ನೋಯ್ಡಾ: ನಗರದ ಸೆಕ್ಟರ್ -24 ರ ಇಎಸ್ಐಸಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ಟೆಂಡರ್ಗಳನ್ನು ತರುವ ಮೂಲಕ ಸಿಬ್ಬಂದಿ ರಕ್ಷಣಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳು ಸೇರಿದಂತೆ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಈ ಮೂಲಕ ಭಾರಿ ಅನಾಹುತದಿಂದ ಜನರು ಮತ್ತು ರೋಗಿಗಳನ್ನ ಪಾರು ಮಾಡಲಾಗುತ್ತಿದೆ.