ರಾಜೌರಿ, (ಕಾಶ್ಮೀರ): ಇದೇ ಮೊಟ್ಟ ಮೊದಲ ಸಲ ಗುಜ್ಜರ್ ಸಮುದಾಯದ ವಿದ್ಯಾರ್ಥಿನಿ ಇರ್ಮಿಮ್ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ನಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆದು, ರಾಜೌರಿ ಜಿಲ್ಲೆಯ ಮೊದಲ ಗುಜ್ಜರ್ ಯುವತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಜೂನ್ನಲ್ಲಿ ನಡೆದ ಏಮ್ಸ್ನ ವೈದ್ಯಕೀಯ ಅಧ್ಯಯನಕ್ಕೆ ಅರ್ಹತೆ ಪಡೆದ, ಶಮೀಮ್ ಅವರನ್ನು ಭಾನುವಾರ ಭಾರತೀಯ ಸೇನೆ ಸನ್ಮಾನಿಸಿದೆ.
ಪ್ರವೇಶ ಪರೀಕ್ಷೆಯನ್ನು ಭೇದಿಸಲು ಎಂ.ಎಸ್.ಶಮೀಮ್ಮ್ ಅನೇಕ ಸವಾಲುಗಳನ್ನು ತೆಗೆದುಕೊಂಡರು. ಹಿಂದುಳಿದ ಸಮುದಾಯಕ್ಕೆ ಸೇರಿದ ಆಕೆಯ ಕುಟುಂಬ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿತ್ತು, ತಮ್ಮೂರಿನಿಂದ ಉತ್ತಮ ಶಾಲೆಗೆ ಹೋಗಲು, ಪ್ರತಿ ನಿತ್ಯ ಕ್ರಮಿಸುತ್ತಿದದ್ದು ಬರೋಬ್ಬರಿ 10 ಕಿಲೋ ಮೀಟರ್, ಅದನ್ನು ನಡೆದುಕೊಂಡೇ ಹೋಗುತ್ತಿದ್ದಳು ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.
ಜಿಲ್ಲಾ ಅಭಿವೃದ್ಧಿ ಆಯುಕ್ತ ಐಜಾಜ್ ಅಸಾದ್, ಎಂ.ಎಸ್.ಶಮೀಮ್ ಅವರ ಸಾಧನೆಯನ್ನು ಶ್ಲಾಘಿಸಿದರು ಮತ್ತು ಭವಿಷ್ಯದಲ್ಲಿ ಅಧ್ಯಯನವನ್ನು ಮುಂದುವರೆಸಲು ಸಾಧ್ಯವಿರುವ ಎಲ್ಲ ಸಹಾಯದ ಬಗ್ಗೆ ಭರವಸೆ ನೀಡಿದ್ದಾರೆ.