ETV Bharat / bharat

ವಿತ್ತ ಸಚಿವೆ ಜೊತೆ ನಿಗದಿಯಾಗಿದ್ದ ಬ್ಯಾಂಕ್​ ಸಿಇಒಗಳ ಸಭೆ ಮುಂದೂಡಿಕೆ - ಕೋವಿಡ್​ -19

ಕೋವಿಡ್​ -19 ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಸಮಸ್ಯೆಯ ಭಾಗವಾಗಿ ಪುನಶ್ಚೇತನಕ್ಕೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕ್ರೆಡಿಟ್ ಆಫ್‌ಟೇಕ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹಾಗೂ ಬಡ್ಡಿದರ ಪ್ರಸರಣದ ಸ್ಟಾಕ್ ತೆಗೆದುಕೊಳ್ಳುವುದು ಮತ್ತು ಸಾಲ ಮರುಪಾವತಿಯ ಮೇಲಿನ ನಿಷೇಧದ ಬಗ್ಗೆ ಚರ್ಚಿಸಲು ಕಾರ್ಯಸೂಚಿಯಲ್ಲಿ ತಿಳಿಸಲಾಗಿತ್ತು.

FM meeting with heads of public sector banks gets deferred
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
author img

By

Published : May 11, 2020, 12:49 PM IST

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರೊಂದಿಗೆ ನಿಗದಿಯಾಗಿದ್ದ ಸಾರ್ವಜನಿಕ ವಲಯದ ಬ್ಯಾಂಕ್​ ಗಳ (ಪಿಎಸ್‌ಬಿ) ಸಿಇಒಗಳ ಪರಿಶೀಲನಾ ಸಭೆಯು ಮುಂದೂಡಿಕೆಯಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ನಿಗದಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೋವಿಡ್​ -19 ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಸಮಸ್ಯೆಯ ಭಾಗವಾಗಿ ಪುನಶ್ಚೇತನಕ್ಕೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕ್ರೆಡಿಟ್ ಆಫ್‌ಟೇಕ್ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹಾಗೂ ಬಡ್ಡಿದರ ಪ್ರಸರಣದ ಸ್ಟಾಕ್ ತೆಗೆದುಕೊಳ್ಳುವುದು ಮತ್ತು ಸಾಲ ಮರುಪಾವತಿಯ ಮೇಲಿನ ನಿಷೇಧದ ಬಗ್ಗೆ ಚರ್ಚಿಸಲು ಕಾರ್ಯಸೂಚಿಯಲ್ಲಿ ತಿಳಿಸಲಾಗಿತ್ತು.

ಆರ್‌ಬಿಐ ಮಾರ್ಚ್ 27 ರಂದು ಬೆಂಚ್‌ ಮಾರ್ಕ್ ಬಡ್ಡಿದರವನ್ನು 75 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿತ್ತು ಮತ್ತು ಲಾಕ್‌ಡೌನ್‌ನಿಂದಾಗಿ ಸಮಸ್ಯೆಗೆ ತುತ್ತಾದ ಸಾಲಗಾರರಿಗೆ ಪರಿಹಾರ ಒದಗಿಸಲು ಬ್ಯಾಂಕುಗಳು ಮೂರು ತಿಂಗಳ ಕಂತು ಪಾವತಿ ಮಾಡುವುದನ್ನು ಬೇಡ ಎಂದು ಹೇಳಿತ್ತು ಈ ಬಗ್ಗೆ ಕೂಡ ಚರ್ಚೆ ನಡೆಸುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.