ETV Bharat / bharat

ತ್ರಿಪಲ್‌ ತಲಾಖ್‌ ಮಸೂದೆ ಜಾರಿ ನಂತ್ರ ದೆಹಲಿಯಲ್ಲಿ ಮೊದಲ ಕೇಸ್‌ ದಾಖಲು.. - ತ್ರಿಪಲ್‌ ತಲಾಖ್‌ ಮೊದಲ ಕೇಸ್‌ ದಾಖಲು

ತ್ರಿಪಲ್‌ ತಲಾಖ್‌ ನಿಷೇಧ ಮಸೂದೆ ಕಾನೂನಾತ್ಮಕವಾಗಿ ಜಾರಿಯಾದ ನಂತ್ರ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ ಮೂಲಕ ತಲಾಖ್‌ ನೀಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೆಹಲಿಯ ಬರ ಹಿಂದುರಾವ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ತ್ರಿಪಲ್‌ ತಲಾಖ್‌ ಮಸೂದೆ ಜಾರಿ ನಂತ್ರ ದೆಹಲಿಯಲ್ಲಿ ಮೊದಲ ಕೇಸ್‌ ದಾಖಲು
author img

By

Published : Aug 10, 2019, 2:37 PM IST

Updated : Aug 10, 2019, 3:20 PM IST

ಇದು ತ್ರಿಪಲ್‌ ತಲಾಖ್‌ ಜಾರಿಯಾದ ಬಳಿಕ ದಾಖಲಾಗಿರುವ ಮೊದಲ ಪ್ರಕರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸರು, 29 ವರ್ಷದ ರೈಮಾ ಯ್ಹಯಾ ಅವರ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಈಕೆ 2011ರ ನವೆಂಬರ್‌ನಲ್ಲಿ ಅತೀರ್‌ ಶಮೀಮ್‌ ಎಂಬುವರನ್ನು ವಿವಾಹವಾಗಿದ್ದರು. ಆದರೆ, 2019ರ ಜೂನ್‌ 23 ರಂದು ಅತೀರ್‌ ಮೂರು ಬಾರಿ ತಲಾಖ್‌ ಎಂದು ಉಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ವಾಟ್ಸ್‌ಆ್ಯಪ್‌ ಮೂಲಕ ಫತ್ವಾ ತಿಳಿಸಿದ್ದಾನಂತೆ. ಮುಸ್ಲಿಂ ಮಹಿಳೆಯರ (ಮದುವೆ ರಕ್ಷಣೆಯ ಹಕ್ಕು) ಕಾಯ್ದೆ 2019 ಸೆಕ್ಷನ್‌ 4ರಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ದೆಹಲಿಯ ಉತ್ತರ ವಿಭಾಗದ ಡಿಸಿಪಿ ನುಪುರ ಪ್ರಸಾದ್‌ ತಿಳಿಸಿದ್ದಾರೆ. ಮುಸ್ಲಿಂ ಮಹಿಳೆಯರ ರಕ್ಷಣೆ ಸಂಬಂಧ ಸೆಕ್ಷನ್‌ 4ರ ಅಡಿ ಜಾರಿಗೆ ಬಂದಿರುವ ಹೊಸ ಕಾಯ್ದೆಯನ್ನು ಜುಲೈ 30 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಕಾಯ್ದೆಯಡಿ ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ ತ್ರಿಪಲ್ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಅಪರಾಧಿ ಮೂರು ವರ್ಷ ಜೈಲು ಅಥವಾ ದಂಡದ ಶಿಕ್ಷೆಗೆ ಒಳಗಾಗಲಿದ್ದಾರೆ.

Intro:Body:

ದೆಹಲಿ: ತ್ರಿಪಲ್‌ ತಲಾಖ್‌ ನಿಷೇಧ ಕಾಯ್ದೆ ಕಾನೂನಾತ್ಮಕವಾಗಿ ಜಾರಿಯಾದ ನಂತ್ರ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಾಟ್ಸ್‌ ಮೂಲಕ ತಲಾಖ್‌ ನೀಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೆಹಲಿಯ ಬರ ಹಿಂದುರಾವ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಇದು ತ್ರಿಪಲ್‌ ತಲಾಖ್‌ ಜಾರಿಯಾದ ಬಳಿಕ ದಾಖಲಾಗಿರುವ ಮೊದಲ ಪ್ರಕರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸರು, 29 ವರ್ಷದ ರೈಮಾ ಯ್ಹಯಾ ಅವರ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. 2011ರ ನವೆಂಬರ್‌ನಲ್ಲಿ ಅತೀರ್‌ ಶಮೀಮ್‌ ಎಂಬುವರನ್ನು ವಿವಾಹವಾಗಿದ್ದರು. ಆದ್ರೆ 2019ರ ಜೂನ್‌ 23 ರಂದು ಅತೀರ್‌ ಮೂರು ಬಾರಿ ತಲಾಖ್‌ ಎಂದು ಉಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ವಾಟ್ಸಪ್‌ ಮೂಲಕ ಫತ್ವಾ ತಿಳಿಸಿದ್ದಾನಂತೆ. ಮುಸ್ಲಿಂ ಮಹಿಳೆಯರ (ಮದುವೆ ರಕ್ಷಣೆಯ ಹಕ್ಕು) ಕಾಯ್ದೆ 2019 ಸೆಕ್ಷನ್‌ 4 ರಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ದೆಹಲಿಯ ಉತ್ತರ ವಿಭಾಗದ ಡಿಸಿಪಿ ನುಪುರ ಪ್ರಸಾದ್‌ ತಿಳಿಸಿದ್ದಾರೆ. ಮುಸ್ಲಿಂ ಮಹಿಳೆಯರ ರಕ್ಷಣೆ ಸಂಬಂಧ ಸೆಕ್ಷನ್‌ 4ರ ಅಡಿ ಜಾರಿಗೆ ಬಂದಿರುವ ಹೊಸ ಕಾಯ್ದೆಯನ್ನು ಜುಲೈ 30 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಕಾಯ್ದೆಯಡಿ ಯಾವುದೇ ಮುಸ್ಲಿ ವ್ಯಕ್ತಿ ತನ್ನ ಪತ್ನಿಗೆ ತ್ರಿಪಲ್ ತಲಾಖ್ ನೀಡಿದ್ರೆ ಶಿಕ್ಷಾರ್ಹ ಅಪರಾಧವಾಗಿದ್ದು, ಮೂರು ವರ್ಷ ಜೈಲು ಅಥವಾ ದಂಡದ ಶಿಕ್ಷೆಗೆ ಒಳಗಾಗಲಿದ್ದಾರೆ.

Conclusion:
Last Updated : Aug 10, 2019, 3:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.