕಾದಿತ್ತು.

four person died in Wanaparthy, Wanaparthy four died, Wanaparthy four died news, Wanaparthy crime news, ವನಪರ್ತಿಯಲ್ಲಿ ನಾಲ್ವರು ಸಾವು, ಒಂದೇ ಕುಟುಂಬದ ನಾಲ್ವರು ಸಾವು, ವನಪರ್ತಿ ನಾಲ್ವರು ಸಾವು, ವನಪರ್ತಿ ನಾಲ್ವರು ಸಾವು ಸುದ್ದಿ, ವನಪರ್ತಿ ಅಪರಾಧ ಸುದ್ದಿ,
ಘಟನಾ ಸ್ಥಳದಲ್ಲಿ ಸೇರಿದ ಜನರು

ನಾಲ್ವರ ಸಾವು!

ಸಂಬಂಧಿಕರು ಮತ್ತು ನೆರೆ ಮನೆಯ ಮಂದಿ ಮನೆ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ನಾಲ್ವರು ಸಾವನ್ನಪ್ಪಿರುವ ದೃಶ್ಯ ಕಂಡುಬಂದಿದೆ. ಘಟನೆ ನಡೆಯುವ ಮುನ್ನಾ ದಿನದ ರಾತ್ರಿ ಅದೇನಾಯ್ತೋ ತಿಳಿದಿಲ್ಲ. ನಾಲ್ವರು ಒಂದೇ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಾಟ, ಮಂತ್ರದ ವಸ್ತುಗಳು ಪತ್ತೆ!

ಮೃತರ ಮನೆಯಲ್ಲಿ ಮಾಟ, ಮಂತ್ರಕ್ಕೆ ಉಪಯೋಗಿಸುವ ವಸ್ತುಗಳು ಪತ್ತೆಯಾಗಿವೆ. ಕೊಬ್ಬರಿ, ಗುಲಾಬಿ ರೇಖೆಗಳು, ನಿಂಬೆಕಾಯಿ ಮತ್ತು ಮನೆ ಹಿಂದೆ ಭೂಮಿ ಅಗೆದಿರುವುದು ಕಂಡು ಬಂದಿದೆ.

ನಿಧಿಗಾಗಿ ಭೂಮಿ ಅಗೆದಿರುವ ಶಂಕೆ

ಕ್ಷುದ್ರ ಪೂಜೆಯ ಅನುಮಾನ

ಆ ಮನೆಯಲ್ಲಿ ಕ್ಷುದ್ರ ಪೂಜೆ ನಡೆಸಿದ್ದಾರೆಂಬ ಅನುಮಾನಗಳು ಮೂಡಿವೆ. ನಿಧಿ ಆಸೆಗೆ ಭೂಮಿಯನ್ನು ಅಗೆದಿದ್ದಾರೆಂಬ ಶಂಕೆಯೂ ವ್ಯಕ್ತವಾಗುತ್ತಿದೆ.

ಪ್ರಕರಣ ದಾಖಲು

ಈ ಘಟನೆ ಕುರಿತು ನಾಗಪೂರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.