ETV Bharat / bharat

ಕಾರ್ಮಿಕರಿಗೆ ಪ್ರಿಯಾಂಕಾ ಬಸ್​ ಸೌಲಭ್ಯ: ಕಾರು, ಸ್ಕೂಟರ್​, ಆಟೋ ನೋಂದಣಿ- ಬಿಜೆಪಿ ಆರೋಪ - ಯುಪಿ ಕೈ ಅಧ್ಯಕ್ಷನ ವಿರುದ್ಧ ಕೇಸು

ವಲಸೆ ಕಾರ್ಮಿಕರನ್ನು ಬಸ್​​ಗಳಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದಾಗ, ರಾಜ್ಯ ಸರ್ಕಾರ ವಾಹನಗಳ ಬಗ್ಗೆ ವಿವರಣೆ ಕೇಳಿತ್ತು. ಪಕ್ಷದ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಒದಗಿಸಿರುವ ಪಟ್ಟಿಯಲ್ಲಿ ಕೆಲವು ವಾಹನ ಸಂಖ್ಯೆಗಳ ನಮೂದು ತಪ್ಪಾಗಿದೆ. ಆದರೂ ಕಾಂಗ್ರೆಸ್ ಒಂದು ಸಾವಿರ ಬಸ್​​​ಗಳನ್ನು ಒದಗಿಸಲು ಬದ್ಧವಾಗಿದೆ ಎಂದಿದ್ದರು.

Priyanka Gandhi
ವಲಸೆ ಕಾರ್ಮಿಕರ ಹೆಸರಲ್ಲಿ ಕಾಂಗ್ರೆಸ್ ವಂಚನೆ ಆರೋಪ
author img

By

Published : May 19, 2020, 10:45 PM IST

Updated : May 19, 2020, 10:58 PM IST

ಲಖನೌ: ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸಲು ಕಾಂಗ್ರೆಸ್ ನೀಡಿರುವ ಬಸ್​​​ಗಳ ಪಟ್ಟಿಯಲ್ಲಿ ಕಾರು, ಸ್ಕೂಟರ್​ ಹಾಗೂ ಆಟೋಗಳ ನೋಂದಣಿ ಸಂಖ್ಯೆಗಳಿವೆ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಗಂಭೀರ ಆರೋಪ ಮಾಡಿದೆ.

Priyanka Gandhi
ಕಾಂಗ್ರೆಸ್​​ ನೀಡಿರುವ ವಾಹನಗಳ ನೋಂದಣಿ ಪ್ರತಿ

ಉತ್ತರ ಪ್ರದೇಶ ಸರ್ಕಾರದ ಸಚಿವ ಹಾಗೂ ಸರ್ಕಾರದ ವಕ್ತಾರ ಸಿದ್ದಾರ್ಥ ನಾಥ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ರೀತಿ ಪಟ್ಟಿಯನ್ನು ನೀಡುವ ಮೂಲಕ ಕಾಂಗ್ರೆಸ್ ವಲಸೆ ಕಾರ್ಮಿಕರ ಹೆಸರಲ್ಲಿ ವಂಚನೆ ಎಸಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯವರ ನಡೆಗೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Priyanka Gandhi
ಕಾಂಗ್ರೆಸ್​​ ನೀಡಿರುವ ವಾಹನಗಳ ನೋಂದಣಿ ಪ್ರತಿ

ಯಾವುದೇ ರಾಜಕೀಯ ಪಕ್ಷ ವಲಸೆ ಕಾರ್ಮಿಕರ ಹೆಸರಲ್ಲಿ ಈ ರೀತಿಯ ವಂಚನೆ ಎಸಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ತಾನು ಮಾಡಿದ ಘೋರ ಅಪರಾಧಕ್ಕಾಗಿ ದೇಶದ ಜನರ ಕ್ಷಮೆ ಕೇಳಬೇಕು ಎಂದರು.

ವಲಸೆ ಕಾರ್ಮಿಕರನ್ನು ಬಸ್​​ಗಳಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದಾಗ, ರಾಜ್ಯ ಸರ್ಕಾರ ವಾಹನಗಳ ಬಗ್ಗೆ ವಿವರಣೆ ಕೇಳಿತ್ತು. ಪಕ್ಷದ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಒದಗಿಸಿರುವ ಪಟ್ಟಿಯಲ್ಲಿ ಕೆಲವು ವಾಹನ ಸಂಖ್ಯೆಗಳ ನಮೂದು ತಪ್ಪಾಗಿದೆ. ಆದರೂ ಕಾಂಗ್ರೆಸ್ ಒಂದು ಸಾವಿರ ಬಸ್​​​ಗಳನ್ನು ಒದಗಿಸಲು ಬದ್ಧವಾಗಿದೆ ಎಂದಿದ್ದರು.

ಘಾಜಿಯಾಬಾದ್‌ ಬಸ್ ನಿಲ್ದಾಣದಿಂದ 500 ಮತ್ತು ಗೌತಮ ಬುದ್ಧ ನಗರದ ಎಕ್ಸ್‌ ಪೋ ಮಾರ್ಟ್‌ ಬಳಿಯಿಂದ 500 ಬಸ್​​ಗಳನ್ನು ವಲಸೆ ಕಾರ್ಮಿಕರಿಗೆ ಒದಗಿಸುವಂತೆ ಯೋಗಿ ಸರ್ಕಾರ ಕಾಂಗ್ರೆಸ್‌ಗೆ ತಿಳಿಸಿತ್ತು. ಇದಕ್ಕೆ ಸಂಬಂಧಿಸಿದ ಪತ್ರವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೃಹ ಇಲಾಖೆ, ಪ್ರಿಯಾಂಕಾ ವಾದ್ರಾ ಅವರ ಖಾಸಗಿ ಕಾರ್ಯದರ್ಶಿಗೂ ಕಳುಹಿಸಲಾಗಿತ್ತು.

ವಲಸೆ ಕಾರ್ಮಿಕರು ತೆರಳುವ ಬಸ್​​​​ಗಳಿಗೆ ಸಂಬಂಧಿಸಿದ ನಿರ್ದೇಶನಗಳ ಕುರಿತ ವಿವರಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಕಳುಹಿಸಲಾಗಿದ್ದು, ಅವರು ಸಹ ವಾಹನದ ಫಿಟ್ನೆಸ್, ಚಾಲನಾ ಪರವಾನಗಿ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸುತ್ತಾರೆ.

ವಲಸೆ ಕಾರ್ಮಿಕರಿಗೆ 1 ಸಾವಿರ ಬಸ್​​ಗಳಿಗೆ ಪರವಾನಗಿ ನೀಡುವ ಸಲುವಾಗಿ ಸರ್ಕಾರ ಮತ್ತು ಕಾಂಗ್ರೆಸ್ ಮಧ್ಯೆ ಮಂಗಳವಾರ ರಾತ್ರಿ 2 ಗಂಟೆಯವರೆಗೂ ಪರಸ್ಪರ ಪತ್ರ ರವಾನೆ ನಡೆದಿತ್ತು.

ಪ್ರಿಯಾಂಕಾ ಕಾರ್ಯದರ್ಶಿ, ಯುಪಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ದೂರು ದಾಖಲು

ಪ್ರಿಯಾಂಕಾ ಗಾಂಧಿ ವಾದ್ರಾ ಖಾಸಗಿ ಕಾರ್ಯದರ್ಶಿ ಸಂದೀಪ್ ಸಿಂಗ್ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ವಿರುದ್ಧ ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 19, 2020, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.