ETV Bharat / bharat

5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಬೇಕಿದೆ ಈ ಐದು ಸುಧಾರಣೆಗಳು - ನಿರ್ಮಲಾ ಸೀತಾರಾಮನ್ ವಾರ್ಷಿಕ ಬಜೆಟ್

5 ಟ್ರಿಲಿಯನ್ ಡಾಲರ್​​​​ ಆರ್ಥಿಕತೆ ಗುರಿಯನ್ನು ತಲುಪಲು 2019-20ರ ಆರ್ಥಿಕ ಸಮೀಕ್ಷೆಯೂ ಐದು ಸುಧಾರಣೆಗಳನ್ನು ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಬಜೆಟ್ ಮಂಡಿಸುವಾಗ ಈ ವಿಷಯಗಳಿಗೆ ಒತ್ತು ನೀಡಲಿದ್ದಾರೆ.

5 Trillion Dollar Economy
5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಐದು ಸುಧಾರಣೆಗಳು
author img

By

Published : Jan 31, 2020, 11:13 PM IST

ನವದೆಹಲಿ: 2019-20ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು. ಹಲವು ದಶಕಗಳಿಂದ ದೇಶದ ಆರ್ಥಿಕತೆಯಲ್ಲಿ ಬದಲಾವಣೆಯಾಗುತ್ತಿದೆ. ಸಮೀಕ್ಷೆಗಳು ಕೂಡ ಹಾಗೆ ಹೇಳುತ್ತಿವೆ. ಭವಿಷ್ಯದಲ್ಲಿ 5 ಟ್ರಿಲಿಯನ್​​​ ಡಾಲರ್​​​ ಆರ್ಥಿಕತೆ ಗುರಿಯನ್ನು ತಲುಪಲು ಹಲವು ನೀತಿಗಳನ್ನು ರೂಪಿಸಬೇಕಾಗಿದೆ.

ಈ ದೃಷ್ಟಿಕೋನದಿಂದ, ಸಮೀಕ್ಷೆಯು ಐದು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಬಜೆಟ್ ಮಂಡಿಸುವಾಗ ಈ ವಿಷಯಗಳಿಗೆ ಒತ್ತು ನೀಡಲಿದ್ದಾರೆ ಎನ್ನಲಾಗ್ತಿದೆ.

1. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಸುಧಾರಣೆ: ಸಮೀಕ್ಷೆ ಪ್ರಕಾರ ಒಂದು ರೆಸ್ಟೋರೆಂಟ್ ತೆರೆಯಲು, ದೆಹಲಿ ಪೊಲೀಸರಿಂದ ಅನುಮತಿ ಪಡೆಯಲು ಬಹಳ ಸಮಯ ಕಾಯಬೇಕಾಗುತ್ತದೆ. ಆದ್ರೆ ನ್ಯೂಜಿಲೆಂಡ್‌ನಲ್ಲಿ ಅರ್ಧ ದಿನದಲ್ಲಿ ಒಂದು ಕಂಪನಿಯನ್ನ ಪ್ರಾರಂಭಿಸಬಹುದಾಗಿದೆ. ಈ ರೀತಿಯ ಸುಧಾರಣೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಆಗಬೇಕೆಂದು ಸಮೀಕ್ಷೆ ಹೇಳಿದೆ.

2. ಸಾಲ ನೀಡುವಲ್ಲಿ ಹೆಚ್ಚಳ: ಭಾರತೀಯ ಬ್ಯಾಂಕಿಂಗ್​​​ ಕ್ಷೇತ್ರವೂ ಸಬ್‌ಪ್ಟಿಮಲ್ ಸ್ಕೇಲ್ ಹಂತದಲ್ಲಿದೆ. ಬ್ಯಾಂಕ್​ಗಳಿಂದ ಹೆಚ್ಚು ಹೆಚ್ಚು ಸಾಲವೂ ಜನರಿಗೆ ಸಿಗುವಂತಾಗಬೇಕೆಂದು ಸಮೀಕ್ಷೆ ಹೇಳಿದೆ.

3. ಸರಿಯಾದ ಪ್ಲಾನಿಂಗ್​​ ಅವಶ್ಯಕ: ಭಾರತದಲ್ಲಿ ಉತ್ಪಾದನೆಯೂ ಕೇವಲ ಅರ್ಧ ಡಜನ್ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. 1000-1500 ಕಿ.ಮೀ. ದೂರವನ್ನು ಕ್ರಮಿಸಲು ಕಲ್ಲಿದ್ದಲಿನ ಬೆಲೆ ಪಿಟ್ ಹೆಡ್ ಬೆಲೆಯ ಸುಮಾರು ಮೂರು ಪಟ್ಟು ಹೆಚ್ಚಾಗುತ್ತದೆ. ಒಟ್ಟಾರೆ ಭಾರತವು ಜಿಡಿಪಿಯ ಶೇಕಡಾ 14 ಕ್ಕಿಂತ ಕಡಿಮೆ ಹಣವನ್ನು ಲಾಜಿಸ್ಟಿಕ್ಸ್​​ಗಾಗಿ ಖರ್ಚು ಮಾಡುತ್ತದೆ. ಭಾರತದಲ್ಲಿ ಆಮದಿಗಿಂತ ರಫ್ತು ಹೆಚ್ಚಾಗಿದೆ, ಇದನ್ನು ಕಡಿಮೆ ಮಾಡಬೇಕಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

4. ಉದ್ಯೋಗ: ವಿಶ್ವದ ಯಾವುದೇ ಆರ್ಥಿಕತೆಗೆ ಉದ್ಯೋಗಗಳು ಬೇಕಾಗುತ್ತವೆ. ಭಾರತದಲ್ಲಿ ಸುಮಾರು 130 ಕೋಟಿಗೂ ಅಧಿಕ ಜನರಿದ್ದು, ಅವರೆಲ್ಲರಿಗೂ ಉದ್ಯೋಗದ ಅವಶ್ಯಕತೆ ಇದೆ. ಮುಂದಿನ ಎರಡು ವರ್ಷಗಳಲ್ಲಿ ನಾವು ಚೀನಾವನ್ನು ಜನಸಂಖ್ಯೆಯಲ್ಲಿ ಹಿಂದಿಕ್ಕುತ್ತಿದ್ದೇವೆ. ಹಾಗೂ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ ಆಗಲಿದೆ. ಹಾಗಾಗಿ ಯುವಕರಿಗೆ ಭಾರತವು ಸರಿಯಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ದಾರಿ ಮಾಡಿಕೊಡಬೇಕು ಮತ್ತು ಉದ್ಯಮಶೀಲತೆಯನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಬೇಕು.

5. ಉಚಿತ ಕೃಷಿ-ಆರ್ಥಿಕತೆ: ಭಾರತದಲ್ಲಿ ಆಹಾರ ಕೊರತೆ ಇದ್ದು, ಇದು ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ಕೃಷಿಯ ಮೇಲೆ ರಾಜಕೀಯ ಹಸ್ತಕ್ಷೇಪವಾದಾಗ ಅದರಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಈರುಳ್ಳಿಯ ಬೆಲೆ ಹೆಚ್ಚಳವಾದಾಗ ಅದನ್ನು ಕಡಿಮೆ ಮಾಡಲು ಸರಿಯಾದ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕು. ಏಕೆಂದರೆ ಇದು ಶೇಖರಣೆ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ.

ಈ ಎಲ್ಲ ಕ್ಷೇತ್ರಗಳಲ್ಲಿ ಹಲವಾರು ನೀತಿಗಳನ್ನು ರೂಪಿಸಿ, ಅವುಗಳನ್ನು ಜಾರಿಗೆ ತಂದಾಗ ಮಾತ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ತಲುಪಬಹುದಾಗಿದೆ ಎಂದು ಸಮೀಕ್ಷೆ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.