ಫರಿದ್ಕೋಟ್ (ಪಂಜಾಬ್): ಒಂದೇ ಕುಟುಂಬದ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ನ ಫರಿದ್ಕೋಟ್ನಲ್ಲಿನ ಕಲೇರಿ ಗ್ರಾಮದಲ್ಲಿ ನಡೆದಿದೆ.
ಹೀಗೆ ಸಾವಿಗೆ ಶರಣಾಗುವುದಕ್ಕೂ ಮುಂಚಿತವಾಗಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆತ್ಮಹತ್ಯೆ ನೋಟ್ ರವಾನೆ ಮಾಡಿದ್ದಾರೆ. ವಿಚಾರ ತಿಳಿದು ಸಂಬಂಧಿಕರು ಮನೆಗೆ ಧಾವಿಸಿ ಬರುವಷ್ಟರಲ್ಲಿ ನಾಲ್ವರು ಕೂಡಾ ಸಾವಿಗೀಡಾಗಿದ್ದರು.
ಮೂಲತಃ ಇವರು ರಾಜಸ್ಥಾನ ಮೂಲದವರಾಗಿದ್ದು, ಇಟ್ಟಿಗೆ ಕೆಲಸ ಮಾಡುತ್ತ ಕಳೆದ 10 ವರ್ಷಗಳಿಂದ ಫರಿದ್ಕೋಟ್ನಲ್ಲಿ ವಾಸವಾಗಿದ್ದರು. ಆರ್ಥಿಕ ತೊಂದರೆಯಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವನ್ನಪ್ಪಿದವರನ್ನು ಧರ್ಮಪಾಲ, ಅವರ ಮಗ, ಮಗಳು ಹಾಗೂ ಪತ್ನಿ ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.