ETV Bharat / bharat

ಎಎಸ್ಐ ಕೈ ಕತ್ತರಿಸಿದ ಆಘಾತಕಾರಿ ಪ್ರಕರಣ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ,11 ಮಂದಿ ಬಂಧನ - Five Nihangs arrested for assault on cops

ಪಂಜಾಬ್ ಪೊಲೀಸರ ಮೇಲೆ ಹಲ್ಲೆ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Five Nihangs arrested for assault on cops

author img

By

Published : Apr 12, 2020, 8:03 PM IST

Updated : Apr 12, 2020, 8:29 PM IST

ಚಂಡೀಗಢ: ಲಾಕ್​ಡೌನ್ ವೇಳೆ ವಾಹನದಲ್ಲಿ ಚಲಾಯಿಸುತ್ತಿದ್ದವರ ಬಳಿ ಪಾಸ್​ ಕೇಳಿದ್ದಕ್ಕಾಗಿ ಎಎಸ್​ಐ ಕೈ ಕತ್ತರಿಸಿ, ಮತ್ತಿಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ವಾಹನ ತಡೆದಿದ್ದಕ್ಕೆ ಎಸ್​ಐ​ ಕೈ ಕತ್ತರಿಸಿ, ಪೇದೆಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಇಂದು ನಸುಕಿನ ಜಾವ ಚೆಕ್​ಪೋಸ್ಟ್​ ಬಳಿ ಎಎಸ್​ಐ ಹರ್ಜೀತ್​ ಸಿಂಗ್​ ಸೇರಿದಂತೆ ಅನೇಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬ್ಯಾರಿಕೇಡ್​ ಮುರಿದು ಪರಾರಿಯಾಗಿದ್ದರು. ಇವರೆಲ್ಲರೂ ಸಿಖ್​ನ ನಿಹಂಗರು ಎಂದು ಗುರುತಿಸಲಾಗಿತ್ತು.

ವಾಹನ ತಡೆದಿದ್ದಕ್ಕೆ ಎಸ್​ಐ​ ಕೈ ಕತ್ತರಿಸಿ, ಪೇದೆಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!

ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಪಂಜಾಬ್​ ಪೊಲೀಸರು ಬಲೆ ಬೀಸಿದ್ದರು. ಇದೀಗ ಐವರು ನಿಹಂಗರು ಸೇರಿದಂತೆ 11 ಮಂದಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಎಎಸ್​ಐ ಕೈಗೆ ಪಟಿಯಾಲದಲ್ಲಿ ಯಶಸ್ವಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

Last Updated : Apr 12, 2020, 8:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.