ಹೈದರಾಬಾದ್: ಕ್ಲಿನಿಕಲ್ ಸ್ಟೇಜ್ ಬಯೊಫಾರ್ಮಾಸ್ಯೂಟಿಕಲ್ ಕಂಪನಿ ಹ್ಯೂಮ್ಯಾನಿಜೆನ್ ಇಂಕ್, ಕೋವಿಡ್-19 ಕಾಯಿಲೆಯ ಸೈಟೊಕಿನ್ ಪ್ರವಾಹ ತಡೆಗಟ್ಟಲು ಮತ್ತು ಅದನ್ನು ಗುಣಪಡಿಸಲು ಲೆಂಜಿಲುಮ್ಯಾಬ್ ಆ್ಯಂಟಿಬಾಡಿ ಬಳಸುವ ಕುರಿತಾಗಿ ಹಲವಾರು ಸಂಶೋಧನೆಗಳನ್ನು ನಡೆಸುತ್ತಿದೆ. ಸಂಶೋಧನೆಯ 3ನೇ ಹಂತದಲ್ಲಿ ಕೋವಿಡ್-19 ಸೋಂಕಿತ ರೋಗಿಯೊಬ್ಬರ ಮೇಲೆ ಕಂಪನಿ ಸ್ವತಃ ತಯಾರಿಸಿದ ಮಾನವ ಶರೀರದ ಮೇಲೆ ಬಳಸಬಹುದಾದ, ಗ್ರ್ಯಾನುಲೋಸೈಟ್ ಮ್ಯಾಕ್ರೊಫೇಜ್ - ಕಾಲನಿ ಸ್ಟಿಮ್ಯುಲೇಟಿಂಗ್ ಫ್ಯಾಕ್ಟರ್ (ಜಿಎಂ-ಸಿಎಸ್ಎಫ್) ಮೊನೊಕ್ಲೊನಲ್ ಆ್ಯಂಟಿಬಾಡಿಯನ್ನು ಪ್ರಯೋಗ ಮಾಡಿದೆ. (granulocyte macrophage-colony stimulating factor (GM-CSF) monoclonal antibody).
"ಕೋವಿಡ್-19 ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿರುವ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸ್ಥಿತಿ ಉಲ್ಬಣಿಸುವಿಕೆಯನ್ನು ತಡೆಯಲು ಹಾಗೂ ಸಾವಿನ ಸಂಭವ ಕಡಿಮೆ ಮಾಡಲು 3ನೇ ಹಂತದ ಸಂಶೋಧನೆಯಲ್ಲಿ ಲೆಂಜಿಲುಮ್ಯಾಬ್ ಪ್ರಯೋಗ ಮಾಡುತ್ತಿದ್ದೇವೆ, ಅಮೆರಿಕದ ಪ್ರಖ್ಯಾತ ಪ್ರಯೋಗಾಲಯಗಳು ಹಾಗೂ ತಜ್ಞರು ಮತ್ತು ನಮ್ಮ ಸಂಶೋಧನಾ ಪಾಲುದಾರರು ಈ ಸಂಶೋಧನೆಗಳಿಗೆ ಕೈಜೋಡಿಸಿದ್ದಾರೆ. ಲೆಂಜಿಲುಮ್ಯಾಬ್ ಬಳಕೆಯ ಪರಿಣಾಮಗಳಿಂದ ನಾವು ಉತ್ತೇಜಿತರಾಗಿದ್ದು, ಸಂಬಂಧಿಸಿದ ಎಲ್ಲರೊಂದಿಗೂ ಈ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ." ಎಂದು ಹ್ಯೂಮ್ಯಾನಿಜೆನ್ ಕಂಪನಿಯ ಚೀಫ್ ಎಕ್ಸೆಕ್ಯುಟಿವ್ ಆಫೀಸರ್ ಕ್ಯಾಮೆರಾನ್ ಡುರಾಂಟ್ ಹೇಳಿದ್ದಾರೆ.
"ಎಫ್ಡಿಎ ಅನುಮತಿಯ ನಂತರ ಈ ಯೋಜನೆಯು ಅತಿ ವೇಗದಲ್ಲಿ ಸಾಗುತ್ತಿರುವುದು ಆಶಾದಾಯಕವಾಗಿದೆ" ಎಂದು ಸಿಟಿಐ ಸಂಸ್ಥಾಪಕ ಟಿಮ್ ಶ್ರೋಡರ್ ತಿಳಿಸಿದ್ದಾರೆ.
"IL-6, IL-1 ಮತ್ತು TNF-α ಸೈಟೋಕಿನ್ಗಳು ಸೇರಿದಂತೆ ಇನ್ನಿತರ ಸೈಟೋಕಿನ್ ದಾಳಿಯಲ್ಲಿ ಜಿಎಂ-ಸಿಎಸ್ಎಫ್ ಅತಿ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಈ ಮುಂಚೆ ಭಾವಿಸಲಾಗಿತ್ತು. ಹೆಚ್ಚುವರಿ ಜಿಎಂ-ಸಿಎಸ್ಎಫ್ ಉತ್ಪಾದನೆಯಿಂದ ನಿರ್ದಿಷ್ಟ ಕಾಯಿಲೆಯ ಸ್ಥಿತಿಗಳಲ್ಲಿ ಸಾಕಷ್ಟು ಪರಿಣಾಮಗಳು ಕಂಡುಬಂದಿವೆ. ಅಂದರೆ ಸೈಟೋಕಿನ್ ದಾಳಿಯನ್ನು ಜಿಎಂ-ಸಿಎಸ್ಎಫ್ ತಟಸ್ಥಗೊಳಿಸುವ ಮೂಲಕ ತಡೆಯಬಹುದು ಅಥವಾ ಕಡಿಮೆ ಮಾಡಬಹುದು ಎಂಬುದು ಸಾಬೀತಾಗಿದೆ." ಎಂದು ಡುರಾಂಟ್ ತಿಳಿಸಿದ್ದಾರೆ.
"ಸೈಟೋಕಿನ್ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಎಂ-ಸಿಎಸ್ಎಫ್ ವಿಧಾನ ಬಳಸುತ್ತಿರುವ ಏಕೈಕ ಕಂಪನಿಯಾಗಿರುವ ನಮ್ಮಲ್ಲಿ ಈ ಕುರಿತಾದ ಸಾಕಷ್ಟು ಸುರಕ್ಷತಾ ಮಾಹಿತಿ ಸಂಗ್ರಹವಿದೆ. ಈ ಸಂಶೋಧನೆಗೆ ರೋಗಿಗಳು ಭಾಗಿಯಾಗಲು ಅನುಮತಿ ನೀಡಿದ ಎಫ್ಡಿಎ ಹಾಗೂ ಸಹಕಾರ ನೀಡುತ್ತಿರುವ ಸಿಟಿಐ ಮತ್ತು ಇನ್ನಿತರ ನಮ್ಮ ಸಹವರ್ತಿಗಳಿಗೆ ನಾವು ಆಭಾರಿಯಾಗಿದ್ದೇವೆ." ಎಂದು ಡುರಾಂಟ್ ಹೇಳಿದ್ದಾರೆ.
ಹ್ಯೂಮ್ಯಾನಿಜೆನ್ ಇಂಕ್ ಕಂಪನಿ ಬಗ್ಗೆ ಒಂದಿಷ್ಟು ಮಾಹಿತಿ: ಹ್ಯೂಮ್ಯಾನಿಜೆನ್ ಇಂಕ್ ಇದು ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗಾಗಿ ತನ್ನ ಜಿಎಂ-ಸಿಎಸ್ಎಫ್ ನ್ಯೂಟ್ರಲೈಸೇಶನ್ ಮತ್ತು ಜೀನ್ ನಾಕೌಟ್ ತಂತ್ರಜ್ಞಾನವನ್ನು ಬಳಸುವುದರಲ್ಲಿ ಪ್ರಖ್ಯಾತಿ ಪಡೆದಿದೆ. ಜಿಎಂ-ಸಿಎಸ್ಎಫ್ ಮತ್ತು ಜೀನ್ ಎಡಿಟಿಂಗ್ ಪ್ಲಾಟ್ಫಾರ್ಮ್ಗಳ ಮೂಲಕ ಕೊರೊನಾ ವೈರಸ್ ಸೋಂಕು ಸೇರಿದಂತೆ ಮಾರಣಾಂತಿಕ CAR-T ಥೆರಪಿಯ ಅಡ್ಡ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸುತ್ತಿದೆ.
ಸಿಟಿಐ ಕಂಪನಿಯ ಮಾಹಿತಿ: ಕ್ಲಿನಿಕಲ್ ಟ್ರಯಲ್ ಮತ್ತು ಕನ್ಸಲ್ಟಿಂಗ್ ಸರ್ವಿಸಸ್ ಇದೊಂದು ಜಾಗತಿಕ ಖಾಸಗಿ ಕಂಪನಿಯಾಗಿದೆ. ಪೂರ್ಣ ಪ್ರಮಾಣದ ಕ್ಲಿನಿಕಲ್ ಟ್ರಯಲ್ಗಳನ್ನು ಕೈಗೊಳ್ಳುವಲ್ಲಿ ಸಿಟಿಐ ಪರಿಣತಿಯನ್ನು ಹೊಂದಿದೆ.