ETV Bharat / bharat

ಅಧಿಕೃತವಾಗಿ ಎನ್‌ಸಿಪಿ ಸೇರಿದ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ - ಬಿಜೆಪಿ ಮುಖಂಡನ ರಾಜೀನಾಮೆ 2020

ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಏಕನಾಥ್ ಖಡ್ಸೆ ಅವರು ಶರದ್ ಪವಾರ್ ನೇತೃತ್ವದಲ್ಲಿ ಅಧಿಕೃತವಾಗಿ ಎನ್‌ಸಿಪಿಗೆ ಸೇರಿದರು. ಪಕ್ಷದ ಪ್ರಧಾನ ಕಚೇರಿಯಲ್ಲಿ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಹಾಗೂ ಪಕ್ಷದ ಮುಖಂಡರು ಖಡ್ಸೆ ಅವರನ್ನು ಬರಮಾಡಿಕೊಂಡರು.

Former Maharashtra BJP leader Eknath Khadse joins NCP
ಅಧಿಕೃತವಾಗಿ ಎನ್‌ಸಿಪಿಗೆ ಸೇರಿದ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ
author img

By

Published : Oct 23, 2020, 6:13 PM IST

ಮುಂಬೈ: ಮಹಾರಾಷ್ಟ್ರದ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಏಕನಾಥ್ ಖಡ್ಸೆ ಇಂದು (ಶುಕ್ರವಾರ) ಶರದ್ ಪವಾರ್ ನೇತೃತ್ವದಲ್ಲಿ ಎನ್​ಸಿಪಿ (Nationalist Congress Party)ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಖಡ್ಸೆ ಅವರ ವಿರುದ್ಧ ಭೂಕಬಳಿಕೆ ಆರೋಪದ ಕೇಳಿಬಂದ ಹಿನ್ನೆಲೆ 2016 ರಲ್ಲಿ ಅಂದಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಸಚಿವ ಸ್ಥಾನದಿಂದ ಕಿತ್ತುಹಾಕುವ ಮೂಲಕ ಅವರನ್ನು ಕಡೆಗಣಿಸಲಾಗಿತ್ತು. ಇದರಿಂದ ಬೇಸರಗೊಂಡ ಖಡ್ಸೆ ಎನ್​ಸಿಪಿ ಸೇರಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ನಾಯಕರ ನಡೆಯಿಂದ ಕಳೆದ ಬುಧವಾರವಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅಂದೇ ತಾವು ಎನ್​ಸಿಪಿ ಸೇರುವುದಾಗಿ ಘೋಷಿಸಿದ್ದರು.

ಇಂದು ಮಧ್ಯಾಹ್ನ ಏಕನಾಥ್ ಖಡ್ಸೆ ಅವರನ್ನು ಔಪಚಾರಿಕವಾಗಿ ಎನ್‌ಸಿಪಿಗೆ ಸೇರಿಸಲಾಗುವುದು ಎಂದು ಪಕ್ಷದ ಮುಖ್ಯಸ್ಥ ಜಯಂತ್ ಪಾಟೀಲ್ ಈ ಹಿಂದೆಯೇ ಹೇಳಿಕೆ ನೀಡಿದ್ದರು. ಈ ಮೂಲಕ ಮಹಾರಾಷ್ಟ್ರದ ರಾಜ್ಯ ರಾಜಕೀಯದ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಅದರಂತೆ ಇಂದು ಒಂದು ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರದಲ್ಲಿ ಏಕನಾಥ್ ಖಡ್ಸೆ ಅವರು ಶರದ್ ಪವಾರ್ ನೇತೃತ್ವದಲ್ಲಿ ಅಧಿಕೃತವಾಗಿ ಎನ್‌ಸಿಪಿಗೆ ಸೇರಿದರು. ಮಹಾರಾಷ್ಟ್ರದ ಚುಕ್ಕಾಣಿ ಹಿಡಿದ 'ಮಹಾ ವಿಕಾಸ್‌ ಅಘಾಡಿ' (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌)ಯ ಆಡಳಿತ ವೈಖರಿಯನ್ನು ಖಡ್ಸೆ ಹೊಗಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಜಕೀಯ ಜಂಜಾಟದಿಂದ ದೂರವೇ ಉಳಿದುಕೊಂಡಿದ್ದ ಏಕನಾಥ್ ಖಡ್ಸೆ, ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಅಂದೇ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಹೇಳಿಕೆ ನೀಡಿದ್ದರು. ಅದರಂತೆ ಇಂದು ಎನ್​ಸಿಪಿ ಸೇರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಖಡ್ಸೆ, ಫಡ್ನವೀಸ್ ಅವರು ನನ್ನ ರಾಜಕೀಯ ಜೀವನವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಫಡ್ನವೀಸ್, ಮಾಜಿ ಬಿಜೆಪಿ ಸಹೋದ್ಯೋಗಿ "ಅರ್ಧ ಸತ್ಯ" ಮಾತನಾಡುತ್ತಿದ್ದಾರೆಂದು ತಿರುಗೇಟು ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.