ETV Bharat / bharat

ಪ್ರಣಬ್​ ಮುಖರ್ಜಿಗೆ 'ಭಾರತ ರತ್ನ'... ಪುರಸ್ಕಾರ ಸ್ವೀಕರಿಸಿದ ಮಾಜಿ ರಾಷ್ಟ್ರಪತಿ

ಪ್ರಣಬ್​ ಮುಖರ್ಜಿ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ್ದು, ಈ ಗೌರವಕ್ಕೆ ಪಾತ್ರರಾಗಿರುವ ದೇಶದ ಮಾಜಿ ರಾಷ್ಟ್ರಪತಿಯಾಗಿದ್ದಾರೆ.

ಪ್ರಣಬ್​ ಮುಖರ್ಜಿ ಭಾರತ ರತ್ನ
author img

By

Published : Aug 8, 2019, 6:44 PM IST

Updated : Aug 8, 2019, 7:50 PM IST

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ 'ಭಾರತ ರತ್ನ' ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಭಾರತದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ನೀಡಲಾಯಿತು.

ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿತ್ತ ಖಾತೆ,ವಿದೇಶಾಂಗ ಖಾತೆ ಸೇರಿದಂತೆ ವಿವಿಧ ಹುದ್ದೆ ಅಲಂಕರಿಸಿದ್ದ ಅವರು, 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ದಶಕಗಳ ಕಾಲ ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರಕಾರ ಈ ವರ್ಷದ ಜನವರಿಯಲ್ಲಿ 'ಭಾರತ ರತ್ನ' ಪ್ರಶಸ್ತಿ ಘೋಷಿಸಿದ್ದರು.

ಪ್ರಣಬ್​ ಮುಖರ್ಜಿ ಭಾರತ ರತ್ನ

ಇವರ ಜತೆಗೆ ಸಾಮಾಜಿಕ ಕಾರ‍್ಯಕರ್ತ ನಾನಾಜಿ ದೇಶ್‌ಮುಖ್‌ ಹಾಗೂ ಅಸ್ಸೋಂ ಗಾಯಕ ಭೂಪೇನ್‌ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರಕಟಿಸಲಾಗಿತ್ತು. ಹಜಾರಿಕಾ ಅವರ ಪುತ್ರ ತೇಜ್‌, ದೇಶಮುಖ್‌ ಅವರ ಸಮೀಪದ ಬಂಧ ವೀರೇಂದ್ರಜಿತ್‌ ಸಿಂಗ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಹಜಾರಿಕಾ ಮತ್ತು ದೇಶಮುಖ್‌ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಸಂಪುಟದ ಹಲವು ಸಚಿವರು, ಅಸ್ಸಾಂ ಮುಖ್ಯಮಂತ್ರ ಸರ್ಬಾನಂದ ಸೋನಾವಲ್‌, ಇನ್ನಿತರ ಗಣ್ಯರು ಹಾಜರಿದ್ದರು.

Intro:Body:

ಪ್ರಣಬ್​ ಮುಖರ್ಜಿಗೆ 'ಭಾರತ ರತ್ನ'... ಪುರಸ್ಕಾರ ಸ್ವೀಕರಿಸಿದ 5ನೇ ಮಾಜಿ ರಾಷ್ಟ್ರಪತಿ! 

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ 'ಭಾರತ ರತ್ನ' ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಭಾರತದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ ನೀಡಲಾಯಿತು. 

ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿತ್ತ ಖಾತೆ,ವಿದೇಶಾಂಗ ಖಾತೆ ಸೇರಿದಂತೆ ವಿವಿಧ ಹುದ್ದೆ ಅಲಂಕರಿಸಿದ್ದ ಅವರು, 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ದಶಕಗಳ ಕಾಲ ದೇಶಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಪ್ರಧಾನಿ ಮೋದಿ ಸರಕಾರ ಈ ವರ್ಷದ ಜನವರಿಯಲ್ಲಿ 'ಭಾರತ ರತ್ನ' ಪ್ರಶಸ್ತಿ ಘೋಷಿಸಿದ್ದರು. 

ಇವರ ಜತೆಗೆ ಸಾಮಾಜಿಕ ಕಾರ‍್ಯಕರ್ತ ನಾನಾಜಿ ದೇಶ್‌ಮುಖ್‌ ಹಾಗೂ ಅಸ್ಸೋಂ ಗಾಯಕ ಭೂಪೇನ್‌ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರಕಟಿಸಲಾಗಿತ್ತು. ಕಾರ‍್ಯಕ್ರಮದಲ್ಲಿ ದೇಶ್‌ಮುಖ್‌ ಹಾಗೂ ಹಜಾರಿಕಾ ಅವರ ಕುಟುಂಬ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಪಸ್ಥಿತರಿದ್ದರು. 

Conclusion:
Last Updated : Aug 8, 2019, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.