ETV Bharat / bharat

ನೆರವಾಗಲು ಬಂದು ಪರದಾಟ: ಏಮ್ಸ್​ನಲ್ಲಿ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದೇಶಿ ವೈದ್ಯರು - ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದೇಶಿ ವೈದ್ಯರು

ಕೋವಿಡ್​ ವಿರುದ್ಧ ಹೋರಾಡಲು ನೆರವಾಗುವ ಸಲುವಾಗಿ ವಿವಿಧ ದೇಶಗಳಿಂದ ಬಂದು ದೆಹಲಿಯ ಏಮ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ವೇತನ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Foreign doctors fighting COVID-19 at Delhi AIIMS  want salaries
ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದೇಶಿ ವೈದ್ಯರು
author img

By

Published : May 19, 2020, 9:01 AM IST

ನವದೆಹಲಿ: ಏಮ್ಸ್​ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 70 ವಿದೇಶಿ ವೈದ್ಯರು ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಬಾಂಗ್ಲಾದೇಶದ ವೈದ್ಯರ ತಂಡ ಆಯಾ ದೇಶದ ಪ್ರಾಯೋಜಕತ್ವದಲ್ಲಿ ಕೋವಿಡ್​ ವಿರುದ್ಧ ಹೋರಾಡಲು ಭಾರತಕ್ಕೆ ನೆರವಾಗುವ ಸಲುವಾಗಿ ಏಮ್ಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಾಕ್​ ಡೌನ್​ನಿಂದಾಗಿ ಅವರ ದೇಶದ ಬ್ಯಾಂಕ್​ಗಳು ಬಂದ್​ ಆಗಿರುವ ಕಾರಣ ವೇತನ ಸಿಕ್ಕಿಲ್ಲ. ಹೀಗಾಗಿ ವೈದ್ಯರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯಕ್ಕೆ ತಮ್ಮ ಸಹೋದ್ಯೋಗಿಗಳನ್ನು ಅವಲಂಬಿತರಾಗಿದ್ದಾರೆ.

ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದೇಶಿ ವೈದ್ಯರು

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಏಮ್ಸ್​ ರೆಸಿಡೆನ್ಶಿಯಲ್ ವೈದ್ಯರ ಸಂಘ, ನಿಯಮಗಳಲ್ಲಿ ತಿದ್ದುಪಡಿ ತಂದು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ವೈದ್ಯರಿಗೆ ವೇತನ ನೀಡಬೇಕು ಎಂದು ಮನವಿ ಮಾಡಿದೆ.

ವಿದೇಶಿ ವೈದ್ಯರ ವೇತನ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವ ಅಗತ್ಯವಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅವರ ಬಾಕಿ ವೇತನವನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಏಮ್ಸ್​ ಆರ್​ಡಿಎ ಅಧ್ಯಕ್ಷ ಆದರ್ಶ್​ ಪ್ರತಾಪ್​ ಸಿಂಗ್​ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.