ETV Bharat / bharat

ಕೊರೊನಾ ವೈರಸ್​ ಎಫೆಕ್ಟ್​ಗೆ 2021ರ ಜನಗಣತಿ ಕಾರ್ಯ ಮುಂದೂಡಿಕೆ - ಭಾರತದ ಜನಗಣತಿ ಮುಂದೂಡಿಕೆ

ಕೋವಿಡ್​-19ನಿಂದ ಸಂಭವಿಸಿದ ನಾನಾ ಅಡೆಚಣೆಯಿಂದಾಗಿ ಮೊದಲ ಹಂತದ ಜನಗಣತಿ ಕಾರ್ಯ ಮತ್ತು ಪ್ರಚಾರ ಅಭಿಯಾನವನ್ನೂ ಸ್ಥಗಿತಗೊಳಿಸಲಾಗಿದೆ. ಗಣತಿಗೆ ಈ ಸಂಬಂಧಿತ ಇತರ ಚಟುವಟಿಕೆಗಳನ್ನು ಮುಂದೂಡಿಕೆ ಮಾಡಲಾಗಿದೆ. 2021ರ ಜನಗಣತಿ ಈ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಪ್ರಾರಂಭವಾಗಬೇಕಿತ್ತು.

Census
ಭಾರತದ ಜನಗಣತಿ
author img

By

Published : Sep 16, 2020, 8:48 PM IST

Updated : Sep 16, 2020, 9:06 PM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಹಂತದ ಜನಗಣತಿ ಕಾರ್ಯ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕೋವಿಡ್​-19ನಿಂದ ಸಂಭವಿಸಿರುವ ನಾನಾ ಅಡೆಚಣೆಯಿಂದಾಗಿ ಮೊದಲ ಹಂತದ ಜನಗಣತಿ ಕಾರ್ಯ ಮತ್ತು ಪ್ರಚಾರ ಅಭಿಯಾನವನ್ನೂ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧಿತ ಇತರ ಚಟುವಟಿಕೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಪ್ರಚಾರ ಅಭಿಯಾನವು ಜನಗಣತಿಯ ಒಂದು ಭಾಗವಾಗಿದೆ. ಎಲ್ಲಾ ಎಣಿಕೆದಾರರನ್ನು ಎಣಿಕೆ ಕಾರ್ಯ ಕೈಗೊಳ್ಳುವ ಮುನ್ನ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಈ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಪ್ರಾರಂಭವಾಗಬೇಕಿದ್ದ 2021ರ ಜನಗಣತಿಯ ಮೊದಲ ಹಂತ ಮುಂದೂಡಲಾಗಿದೆ ಎಂದರು.

ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ನವೀಕರಿಸುವ ಸಂಬಂಧಿತ ಕ್ಷೇತ್ರ ಚಟುವಟಿಕೆಗಳನ್ನು ಒಳಗೊಂಡಂತೆ ಜನಗಣತಿ ಕಾರ್ಯಾಚರಣೆಯ ಆರಂಭಿಕ ಹಂತದ ಅವಧಿ ವಿಸ್ತರಿಸಲಾಗಿದೆ ಎಂದು ರೈ ತಿಳಿಸಿದರು.

ಇದರ ಬೆನ್ನಲ್ಲೇ 'ಜನಗಣತಿ ಕಾರ್ಯಾಚರಣೆ ಈ ವರ್ಷ ಪ್ರಾರಂಭವಾಗುವ ಸಾಧ್ಯತೆಯಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನಗಣತಿಯು ಅತಿದೊಡ್ಡ ಆಡಳಿತ ಮತ್ತು ಸಂಖ್ಯಾಶಾಸ್ತ್ರೀಯ ಕಾರ್ಯಗಳಲ್ಲಿ ಒಂದಾಗಿದೆ. ರಾಷ್ಟ್ರದಾದ್ಯಂತ ಪ್ರತಿ ಮನೆಗೆ ಸುಮಾರು 30 ಲಕ್ಷ ಅಧಿಕಾರಿಗಳು ಭೇಟಿ ನೀಡುತ್ತಾರೆ. ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಜಂಟಿಯಾಗಿ ತೆಗೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿತ್ತು. ಆದರೆ, ವಿರೋಧ ಪಕ್ಷಗಳ ಅನೇಕ ಮುಖಂಡರು ಇದನ್ನು ತೀವ್ರವಾಗಿ ಟೀಕಿಸಿದ್ದರು.

2021ರ ಜನಗಣತಿಯ ವೆಚ್ಚ 8,754 ಕೋಟಿ ರೂ. (ಎನ್‌ಪಿಆರ್‌ಗೆ 3,941 ಕೋಟಿ ರೂ.) ಎಂದು ಅಂದಾಜಿಸಲಾಗಿದೆ.

Last Updated : Sep 16, 2020, 9:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.