ನವದೆಹಲಿ: ಕೊರೊನಾ ಹಾವಳಿ ಹಾಗೂ ಭೀತಿಯನ್ನ ಹೊಡೆದೊಡಿಸಲು ನಾಳಿನ ಜನತಾ ಕರ್ಫ್ಯೂಗೆ 2002ರಲ್ಲಿ ನಾಟ್ವೆಸ್ಟ್ ಸರಣಿಯಲ್ಲಿ ಯುವರಾಜ್ ಸಿಂಗ್- ಕೈಫ್ ಹೋರಾಟ ಮಾಡಿ ಗೆದ್ದಂತೆ. ನೀವೂ ಬೆಂಬಲ ನೀಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಪ್ರಧಾನಿ ಅವರ ಟ್ವೀಟ್ಗೆ ಕೈಫ್ ರೀಟ್ವೀಟ್ ಮಾಡಿದ್ದು, ಅಂದಿನ ಹೋರಾಟದಂತೆ ವೈರಸ್ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲು ಹೋರಾಡಿ. ಇದಕ್ಕಾಗಿ ನಾಳಿನ ಜನತಾ ಕರ್ಫ್ಯೂಗೆ ಬೆಂಬಲ ನೀಡಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮತ್ತೆ ಟ್ವೀಟ್ ಮಾಡಿದ್ದ ಪ್ರಧಾನಿ, ಈಗ ಅಂತಹುದೇ ಪಾರ್ಟ್ನರ್ ಶಿಪ್ನ ಅಗತ್ಯ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟೇ ಅಲ್ಲ ಅಂದಿನ ಇಬ್ಬರ ಆಟವನ್ನ ನಾವೆಲ್ಲ ಯಾವಾಗಲೂ ಸ್ಮರಣೆ ಮಾಡಿಕೊಳ್ಳುತ್ತೇವೆ. ಈಗ ನಾವೆಲ್ಲ ಒಗ್ಗೂಡಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದಾರೆ.