ETV Bharat / bharat

ಬಾವಿಯಲ್ಲಿ ಬಿದ್ದ ಕರು ರಕ್ಷಣೆ ಮಾಡಲು ಹೋಗಿ ಐವರು ದುರ್ಮರಣ - ಐವರು ದುರ್ಮರಣ

ಕರು ರಕ್ಷಣೆ ಮಾಡಲು ಹೋಗಿ ಬಾವಿಯಲ್ಲಿ ಐವರು ಸಾವನ್ನಪ್ಪಿರುವ ದುರ್ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Uttar Pradesh
Uttar Pradesh
author img

By

Published : Sep 8, 2020, 5:05 PM IST

Updated : Sep 8, 2020, 8:07 PM IST

ಗೊಂಡಾ (ಯುಪಿ): ಬಾವಿಯಲ್ಲಿ ಬಿದ್ದ ಕರು ರಕ್ಷಣೆ ಮಾಡಲು ಹೋಗಿ ಐವರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದ್ದು, ಬಾವಿಯೊಳಗಿನ ವಿಷಕಾರಿ ಅನಿಲ ಶ್ವಾಸಕೋಶಕ್ಕೆ ಹೊಕ್ಕ ಕಾರಣ ಇವರು ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಾವಿಯಲ್ಲಿ ಕರು ಬಿದ್ದಿರುವ ಕಾರಣ ಅದನ್ನ ಮೇಲೆ ತರುವ ಉದ್ದೇಶದಿಂದ ಐವರು ಬಾವಿಯೊಳಗೆ ಇಳಿದಿದ್ದಾರೆ. ಈ ವೇಳೆ ಅದರೊಳಗಿನ ವಿಷಕಾರಿ ಅನಿಲ ಉಸಿರಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಅವರನ್ನ ಬಾವಿಯಿಂದ ಹೊರಗೆ ತೆಗೆಯಲಾಗಿದ್ದು, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ಅವರು ಸಾವನ್ನಪ್ಪಿದ್ದಾಗಿ ಘೋಷಣೆ ಮಾಡಲಾಗಿದೆ.

ಮೃತರನ್ನ ಚೋಟು, ರಿಂಕು, ವಿಷ್ಣು, ವೈಭವ್​ ಮತ್ತು ಮನ್ನು ಎಂದು ಗುರುತಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆದೇಶ ಹೊರಡಿಸಿದ್ದಾರೆ.

Last Updated : Sep 8, 2020, 8:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.