ನವದೆಹಲಿ: ಇಲ್ಲಿನ ಮುಂಡ್ಕಾ ಕೈಗಾರಿಕಾ ಪ್ರದೇಶದಲ್ಲಿರುವ ಎಲೆಕ್ಟ್ರಾನಿಕ್ ಸರಕುಗಳ ಗೋದಾಮಿನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದರಿಂದ, ಲಕ್ಷಾಂತರ ರೂ. ಮೌಲ್ಯದ ಸರಕುಗಳು ಸುಟ್ಟು ಬೂದಿಯಾಗಿವೆ.
ಗೋದಾಮಿನಲ್ಲಿ ಅಗ್ನಿ ಅವಘಡದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸವನ್ನು ಪ್ರಾರಂಭಿಸಿವೆ. ಸದ್ಯಕ್ಕೆ ಈ ಅವಘಡದಲ್ಲಿ ಯಾವುದೇ ಸಾವು -ನೋವು ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ.