ಆಂಧ್ರ ಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ ಒಂದು ಪುಟ್ಟ ಮಗು ಸೇರಿ ಒಂದೇ ಕುಟುಂಬದ ಐದು ಜನರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕೊಠಪಲ್ಲಿ ಸೇತುವೆ ಬಳಿ ನಡೆದಿದೆ.
ಸಿಂಹಾಸ್ರಿ ಅಪ್ಪಣ್ಣ ದೇವಾಲಯಕ್ಕೆ ಭೇಟಿ ನೀಡಿ ಒಡಿಶಾದ ಬ್ರಹ್ಮಪುತ್ರಕ್ಕೆ ತೆರಳುತ್ತಿರುವ ವೇಳೆ ಕೊಠಪಲ್ಲಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದಿದೆ. ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಘಟನೆಯಿಂದ ಪಾರಾಗಲು ಯಾರೊಬ್ಬರಿಗೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಮೃತರು ಒಡಿಶಾ ರಾಜ್ಯದ ಭುವನೇಶ್ವರದವರು ಎಂದು ತಿಳಿದು ಬಂದಿದೆ.