ಬೆಳಗಾವಿ/ಕೊಲ್ಲಾಪುರ: ರಾಜಸ್ಥಾನದ ಕುಖ್ಯಾತ ದರೋಡೆಕೋರರ ಗ್ಯಾಂಗ್ ಮತ್ತು ಕರ್ನಾಟಕ ಪೊಲೀಸರ ಮಧ್ಯೆ ಮಹಾರಾಷ್ಟ್ರ ಗಡಿಭಾಗದಲ್ಲಿ ಎನ್ಕೌಂಟರ್ ನಡೆದಿದೆ. ಈ ವೇಳೆ ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.
ಪೊಲೀಸರು ದರೋಡೆಕೋರರ ಗ್ಯಾಂಗ್ ಅನ್ನು ಬೆನ್ನಟ್ಟುತ್ತಿದ್ದರು. ಬಳಿಕ ವಿಷಯ ತಿಳಿದ ಕೊಲ್ಲಾಪುರ ಪೊಲೀಸರು ನಾಕಾಬಂದಿ ಹಾಕಿದ್ದರು. ಪೊಲೀಸರು ಹಾರಿಸಿದ ಗುಂಡು ದರೋಡೆಕೋರನ ಕಾಲಿಗೆ ತಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಈ ದರೋಡೆಕೋರರು ರಾಜಸ್ಥಾನದಲ್ಲಿ ನಡೆದಿದ್ದ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ.