ETV Bharat / bharat

ಕ್ಲೈಮ್ಯಾಕ್ಸ್‌ ಕದನದಲ್ಲಿ ಸೋತ ಟೀಂ ಇಂಡಿಯಾ: ಸರಣಿ ಕೈವಶ ಮಾಡಿಕೊಂಡ ಕಾಂಗರೂ ಪಡೆ - ಗೆಲುವು

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 35ರನ್​ಗಳ ಸೋಲು ಕಂಡಿದ್ದು, ಐದು ಪಂದ್ಯಗಳ ಏಕದಿನ ಸರಣಿಯನ್ನ 3-2 ಅಂತರದಿಂದ ಕೈಚೆಲ್ಲಿ ತವರಿನಲ್ಲಿ ತೀವ್ರ ಮುಖಭಂಗಕ್ಕೊಳಗಾಗಿದೆ.

ಗೆಲುವಿನ ಸಂಭ್ರಮದಲ್ಲಿ ಆಸ್ಟ್ರೇಲಿಯಾ ತಂಡ
author img

By

Published : Mar 13, 2019, 10:46 PM IST

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ನಡೆದ ಐದು ಏಕದಿನ ಪಂದ್ಯಗಳ ಸರಣಿಯ ಕ್ಲೈಮ್ಯಾಕ್ಸ್​​ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಕಾಂಗರೂ ಪಡೆ ಸರಣಿಯನ್ನ 3-2 ಅಂತರದಿಂದ ಕೈವಶ ಮಾಡಿಕೊಂಡಿದೆ.

ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಡೆ 35 ರನ್​ಗಳ ಗೆಲುವು ದಾಖಲು ಮಾಡಿ ಐದು ಏಕದಿನ ಪಂದ್ಯಗಳ ಸರಣಿಯನ್ನ 3-2 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ಉಸ್ಮಾನ್​ ಖವಾಜ್​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 272 ರನ್ ​ಗಳಿಕೆ ಮಾಡಿತು.

ಸ್ಪರ್ಧಾತ್ಮಕ 273 ರನ್​ ಟಾರ್ಗೆಟ್​ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಅಘಾತ ಅನುಭವಿಸಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್​​ (12) ರನ್ ​ಗಳಿಕೆ ಮಾಡಿ ಪೆವಿಲಿಯನ್​ ಸೇರಿಕೊಂಡರು. ಇದಾದ ಬಳಿಕ ಬಂದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ 20 ರನ್​ ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ವಿರಾಟ್‌ ವಿಕೆಟ್​ ಪತನವಾಗುತ್ತಿದ್ದಂತೆ ರಿಷಭ್​ ಪಂತ್‌ (16), ವಿಜಯ್‌ ಶಂಕರ್‌(16), ರವೀಂದ್ರ ಜಡೇಜಾ(0) ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಗೆಲುವಿನ ಆಸೆ ಮೂಡಿಸಿದ್ದ ಭುವಿ-ಕೇದಾರ್​
ಟೀಂ ಇಂಡಿಯಾ 28.5 ಓವರ್​ಗಳಲ್ಲಿ ಪ್ರಮುಖ ಆರು ವಿಕೆಟ್​ ಕಳೆದುಕೊಂಡು 132 ರನ್​ ಗಳಿಕೆ ಮಾಡಿದ್ದ ವೇಳೆ ಮೈದಾನ ಹಂಚಿಕೊಂಡ ಭುವಿ-ಕೇದಾರ್​ ಗೆಲುವಿನ ಭರವಸೆ ಮೂಡಿಸಿದ್ದರೂ ಪ್ರಯೋಜನವಾಗಲಿಲ್ಲ. ಈ ಜೋಡಿ 80 ರನ್​ಗಳ ಜೊತೆಯಾಟವಾಡುವ ಜತೆಗೆ ತಂಡವನ್ನ 200ರ ಗಡಿ ದಾಟುವಂತೆ ಮಾಡಿತ್ತು.

ಆದರೆ 46 ರನ್ ​ಗಳಿಕೆ ಮಾಡಿದ್ದ ವೇಳೆ ದೊಡ್ಡ ಹೊಡತಕ್ಕೆ ಕೈ ಹಾಕಿದ ಭುವಿ ಕ್ಯಾಚ್​ ನೀಡಿ ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಕೇದಾರ್​ ಜಾಧವ್​​(44)ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಸಂಪೂರ್ಣವಾಗಿ ಗೆಲುವಿನ ಆಸೆ ಕೈ ಬಿಡುವಂತಾಯಿತು. ಕೊನೆಯದಾಗಿ ತಂಡ 50 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​​ ಕಳೆದುಕೊಂಡು 237 ರನ್​ ಗಳಿಕೆ ಮಾಡಿದ್ದರಿಂದ 35 ರನ್​ಗಳ ಸೋಲು ಕಾಣುವಂತಾಯಿತು. ಈಗಾಗಲೇ ಟೀಂ ಇಂಡಿಯಾ ಟಿ-20 ಸರಣಿ ಕೂಡ ಕೈಚೆಲ್ಲಿದೆ.

ಆಸ್ಟ್ರೇಲಿಯಾ ಪರ ಜಂಪಾ ಮಾರಕ ಬೌಲಿಂಗ್​ ನಡೆಸಿ 3 ವಿಕೆಟ್​ ಪಡೆದುಕೊಂಡರೆ, ಕಮ್ಮಿನ್ಸ್​​, ರಿಚರ್ಡಸನ್​ ತಲಾ 2 ವಿಕೆಟ್​​ ಹಾಗೂ ಸ್ಟೋನಿಸ್​​, ನೇಥನ್​ ಲಯನ್​ 1 ವಿಕೆಟ್​ ಪಡೆದು ಮಿಂಚಿದರು.

Intro:Body:

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.