ಜೈಪುರ: ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ರಾಜಸ್ಥಾನದ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸವಾಯಿ ಮನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆ ಪಾತ್ರವಾಗಿದೆ. ರಾಜಸಮಂದ್ ಜಿಲ್ಲೆಯ 25 ವರ್ಷದ ಯುವಕನ ಹೃದಯ, ಎರಡು ಮೂತ್ರಪಿಂಡಗಳನ್ನು ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಎಸ್‌ಎಂಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆ ಯುವಕ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ. ಕುಟುಂಬ ಸದಸ್ಯರಿಗೆ ಅವರ ಅಂಗಾಗಳನ್ನು ದಾನ ಮಾಡಲು ಮನವರಿಕೆ ಮಾಡಿ, ಅವರು ಒಪ್ಪಿದ ನಂತರ, ರಾತ್ರಿಯೇ ಕಸಿ ಪ್ರಕ್ರಿಯೆಯನ್ನು ನಡೆಸಿ, ನಾಲ್ಕು ಜನರಿಗೆ ಹೊಸ ಜೀವನವನ್ನು ನೀಡಲಾಯಿತು ಎಂದು ಡಾ ಎಸ್. ಎಸ್. ಯಾದವ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿಯೇ ಒಬ್ಬ ರೋಗಿಗೆ ಹೃದಯವನ್ನು ಕಸಿ ಮಾಡಲಾಗಿದ್ದು, ಹಾಗೂ ಮೂತ್ರಪಿಂಡಗಳನ್ನು ಇಬ್ಬರು ರೋಗಿಗಳಿಗೆ ಕಸಿ ಮಾಡಲಾಗಿದೆ. ಇನ್ನು ಗ್ರೀನ್ ಕಾರಿಡಾರ್ ಮೂಲಕ ಯಕೃತ್ತನ್ನು ನಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ 72 ಗಂಟೆಗಳ ಕಾಲ ರೋಗಿಗಳು ಐಸಿಯುನಲ್ಲಿ ವೀಕ್ಷಣೆಯಲ್ಲಿರಲಿದ್ದು, ನಂತರ ಅವರನ್ನು ಸಾಮಾನ್ಯ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
-
Happy to know that first ever heart transplant has been performed in SMS government hospital, #Jaipur today. I pray to God for it to be successful and may the patient regain health soon. #Rajasthan
— Ashok Gehlot (@ashokgehlot51) January 16, 2020 " class="align-text-top noRightClick twitterSection" data="
">Happy to know that first ever heart transplant has been performed in SMS government hospital, #Jaipur today. I pray to God for it to be successful and may the patient regain health soon. #Rajasthan
— Ashok Gehlot (@ashokgehlot51) January 16, 2020Happy to know that first ever heart transplant has been performed in SMS government hospital, #Jaipur today. I pray to God for it to be successful and may the patient regain health soon. #Rajasthan
— Ashok Gehlot (@ashokgehlot51) January 16, 2020
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜೈಪುರದ ಎಸ್‌ಎಂಎಸ್ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮೊದಲ ಬಾರಿಗೆ ಹೃದಯ ಕಸಿ ಮಾಡಲಾಗಿದೆ ಎಂದು ತಿಳಿದಾಗ ಸಂತೋಷವಾಗಿದೆ. ಇದು ಯಶಸ್ವಿಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಮತ್ತು ರೋಗಿಯು ಶೀಘ್ರದಲ್ಲೇ ಆರೋಗ್ಯವನ್ನು ಮರಳಿ ಪಡೆಯಲಿ ಎಂದು ಟ್ವೀಟ್ ಮಾಡಿದ್ದಾರೆ.