ETV Bharat / bharat

160 ಅಡಿ ಎತ್ತರದಲ್ಲಿ 'ಫ್ಲೈ ಡೈನಿಂಗ್​ ರೆಸ್ಟೋರೆಂಟ್', ಈ ಥ್ರಿಲ್​ ಬೇಕಂದ್ರೆ ನೋಯ್ಡಾಗೆ ಹೋಗಿ

ಗ್ರೇಟರ್​ ನೋಯ್ಡಾದಲ್ಲೊಂದು ರೆಸ್ಟೋರೆಂಟ್​ ಇದೆ. ಅದು ಎಲ್ಲಾ ರೆಸ್ಟೋರೆಂಟ್​ಗಳಂತಿಲ್ಲ. ಇದು ಹಾರುವ ರೆಸ್ಟೋರೆಂಟ್​. ಭೂಮಿಯಿಂದ ಸುಮಾರು 160 ಅಡಿ ಎತ್ತರದಲ್ಲಿ ಕುಳಿತು ಆಹಾರ ಸವಿಯುವ ಥ್ರಿಲ್ಲಿಂಗ್​ ಅನುಭವವನ್ನು ಈ ರೆಸ್ಟೋರೆಂಟ್​ ನಿಮಗೆ ನೀಡುತ್ತದೆ.

'ಫ್ಲೈ ಡೈನಿಂಗ್​ ರೆಸ್ಟೋರೆಂಟ್
author img

By

Published : Oct 8, 2019, 4:13 PM IST

ನೋಯ್ಡಾ(ಉತ್ತರ ಪ್ರದೇಶ): ಇಲ್ಲಿನ ಸೆಕ್ಟರ್​ 38ರಲ್ಲಿ ಒಂದು ವಿಶೇಷ ರೆಸ್ಟೋರೆಂಟ್​ ಇದೆ. ಈ ರೆಸ್ಟೋರೆಂಟ್​ ನಿಮಗೆ ಸಾಹಸಮಯ ಅನುಭವವನ್ನು ಉಣಬಡಿಸುತ್ತದೆ.

ಇದು 'ಫ್ಲೈ ಡೈನಿಂಗ್​ ರೆಸ್ಟೋರೆಂಟ್'​. ಭೂಮಿಯಿಂದ ಸುಮಾರು 160 ಅಡಿ ಎತ್ತರದಲ್ಲಿ ಕುಳಿತು ರುಚಿರುಚಿಯಾದ ಆಹಾರ ಸವಿಯುವ ಅವಕಾಶ ಇಲ್ಲಿ ಸಿಗುತ್ತದೆ.

24 ಸೀಟುಗಳುಳ್ಳ ದೊಡ್ಡ ಟೇಬಲ್​ನಲ್ಲಿ ಕುಳಿತುಕೊಂಡರೆ ಸಾಕು. ಕ್ರೇನ್​ ಮೂಲಕ 'ಈ ಫ್ಲೈ ಡೈನಿಂಗ್​ ರೆಸ್ಟೋರೆಂಟ್'ಅನ್ನು ಮೇಲಕ್ಕೆತ್ತಲಾಗುತ್ತದೆ. ರೆಸ್ಟೋರೆಂಟ್​ನ ಸಪ್ಲೈಯರ್​ ಹಾಗೂ ಇತರ ಸಿಬ್ಬಂದಿಗೆ ಸಂಚರಿಸಲು ಇದರೊಳಗೆ ಕಡಿಮೆ ಸ್ಥಳಾವಕಾಶವಿದೆ.

ನಿಖಿಲ್​ ಕುಮಾರ್​ ಎಂಬವರು ದುಬೈನಲ್ಲಿ ಕಂಡ ಇಂತಹ ಒಂದು ಯೋಜನೆಯಿಂದ ಪ್ರೇರಿತರಾಗಿ ಈ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಅಲ್ಲದೆ ಸುರಕ್ಷತಾ ದೃಷ್ಟಿಯಿಂದ ಗರ್ಭಿಣಿಯರು ಹಾಗೂ ಸಣ್ಣ ಮಕ್ಕಳಿಗೆ ಈ ರೆಸ್ಟೋರೆಂಟ್​ಗೆ ಹೋಗಲು ಅವಕಾಶ ನೀಡೋದಿಲ್ಲ.

ಈ ರೆಸ್ಟೋರೆಂಟ್​ ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರೆಯಲಾಗುತ್ತದೆ. ಗಾಳಿಯಲ್ಲಿ ಆಹಾರ ಸೇವಿಸಲು ಇಚ್ಛಿಸುವವರು ಸುಮಾರು 40 ನಿಮಿಷಗಳವರೆಗೆ ಈ ರೆಸ್ಟೋರೆಂಟ್​ನಲ್ಲಿ ಎಂಜಾಯ್​ ಮಾಡಬಹುದು.

Intro:Body:

Fly Dining restaurant

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.