ಹೈದರಾಬಾದ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬೇಡಿಕೆಯನ್ನ ಆದರಿಸಿದ್ದಾಗಿದೆ. ಎಷ್ಟು ಹಣದ ಬೇಡಿಕೆ ಬಂದಿರುತ್ತದೆಯೋ ಅದಕ್ಕೆ ತಕ್ಕಂತೆ ಹಣ ಒದಗಿಸುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ.
ಎಂಜಿಎನ್‌ಆರ್‌ಇಜಿಎಗೆ ಕಡಿಮೆ ಹಣಕಾಸು ಹಂಚಿಕೆ ಬಗ್ಗೆ ಈಟಿವಿ ಭಾರತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ' 2019 ರ ಜುಲೈನಲ್ಲಿ ಘೋಷಿಸಿದ ಬಜೆಟ್ ಅಂದಾಜಿಗೆ ಹೋಲಿಸಿದರೆ ಯಾವುದೇ ಯೋಜನೆಗೆ ನಾವು 2020ರ ಬಜೆಟ್ನಲ್ಲಿ ಕಡಿಮೆ ಮಾಡಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬೇಡಿಕೆಯನ್ನ ಆದರಿಸಿದ್ದಾಗಿದೆ. ಎಷ್ಟು ಹಣದ ಬೇಡಿಕೆ ಬಂದಿರುತ್ತದೆಯೋ ಅದಕ್ಕೆ ತಕ್ಕಂತೆ ಹಣ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
ಬಜೆಟ್ ದಾಖಲೆಯ ಪ್ರಕಾರ, ಎಂಜಿಎನ್‌ಆರ್‌ಇಜಿಎಗೆ 2019-20ರ ಬಜೆಟ್ ಅಂದಾಜಿನಲ್ಲಿ 71,000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿತ್ತು. ಇದೀಗ 2020-21ರ ಹಣಕಾಸು ವರ್ಷದಲ್ಲಿ ಇದು 61,500 ಕೋಟಿ ರೂ. ಆಗಿದೆ. 10,500 ಕೋಟಿ ಕೋಟಿ ರೂಪಾಯಿ ಕಡಿಮೆ ಹಣ ಘೋಷಣೆ ಮಾಡಲಾಗಿದೆ.
ಗ್ರಾಮೀಣ ಅಭಿವೃದ್ಧಿ ಇಲಾಖೆಗೆ 2019-20ರಲ್ಲಿ 1,17,647 ಕೋಟಿ ಮತ್ತು 2020-21ರಲ್ಲಿ 1,20,147 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ನರೇಗಾ ಯೋಜನೆಗೆ 2019-20ರಲ್ಲಿ 60,000 ಕೋಟಿ ಮತ್ತು 2020-21ರ ಬಜೆಟ್ನಲ್ಲಿ 61,500 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಮಾಹಿತಿ ನೀಡಿದ್ದಾರೆ.