ETV Bharat / bharat

ಅಜ್ಜನ ಅಂತ್ಯಕ್ರಿಯೆ ಮುಗಿಸಿ ತಾವು ಮಸಣ ಸೇರಿದ ನಾಲ್ವರು ಬಾಲಕರು..! - Narayanapet

ಕೊಳದಲ್ಲಿ ಈಜಲು ಹೋದ ಐವರು ಬಾಲಕರ ಪೈಕಿ ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ.

dsd
ಮಸಣ ಸೇರಿದ ನಾಲ್ವರು ಬಾಲಕರು
author img

By

Published : Nov 21, 2020, 10:17 AM IST

ತೆಲಂಗಾಣ: ಕೊಳದಲ್ಲಿ ಈಜಲು ಹೋದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿರುವ ಮನಕಲುಕುವ ಘಟನೆ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಅಜ್ಜನ ಅಂತ್ಯಕ್ರಿಯೆ ಮುಗಿಸಿ ಕೊಳದಲ್ಲಿ ಐವರು ಮಕ್ಕಳು ಸ್ನಾನ ಮಾಡಲು ನೀರಿಗಿಳಿದಿದ್ದಾರೆ. ಈ ಸಮಯದಲ್ಲಿ ಒಬ್ಬನು ನೀರಿನಲ್ಲಿ ಮುಳುಗಿದಾಗ ಆತನನ್ನು ರಕ್ಷಿಸಲು ಹೋದ ಮೂವರು ಆತನನೊಂದಿಗೆ ನೀರುಪಾಲಾಗಿದ್ದಾರೆ.

ಘಟನೆಯಲ್ಲಿ ಒಬ್ಬ ಬದುಕುಳಿದಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.