ನವದೆಹಲಿ: ಈಗಾಗಲೇ ಬಡವರು, ವಲಸೆ ಕಾರ್ಮಿಕರು, ರೈತರು, ಮೀನುಗಾರರು ಸೇರಿದಂತೆ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಹಲವು ಕೊಡುಗೆಗಳನ್ನು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಮತ್ತೊಂದು ಪ್ಯಾಕೇಜ್ ಘೋಷಿಸಲಿದ್ದಾರೆ.

ಸರ್ಕಾರದ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಕುರಿತು ನಾಲ್ಕನೇ ಹಂತದ ಪ್ರಕಟಣೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ನಂತರ ಹಣಕಾಸು ಸಚಿವರು ನಡೆಸುತ್ತಿರುವ ನಾಲ್ಕನೇ ಸುದ್ದಿಗೋಷ್ಠಿ ಇದಾಗಿದೆ.

ಕೇಂದ್ರದ ಆರ್ಥಿಕ ಪ್ಯಾಕೇಜ್ ಕುರಿತು ಎರಡನೇ ಮತ್ತು ಮೂರನೇ ಹಂತದ ಪ್ರಕಟಣೆಯನ್ನು ಗುರುವಾರ ಮತ್ತು ಶುಕ್ರವಾರ ಮಾಡಲಾಗಿದೆ. ರೈತರ ಶಕ್ತಿಯನ್ನು ಹೆಚ್ಚಿಸುವ ಅಥವಾ ಕೃಷಿ ಆದಾಯದಲ್ಲಿ ಲಾಭದ ಪಾಲನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸುಧಾರಣಾ ಕ್ರಮಗಳ ಮಿಶ್ರಣವನ್ನು ಹಣಕಾಸು ಸಚಿವರು ಶುಕ್ರವಾರ ಪ್ರಕಟಿಸಿದ್ದರು.
