ETV Bharat / bharat

'ನೀಟ್​' ಕುರಿತ ನಟ ಸೂರ್ಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದಂತೆ ಸಿಜೆಗೆ ಮನವಿ - Suriya

ಸೂರ್ಯ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದಂತೆ ಮುಖ್ಯ ನ್ಯಾಯಮೂರ್ತಿ ಎ ಪಿ ಸಹಿ ಅವರಿಗೆ ಮದ್ರಾಸ್​ ಹೈಕೋರ್ಟ್​ ನಿವೃತ ನ್ಯಾಮೂರ್ತಿಗಳು ಪತ್ರ ಬರೆದಿದ್ದಾರೆ. ಸೂರ್ಯ ಅವರ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಹೀಗಾಗಿ ಸೂರ್ಯ ಅವರ ಹೇಳಿಕೆಯನ್ನು ಕೇವಲ ಅವರ ಒಂದು ಅಭಿಪ್ರಾಯ ಮಾತ್ರವೆಂಬಂತೆ ಪರಿಗಣಿಸಲು ನಿವೃತ ನ್ಯಾಮೂರ್ತಿಗಳು ಎ ಪಿ ಸಹಿ ಅವರಿಗೆ ಪತ್ರ ಬರೆದಿದ್ದಾರೆ.

author img

By

Published : Sep 14, 2020, 10:42 PM IST

ಚೆನ್ನೈ: ಕೊರೊನಾ ಮಹಾಮಾರಿ ಆವರಿಸಿರುವ ಮಧ್ಯೆ ನೀಟ್ ಪರೀಕ್ಷೆ ನಡೆಸುವ ವಿಚಾರವಾಗಿ ತಮಿಳಿನ ಖ್ಯಾತ ನಟ ಸೂರ್ಯ ನೀಡಿದ್ದ ಹೇಳಿಕೆಯನ್ನು ಪರಿಗಣಿಸದಿರುವಂತೆ ಮದ್ರಾಸ್​ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್ ಪ್ರತಾಪ್ ಸಹಿ ಅವರಿಗೆ, ನಿವೃತ ನ್ಯಾಮೂರ್ತಿಗಳು ಪತ್ರ ಬರೆದಿದ್ದಾರೆ.

ನಿನ್ನೆಯಷ್ಟೇ ತಮಿಳು ನಟ ಸೂರ್ಯ, ನೀಟ್ ಪರೀಕ್ಷೆ ಭಯದಿಂದ ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳ ಕನಸನ್ನು ಚಿವುಟಿ ಹಾಕುತ್ತಿರುವ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ ಎಂದು ಒತ್ತಾಯಿಸಿದ್ದರು. ಇದೇ ವೇಳೆ ನಟ ಸೂರ್ಯ, ನ್ಯಾಯಾಲಯದ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಕೋವಿಡ್-19 ಭೀತಿಯಲ್ಲಿ ನ್ಯಾಯಾಲಯಗಳು ವರ್ಚುವಲ್ ವಿಚಾರಣೆ ಮೂಲಕ ನ್ಯಾಯ ನೀಡುತ್ತಿವೆ. ಆದರೆ ವಿದ್ಯಾರ್ಥಿಗಳು ಮಾತ್ರ ಯಾವುದೇ ಭಯವಿಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಹೋಗಿ ನೀಟ್ ಪರೀಕ್ಷೆ ಬರೆಯಿರಿ ಎಂದು ಹೇಳುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದರು.

ಇದಾದ ಬಳಿಕ ನ್ಯಾಯಾಲಯದ ಆದೇಶದ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಮದ್ರಾಸ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎ ಪಿ ಸಹಿ ಅವರಿಗೆ ನ್ಯಾಯಾಧೀಶರಾದ ಎಸ್ ಎಂ ಸುಬ್ರಹ್ಮಣ್ಯಂ ಪತ್ರದ ಮೂಲಕ ಒತ್ತಾಯಿಸಿದ್ದರು.

ಸೂರ್ಯ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾಯಾಧೀಶ ಎಸ್ ಎಂ ಸುಬ್ರಹ್ಮಣ್ಯಂ, ನಟ ಸೂರ್ಯ ಅವರ ಪ್ರಕಾರ, ನ್ಯಾಯಾಧೀಶರು ಮಾತ್ರ ತಮ್ಮ ಸ್ವಂತ ಜೀವದ ಭಯದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆ ಬರೆಯಿರಿ ಎಂದು ಆದೇಶ ನೀಡುವ ಮೂಲಕ ಅಮಾನವೀಯತೆ ಪ್ರದರ್ಶಿಸಿದೆ. ಕೋರ್ಟ್​ ನೈತಿಕತೆ ತೋರಿಸುತ್ತಿಲ್ಲ ಎಂಬರ್ಥದಲ್ಲಿ ಸೂರ್ಯ ಹೇಳಿಕೆ ನೀಡಿದ್ದಾರೆ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಧೀಶರ ಮೇಲೆ ನಟ ಸೂರ್ಯಗೆ ಗೌರವ ಇಲ್ಲ ಎಂಬುದನ್ನು ಈ ಹೇಳಿಕೆ ತೋರಿಸುತ್ತದೆ. ನನ್ನ ಅಭಿಪ್ರಾಯದಲ್ಲಿ ಇದು ನ್ಯಾಯಾಂಗ ನಿಂದನೆ ಎಂದು ಸುಬ್ರಹ್ಮಣ್ಯಂ ಆರೋಪಿಸಿದ್ದರು.

Actor Suriya statement
ಮುಖ್ಯ ನ್ಯಾಯಮೂರ್ತಿಗೆ ಪತ್ರ-1

ಆದರೆ ಇದೇ ವಿಚಾರವಾಗಿ ಸೂರ್ಯ ಪರವಾಗಿ ನಿಂತಿರುವ ಮದ್ರಾಸ್​ ಹೈಕೋರ್ಟ್​ ನಿವೃತ ನ್ಯಾಮೂರ್ತಿಗಳು, ಸೂರ್ಯ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದಂತೆ ಮುಖ್ಯ ನ್ಯಾಯಮೂರ್ತಿ ಎ ಪಿ ಸಹಿ ಅವರಿಗೆ ಪತ್ರ ಬರೆದಿದ್ದಾರೆ. ಸೂರ್ಯ ಅವರ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಹೀಗಾಗಿ ಸೂರ್ಯ ಅವರ ಹೇಳಿಕೆಯನ್ನು ಕೇವಲ ಅವರ ಒಂದು ಅಭಿಪ್ರಾಯ ಮಾತ್ರವೆಂಬಂತೆ ಪರಿಗಣಿಸಲು ನಿವೃತ ನ್ಯಾಮೂರ್ತಿಗಳು ಎ ಪಿ ಸಹಿ ಅವರಿಗೆ ಪತ್ರ ಬರೆದಿದ್ದಾರೆ.

Actor Suriya statement
ಮುಖ್ಯ ನ್ಯಾಯಮೂರ್ತಿಗೆ ಪತ್ರ-2

ಕೊರೊನಾ ಹಿನ್ನೆಲೆಯಲ್ಲಿ ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಮಾಡಿಕೊಂಡಿದ್ದ ಮನವಿಯನ್ನು ಕಳೆದ ಆಗಸ್ಟ್ 17ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.