ETV Bharat / bharat

ಏರ್ ಶೋನಲ್ಲಿ ಭಾರಿ ಅಗ್ನಿ ಅವಘಡ: 150ಕ್ಕೂ ಹೆಚ್ಚು ಕಾರುಗಳು ಸುಟ್ಟುಭಸ್ಮ - etv bharat

ಏರ್ ಶೋ ಆರಂಭಕ್ಕೂ ಮುನ್ನವೇ ವಿಘ್ನ ಉಂಟಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ಪ್ರದರ್ಶನ ಸ್ಥಳದಲ್ಲಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ತಗುಲಿ 150 ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ.

ಏರ್ ಶೋ ಬಳಿ ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿರುವ ಕಾರುಗಳು.
author img

By

Published : Feb 23, 2019, 2:06 PM IST

Updated : Feb 23, 2019, 4:02 PM IST

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಏರ್ ಶೋ ಬಳಿ ಭಾರಿ ಬೆಂಕಿ‌ ಅವಘಡ ಸಂಭವಿಸಿದೆ.

ಗೇಟ್ ನಂಬರ್ 5 ರ ಬಳಿ ಅಗ್ನಿ ಅವಘಡ ಸಂಭವಿಸಿದ್ದು, 150 ಕ್ಕೂ ಹೆಚ್ಚು ಕಾರುಗಳು ಸುಟ್ಟುಭಸ್ಮವಾಗಿವೆ. ಬೆಂಕಿಯಿಂದಾಗಿ ಏರ್ ಶೋ ಬಾನಂಗಳದಲ್ಲಿ ದಟ್ಟ ಹೊಗೆ ಆವರಿಸಿದೆ. ಪಾರ್ಕಿಂಗ್ ನಲ್ಲಿ ಇರುವ ಒಣ ಹುಲ್ಲಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ.

ದಟ್ಟವಾದ ಹೊಗೆ ನೋಡಿ ಸ್ಥಳದಲ್ಲಿದ್ದ ಜನರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದಾರೆ. ಇನ್ನು ಬೆಂಕಿಯಿಂದ ದಟ್ಟ ಹೊಗೆ ವಾಯುನೆಲೆಯಲ್ಲೆಲ್ಲಾ ಹರಡಿರುವುದರಿಂದ ಕೆಲ ಕಾಲ ಏರ್ ಶೋ ಸ್ಥಗಿತಗೊಂಡಿದೆ.

Intro:Body:

D0EwdkDUwAAXpkT

Conclusion:
Last Updated : Feb 23, 2019, 4:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.