ಧರ್ (ಮಧ್ಯಪ್ರದೇಶ): ಪುತ್ರನ 10ನೇ ತರಗತಿ ಪರೀಕ್ಷೆ ಹಿನ್ನೆಲೆ ತಂದೆವೋರ್ವ ಸೈಕಲ್ ಮೇಲೆ ಮಗನನ್ನು ಕೂರಿಸಿಕೊಂಡು 85 ಕಿಮೀ ಸಂಚರಿಸಿದ ಘಟನೆ ಮಧ್ಯಪ್ರದೇಶ ಧರ್ ಜಿಲ್ಲೆಯಲ್ಲಿ ನಡೆದಿದೆ.
ಧರ್ ಜಿಲ್ಲೆಯ ಮನವರ್ ಮೂಲದ ಶೋಭ್ರಮ್ ಎಂಬುವವರು ತನ್ನ ಮಗ ಆಶೀಶ್ ನನ್ನು ಸೈಕಲ್ ಮೇಲೆ ಪರೀಕ್ಷೆಗೆ ಕರೆದೊಯ್ದವರು. ಎಸ್ಎಸ್ಎಲ್ಸಿ ಸೆಪ್ಲಿಮೆಂಟರಿ ಪರೀಕ್ಷೆ ನಡೆಯುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಶೋಭ್ರಮ ಅವರು ತಮ್ಮ ಮಗನನ್ನು ಸೈಕಲ್ ಮೇಲೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದಾರೆ.
ಅಧ್ಯಯನ ಬಳಿಕ ನನ್ನ ಮಗ ಉನ್ನತ ಸ್ಥಾನದಲ್ಲಿರಬೇಕು. ಪರೀಕ್ಷೆಗೆ ಕರೆದುಕೊಂಡು ಬರಲು ನನ್ನ ಬಳಿ ಬೈಕ್ ಇರಲಿಲ್ಲ ಮತ್ತು ಲಾಕ್ಡೌನ್ ಹಿನ್ನೆಲೆ ಸಾರಿಗೆ ವಾಹನದ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಬೇರೆ ದಾರಿ ಇಲ್ಲದೆ ಸೈಕಲ್ ಮೇಲೆಯೇ ಬಂದೆವು. ಕೂಲಿ ಕೆಲಸ ಮಾಡಿ ಮಗನ ಪರೀಕ್ಷಾ ಫಾರ್ಮ್ ತುಂಬಿದ್ದೆ. ನಾನು ರೈತ ಆದ್ರೆ ಕೂಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ ಶೋಭ್ರಮ್.
ಮಂಗಳವಾರ ಗಣಿತ ಪರೀಕ್ಷೆಗೆ ಆಶೀಶ್ ಹಾಜರಾಗಿ ಪರೀಕ್ಷೆ ಬರೆದರು. ಆದ್ರೆ ಸೋಮವಾರ ಸಂಜೆನೇ ಸೈಕಲ್ ಮೇಲೆ ಇವರು ತಮ್ಮ ಊರು ಬಿಟ್ಟು, ಮಂಢವ್ನಲ್ಲಿ ರಾತ್ರಿ ಕಳೆದು ಬಳಿಕ ಧರ್ಗೆ ಆಗಮಿಸಿದ್ದರು. ಪರೀಕ್ಷೆ ಹಿನ್ನೆಲೆ ಧರ್ನಲ್ಲಿ ಮೂರು ದಿನ ಉಳಿದುಕೊಳ್ಳುವುದರಿಂದ ಮೂರು ದಿನಕ್ಕಾಗುವಷ್ಟು ಆಹಾರವನ್ನು ತಂದಿದ್ದಾರೆ.
ನನಗೆ ಆಫೀಸರ್ ಆಗಬೇಕೆಂಬ ಕನಸಿದೆ. ಮಂಗಳವಾರ ಗಣಿತ, ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆದಿರುವೆ. ನಾನು ಕೂಡ ಒಂದಷ್ಟು ದೂರು ಸೈಕಲ್ ಓಡಿಸಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.
ತಹಶೀಲ್ದಾರ್ ಅಥವಾ ಬೇರೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರೆ ಅವರಿಗೆ ಸಹಾಯ ಮಾಡಬಹುದಾಗಿತ್ತು ಎಂದು ಧರ್ ಡಿಸಿ ಅಲೋಕ್ ಸಿಂಗ್ ಹೇಳಿದ್ದಾರೆ.