ಪಾಟ್ನಾ (ಬಿಹಾರ): ಬಿಹಾರದ ಮೀನುಗಾರಿಕಾ ಇಲಾಖೆ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಆರ್ಡರ್ ಮಾಡಿದರೆ, ಮೀನನ್ನು ಮನೆಗೆ ತಲುಪಿಸಲಾಗುತ್ತದೆ.
ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದ್ದು, ಫ್ರೀ ಹೋಂ ಡೆಲಿವರಿ ಮಾಡಲಾಗುತ್ತಿದೆ.
"ಮೀನುಗಾರಿಕಾ ಇಲಾಖೆಯು ತಾಜಾ ಮೀನುಗಳನ್ನು ಮನೆಗೆ ತಲುಪಿಸಲು 'ಡಿಒಎಫ್' ಎಂಬ ಆ್ಯಪ್ ತಯಾರಿಸಿದೆ. ಡೆಲಿವರಿ ಚಾರ್ಜ್ ಇಲ್ಲದೆ ಎರಡು-ಮೂರು ಗಂಟೆಗಳಲ್ಲಿ ಮೀನು ತಲುಪಿಸಲಾಗುವುದು. ಲಾಕ್ ಡೌನ್ ನಡುವೆ ಇದು ಜನಪ್ರಿಯವಾಗುತ್ತಿದೆ" ಎಂದು ಕೃಷಿ ಸಚಿವ ಡಾ. ಪ್ರೇಮ್ ಕುಮಾರ್ ಹೇಳಿದ್ದಾರೆ.