ETV Bharat / bharat

ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್​ ವಿಧಿವಶ: ಟ್ವೀಟ್​ನಲ್ಲಿ ಲಾಲೂ ಸಂತಾಪ - ಲಾಲೂ ಪ್ರಸಾದ್ ಯಾದವ್

ಮಾಜಿ ಕೇಂದ್ರ ಸಚಿವ ಹಾಗೂ ಆರ್​ಜೆಡಿ ನಾಯಕ ರಘುವಂಶ ಪ್ರಸಾದ್ ಸಿಂಗ್​​​ (74)​​ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Raghuvansh Prasad Singh
ರಘುವಂಶ ಪ್ರಸಾದ್ ಸಿಂಗ್
author img

By

Published : Sep 13, 2020, 1:06 PM IST

ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಆರ್​ಜೆಡಿ ನಾಯಕ ರಘುವಂಶ ಪ್ರಸಾದ್ (74)​​ ಸಿಂಗ್ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಜೂನ್​ನಲ್ಲಿ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾಗಿದ್ದರು. ಒಂದು ವಾರದ ಹಿಂದೆ ಕೊರೊನಾ ನಂತರದ ಅನಾರೋಗ್ಯದ ಕಾರಣದಿಂದ ಏಮ್ಸ್​​ಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಯುಪಿಎ ಸರ್ಕಾರದಲ್ಲಿ 2004ರಿಂದ 2009ರವರೆಗೆ ಕೇಂದ್ರ ಸಚಿವರಾಗಿದ್ದ ಅವರು ಕೆಲವು ದಿನಗಳ ಹಿಂದಷ್ಟೇ ಆರ್​ಜೆಡಿ ಪಕ್ಷದ ಸದಸ್ಯತ್ವ ತೊರೆಯುವ ನಿರ್ಧಾರ ಮಾಡಿ ಲಾಲೂ ಪ್ರಸಾದ್ ಯಾದವ್​ಗೆ ಪತ್ರ ಬರೆದಿದ್ದರು. ಈ ಪತ್ರ ಕೆಲವು ರಾಜಕೀಯ ಮೇಲಾಟಗಳಿಗೆ ಕಾರಣವಾಗಿತ್ತು.

ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಬಹುಕಾಲದ ಆಪ್ತರಾಗಿದ್ದ ಇವರ ಅಗಲಿಕೆಗೆ ಹಲವು ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

  • प्रिय रघुवंश बाबू! ये आपने क्या किया?

    मैनें परसों ही आपसे कहा था आप कहीं नहीं जा रहे है। लेकिन आप इतनी दूर चले गए।

    नि:शब्द हूँ। दुःखी हूँ। बहुत याद आएँगे।

    — Lalu Prasad Yadav (@laluprasadrjd) September 13, 2020 " class="align-text-top noRightClick twitterSection" data=" ">

ರಘುವಂಶ್ ಪ್ರಸಾದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿದ ಲಾಲೂ ಪ್ರಸಾದ್​ ಯಾದವ್​​ ''ಪ್ರಿಯ ರಘುವಂಶ್​ ಬಾಬು, ನಿಮಗೇನಾಯ್ತು..?, ಮೊನ್ನೆಯಷ್ಟೇ ನೀವೆಲ್ಲೂ ಹೋಗಬಾರದೆಂದು ಹೇಳಿದ್ದೆ, ಆದರೆ ನೀವು ತುಂಬಾ ದೂರ ಹೋಗಿಬಿಟ್ಟಿದ್ದೀರಿ. ನಾನು ಮೌನವಾಗಿದ್ದು, ದುಃಖಿತನಾಗಿದ್ದಾನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಕೂಡಾ ರಘುವಂಶ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಬಿಹಾರಕ್ಕೆ ಹಾಗೂ ದೇಶದ ರಾಜಕೀಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.