ಮಥುರಾ(ಉತ್ತರ ಪ್ರದೇಶ): ವೃಂದಾವನ್ ಕೊತವಾಲಿ ಪ್ರದೇಶದ ಕಟ್ಟಡದಲ್ಲಿ ಹಲವಾರು ತಿಂಗಳುಗಳಿಂದ ವಾಸಿಸುತ್ತಿದ್ದ, 40 ವರ್ಷದ ವಿದೇಶಿ ಮಹಿಳೆ ಐದನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಎಲ್ಐಯು ತಂಡ ಸ್ಥಳಕ್ಕೆ ಧಾವಿಸಿ, ಮೃತ ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಮಹಿಳೆ ರಷ್ಯಾ ಮೂಲದವರೆಂದು ಹೇಳಲಾಗುತ್ತಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವೃಂದಾವನ್ನ ಕೊತವಾಲಿ ಪ್ರದೇಶದ ವೃಂದಾವನ್ ಧಾಮ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ, ವಿದೇಶಿ ಮಹಿಳೆ ತಾನ್ಯಾ ಹೆಮೆಲೋಷ್ಕಿಯಾ ಶನಿವಾರ ತಡರಾತ್ರಿ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಓದಿ:ದೆಹಲಿ ಆಕಾಶವಾಣಿ ಭವನದಲ್ಲಿ ಅಗ್ನಿ ಅವಘಡ
ರಷ್ಯಾದ ಮಹಿಳೆ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಸಿಟಿ ಎಮ್. ಪಿ. ಸಿಂಹ ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಮತ್ತು ವಿಧಿವಿಜ್ಞಾನ ತನಿಖಾ ತಂಡ ಸ್ಥಳಕ್ಕೆ ತಲುಪಿದೆ. ತಾನ್ಯಾ ಬಹಳ ದಿನಗಳಿಂದ ಭಗವಾನ್ ಕೃಷ್ಣನನ್ನು ಭೇಟಿಯಾಗಬೇಕೆಂದು ಒತ್ತಾಯಿಸುತ್ತಿದ್ದಳು ಎಂದು ಮೃತ ಮಹಿಳೆಯ ಸ್ನೇಹಿತ ಹೇಳಿದ್ದಾರೆ.