ETV Bharat / bharat

ವರುಣಾರ್ಭಟಕ್ಕೆ ಉತ್ತರಾಖಂಡ ತತ್ತರ: ಪ್ರವಾಹದಿಂದ ಕೊಚ್ಚಿ ಹೋದ 20 ಮನೆಗಳು, 18 ಜನ ನಾಪತ್ತೆ! - ಉತ್ತರಾಖಾಂಡ್

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರಾಖಂಡ​ ತತ್ತರಿಸಿದೆ. ರಾಜ್ಯದಲ್ಲಿ ಈವರೆಗೆ ಮಳೆ ಹಾಗೂ ಪ್ರವಾಹದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದು, ಸುಮಾರು ನೂರಾರು ಜನರು ನಾಪತ್ತೆಯಾಗಿರುವ ಬಗ್ಗೆ ಸರ್ಕಾರ ವರದಿ ಬಿಡುಗಡೆ ಮಾಡಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ವರುಣಾರ್ಭಟಕ್ಕೆ ಉತ್ತರಾಖಾಂಡ್​ ತತ್ತರ
author img

By

Published : Aug 18, 2019, 7:20 PM IST

Updated : Aug 18, 2019, 7:35 PM IST

ಡೆಹ್ರಾಡೂನ್​(ಉತ್ತರಾಖಾಂಡ್​): ಇಲ್ಲಿನ ಟೋನ್ಸ್​ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇಂದು ರಭಸವಾಗಿ ಹರಿದು ಬಂದ ಪ್ರವಾಹದಿಂದಾಗಿ ಉತ್ತರಕಾಶಿ ಜಿಲ್ಲೆಯ ಕನಿಷ್ಟ 20 ಮನೆಗಳು ಕೊಚ್ಚಿ ಹೋಗಿವೆ. ಹೀಗಾಗಿ ಸುಮಾರು 18 ಜನರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿವೆ.

ಉತ್ತರಕಾಶಿಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭಾರಿ ಪ್ರವಾಹವು ಇತ್ತೀಚೆಗೆ ಇಲ್ಲಿನ ಸ್ಥಳೀಯ ಮಾರುಕಟ್ಟೆಗಳನ್ನು ತಿಂದುಬಿಟ್ಟಿತ್ತು. ಬಳಿಕ ಇಲ್ಲಿನ ಸರ್ಕಾರವು ಸ್ಥಳಿಯ ಜನತೆಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿತ್ತು.

ಪ್ರವಾಹದಿಂದ ತತ್ತರಿಸಿರುವ ಉತ್ತರಕಾಶಿ ಜಿಲ್ಲೆಯ ಭಾಗಗಳಲ್ಲಿ ರಕ್ಷಣಾ ಕಾರ್ಯ ನಡೆಸಿ, ನಿರಾಶ್ರಿತರನ್ನು ಸ್ಥಳಾಂತರಿಸುವಂತೆ ಉತ್ತರಾಖಾಂಡ​ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಉತ್ತರಕಾಶಿ ಜಿಲ್ಲಾಧಿಕಾರಿ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಪ್ರವಾಹದಿಂದ ಕೊಚ್ಚಿ ಹೋದ 20 ಮನೆಗಳು,

ಸರ್ಕಾರವು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಿದ್ದರೂ, ಹಲವೆಡೆ ಪ್ರವಾಹಗಳಿಂದ ಅನಾಹುತಗಳೇ ಸಂಭವಿಸಿದೆ. ಹಲವೆಡೆ ರಸ್ತೆ ಹಾಗೂ ಹಲವು ರೈಲು ಮಾರ್ಗಗಳು ಹಾಳಾಗಿವೆ. ಈ ಭಾಗದ ಪ್ರಮುಖ ರಸ್ತೆಯಾದ ಗಂಗೋತ್ರಿ ರಸ್ತೆಯು ಭೂಕುಸಿತಂದಿಂದಾಗಿ ಮುಚ್ಚಿದೆ.

ಉತ್ತರ ಕಾಶಿ, ಚಮೋಲಿ, ಪಿತೋರಾಘರ್​, ಡೆಹ್ರಾಡೂನ್​, ಪೌರಿ ಸೇರಿದಂತೆ ನೈನಿತಾಲ್​ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಮತ್ತೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರವಾಹದಿಂದಾಗಿ 5000 ರಸ್ತೆಗಳು, 200 ಸೇತುವೆಗಳು ಹಾಗೂ ಅಸಂಖ್ಯಾತ ಕಟ್ಟಡಗಳು ಕೊಚ್ಚಿಕೊಂಡು ಹೋಗಿವೆ.

Intro:Body:Conclusion:
Last Updated : Aug 18, 2019, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.