ETV Bharat / bharat

ವಿಶ್ವ ಅಪ್ಪಂದಿರ ದಿನ: ನಿಮ್ಮ ತಂದೆಗೆ ಗಿಫ್ಟ್​​ ಕೊಡಬೇಕೇ, ಇಲ್ಲಿವೆ ಐಡಿಯಾಗಳು ನೋಡಿ.. - Dinner with his boy gang

ಅಪ್ಪ - ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ. ನಿಮ್ಮ ಪ್ರೀತಿಯ ಅಪ್ಪನಿಗೆ ಏನ್​ ಗಿಫ್ಟ್​ ಕೊಡಬೇಕು ಎಂದು ಗೊತ್ತಾಗುತ್ತಿಲ್ವಾ. ಇಲ್ಲಿವೆ ನೋಡಿ ಕೆಲವು ಐಡಿಯಾಗಳು..

ವಿಶ್ವ ಅಪ್ಪಂದಿರ ದಿನ
ವಿಶ್ವ ಅಪ್ಪಂದಿರ ದಿನ
author img

By

Published : Jun 21, 2020, 5:00 PM IST

ಇಂದು ವಿಶ್ವ ಅಪ್ಪಂದಿರ ದಿನ. ಅಪ್ಪ ಎಂದರೆ ಬದುಕು... ಅಪ್ಪ ಎಂದರೆ ಉಸಿರು... ಅಪ್ಪ ಜೊತೆಗಿದ್ದಾರೆ ಎಂದರೆ ಆ ಧೈರ್ಯವೇ ಬೇರೆ. ಪ್ರತಿಯೊಬ್ಬರಿಗೂ ತಂದೆಯೇ ಮೊದಲ ಹೀರೋ. ಇಂತ ಹೀರೋಗೆ ನಿಮಗೆ ಏನ್​ ಗಿಫ್ಟ್​​ ಕೊಡಬೇಕು ಅನ್ನೋದು ತಿಳಿಯುತ್ತಿಲ್ವಾ. ಹಾಗಾದ್ರೆ ನಾವಿಲ್ಲಿ ನಿಮಗೆ ಕೆಲವು ಇಡಿಯಾಗಳನ್ನು ನೀಡುತ್ತೇವೆ...

ತಂದೆಯ ನೆಚ್ಚಿನ ಚಟುವಟಿಕೆಗಳು:

ಪ್ರತಿಯೊಬ್ಬ ತಂದೆಯೂ ಒಂದೊಂದು ಹವ್ಯಾಸವನ್ನು ಹೊಂದಿರುತ್ತಾರೆ. ಆ ಹವ್ಯಾಸ ಅವರಿಗೆ ತುಂಬಾ ಇಷ್ಟವಾಗಿರುತ್ತದೆ. ಆದ್ರೆ ಇದರ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಈ ದಿನದಂದು ಅವರಿಗೆ ಇಷ್ಟವಾದ ಹವ್ಯಾಸಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವರಿಗೆ ಅವಕಾಶ ನೀಡಿ, ನೀವು ಅದನ್ನು ಆನಂದಿಸಿ.

ತಂದೆಯ ಸ್ನೇಹಿತರನ್ನು ಒಗ್ಗೂಡಿಸಿ ಡಿನ್ನರ್​ ಆಯೋಜಿಸಿ:

ನಿಮ್ಮ ತಂದೆಯ ಎಲ್ಲ ಸ್ನೇಹಿತರನ್ನು ಈ ದಿನದಂದು ಒಗ್ಗೂಡಿಸಿ, ಅವರ ನೆಚ್ಚಿನ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ ಭೋಜನ ಕೂಟ ಆಯೋಜಿಸುವ ಮೂಲಕ ಅಪ್ಪನನ್ನು ಆಶ್ಚರ್ಯಗೊಳಿಸಬಹುದು.

ಕುಟುಂಬ ಭೋಜನಾ:

ನಿಮ್ಮ ತಂದೆಗೆ ಪ್ರೀತಿ ಪಾತ್ರರಾದವರನ್ನು ಕರೆಸಿ ಜೊತೆಗೆ ಕುಟುಂಬದ ಸದಸ್ಯರೆಲ್ಲಾ ಈ ದಿನದಂದು ಒಟ್ಟಾಗಿ ಕೂತು ಭೋಜನ ಮಾಡಿ, ಕೆಲವು ಆಟಗಳನ್ನು ಆಡಿ ತಂದೆಯನ್ನು ಖುಷಿ ಪಡಿಸಿಬಹುದಲ್ಲವೇ.

ಸರೆಗಮಾ ಕಾರವಾನ್:

ನಿಮ್ಮ ತಂದೆಯೇನಾದ್ರೂ ಹಳೆಯ ಹಾಡುಗಳನ್ನು ಇಷ್ಟಪಡುವವರಾಗಿದ್ದರೇ, ರೇಡಿಯೋ, ಟಿವಿ, ಮೊಬೈಲ್​ ಮೂಲಕ ಹಾಡುಗಳನ್ನು ಹಾಕಿ ಅವರನ್ನು ಸಂತೋಷಗೊಳಿಸಿ. ಇಲ್ಲವೇ ನಿಮ್ಮ ತಂದೆಯ ಕೈಯಲ್ಲಿ ಹಾಡನ್ನು ಹಾಡಿಸಿ ನಕ್ಕು ನಲಿಯಿರಿ.

ಕೈಗಡಿಯಾರ:

ನಮ್ಮ ಅಪ್ಪ ಯಾವಾಗಲೂ ನಿಮಗೆ ಸಮಯದ ಮಹತ್ವದ ಬಗ್ಗೆ ಪಾಠ ಮಾಡುತ್ತಲೇ ಇರುತ್ತಿದ್ದರೇ, ಅವರಿಗೆ ಸೊಗಸಾದ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿ. ಪ್ರತಿನಿತ್ಯ ಅವರು ಸಮಯವನ್ನು ನೋಡಲು ಆದನ್ನು ನೋಡಿದಾಗ ನಿಮ್ಮ ಪ್ರೀತಿಯನ್ನು ನೆನೆಯುತ್ತಾರೆ.

ಫೋಟೋ ಆಲ್ಬಮ್ ಅಥವಾ ಕೈಬರಹದ ಕಾರ್ಡ್:

ನಿಮ್ಮ ತಂದೆಯ ಹಳೆಯ ಫೋಟೋಗಳನೆಲ್ಲಾ ಒಗ್ಗೂಡಿಸಿ ಒಂದು ಆಲ್ಬಮ್​ ಮಾಡಿ ಅದನ್ನು ನಿಮ್ಮ ತಂದೆಗೆ ಉಡುಗೊರೆಯಾಗಿ ನೀಡಿ. ಇಲ್ಲವೇ ನಿಮ್ಮ ಕೈಯಿಂದಲೇ ಸೊಗಸಾದ ಕಾರ್ಡ್​ನನ್ನು ಬರೆದು ಅದನ್ನು ಗಿಫ್ಟ್​ ಮಾಡಿ.

ಆರೋಗ್ಯಕರ ಉಡುಗೊರೆ ಹ್ಯಾಂಪರ್:

ನಮ್ಮ ಪೋಷಕರು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂಬ ಅಭಿಲಾಷೆ ನಿಮಗಿದ್ದರೇ, ನಿಮ್ಮ ತಂದೆಗೆ ಆರೋಗ್ಯಕರ ತಿನಿಸುಗಳನ್ನು ಉಡುಗೊರೆಯಾಗಿ ನೀಡಿ. ಉದಾಹರಣೆಗೆ-ಜೇನುತುಪ್ಪ, ಬೀಜಗಳು,ಪಾಸ್ತಾ,ಹಣ್ಣು ಸೇರಿದಂತೆ ಆರೋಗ್ಯಕರ ಆಹಾರವನ್ನು ಅವರಿಗೆ ಉಡುಗೊರೆಯಾಗಿ ನೀಡಬಹುದಾಗಿದೆ.

ಪುಸ್ತಕಗಳು:

ನಿಮ್ಮ ತಂದೆ ಹೆಚ್ಚು ಪುಸ್ತಕಗಳನ್ನು ಓದುತ್ತಾರೆ ಎಂದರೇ ಅವರಿಗೆ ಇಷ್ಟವಾದ ಲೇಖಕರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು ಒಳ್ಳೆಯದು.

ಮನೆಗೆ ತಂದೆ ಯಜಮಾನ. ಪ್ರೀತಿಗೆ ಅರಸ. ತನ್ನ ಕುಟುಂಬವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ತಂದೆಯದ್ದು. ಇದಕ್ಕೆ ತಾಯಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಬೆಂಬಲವಾಗಿ ನಿಂತು ತಂದೆಯ ಕೈಯನ್ನು ಬಲಪಡಿಸುತ್ತಾರೆ. ಇಂತಹ ಅರಸನಿಗೆ ನಾವು ಎಂತಹ ಉಡುಗೊರೆ ನೀಡಿದ್ರು ಅದು ಕಮ್ಮಿಯೇ ಎನ್ನಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.