ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 75ರಲ್ಲಿ ಅಪೆಕ್ಸ್ ಅಥೇನಾ ಸೊಸೈಟಿಯ ಬಹುಮಹಡಿ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಫ್ಲ್ಯಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಪಾರ್ಟ್‌ಮೆಂಟ್‌ನೊಳಗೆ ಹೋಗಿ ನಾನು ಅಗ್ನಿ ಶಾಮಕ ಯಂತ್ರದಿಂದ ಬೆಂಕಿ ನಂದಿಸಲು ಮುಂದಾದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಫೈರ್ ಅಲಾರ್ಮ್ ಹಾಗೂ ವಾಟರ್ ಸ್ಪ್ರಿಂಕ್ಲರ್‌ಗಳು ಕೆಲಸ ಮಾಡಲಿಲ್ಲ ಎಂದು ಅಲ್ಲಿ ನಿಯೋಜನೆಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ಆರೋಪಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು, ಬೆಂಕಿ ಈಗ ನಿಯಂತಯ್ರಣಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.